ಶಬರಿಮಲೆ:ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನ ಲೇಪಿತ ಚಾವಣಿ ಸೋರುತ್ತಿರುವುದು ಇದೀಗ ಬೆಳಕಿಗೆ ಬಂದಿದೆ. ಕಳೆದ ತಿಂಗಳು ನಡೆದಿರುವ ಈ ಘಟನೆ ಈಗ ಬಹಿರಂಗಗೊಂಡಿದೆ. ಈ ಚಾವಣಿ ಸೋರುತ್ತಿರುವುದು ಭಾರಿ ಸುದ್ದಿಯಾಗುತ್ತಿರುವುದಕ್ಕೆ ಕಾರಣ, ಇದನ್ನು ನೀಡಿರುವುದು ಮದ್ಯದ ದೊರೆ ವಿಜಯ ಮಲ್ಯ ಎನ್ನುವ ಕಾರಣಕ್ಕೆ!
ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಅಪಾರ ಮಟ್ಟದಲ್ಲಿ ಹಣದ ಕೊರತೆಯಿಂದ ನಷ್ಟದಲ್ಲಿ ನಡೆಯುತ್ತಿರುವಾಗಲೂ ವಿಜಯ್ ಮಲ್ಯ ವಿವಿಧ ದೇಗುಲಗಳಿಗೆ ದೇಣಿಗೆ ನೀಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ದೇವರಿಗೆ 80 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ಬಾಗಿಲುಗಳನ್ನು ಸಹ ದೇಣಿಗೆ ನೀಡಿದ್ದರು. 1998ರ ಸಮಯದಲ್ಲಿ ಬರೋಬ್ಬರಿ 18 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿನ್ನ ಲೇಪಿತ ಚಾವಣಿ ನಿರ್ಮಿಸಲು ದೇಣಿಗೆ ನೀಡಿದ್ದರು.
ವಿಜಯ್ ಮಲ್ಯ ಈ ಉದ್ದೇಶಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ದಾನ ಮಾಡಿದ್ದರು. ಚಿನ್ನವನ್ನು ಚಾವಣಿಗೆ ಲೇಪಿಸಲು 18 ಕೋಟಿ ರೂಪಾಯಿ ವೆಚ್ಚವಾಗಿತ್ತು ಎಂದು ವರದಿಯಾಗಿದೆ.
ಕಳೆದ ಜುಲೈ16 ರಂದು ದೇವಸ್ಥಾನವು ತಿಂಗಳ ಪೂಜೆಗಾಗಿ ತೆರೆದಾಗ ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡುಬಂದಿತ್ತು. ನಂತರ ಅದರ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆಯಾಗಿರುವುದು ಪತ್ತೆಯಾಗಿದೆ. ದುರಸ್ತಿ ಕಾರ್ಯದ ವೆಚ್ಚವನ್ನು ಟಿಡಿಬಿ ಭರಿಸಲಿದ್ದು, ಕೆಲವು ಭಕ್ತರು ಚಿನ್ನವನ್ನು ದುರಸ್ತಿಗೆ ನೀಡಲು ಮುಂದೆ ಬಂದರೆ ನಾವು ಸ್ವೀಕರಿಸುತ್ತೇವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ.
ದೇವಸ್ಥಾನವನ್ನು ಮುಚ್ಚಿದಾಗ ಮಾತ್ರ ನಾವು ದುರಸ್ತಿ ಕಾರ್ಯಗಳನ್ನು ನಡೆಸಬಹುದು. ಆದರೆ, 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಕಾಮಗಾರಿ ನಡೆಸಲು ತಂತ್ರಿಗಳಿಂದ ಅನುಮತಿ ಪಡೆದಿದ್ದೇವೆ’ ಎಂದು ತಿಳಿಸಿದ್ದಾರೆ.
ದೇವಸ್ವಂ ಬೋರ್ಡ್ ಅಧಿಕಾರಿಗಳು ತಂತ್ರಿ ಕಂಡರಾರು ರಾಜೀವರನ್ನು ಭೇಟಿ ಮಾಡಿ ದುರಸ್ತಿ ಕಾರ್ಯ ನಡೆಸಲು ಅನುಮತಿ ನೀಡಿದ್ದಾರೆ. ಆಗಸ್ಟ್ 3 ರಂದು ದೇವಾಲಯದ ವಾಸ್ತುಶಾಸ್ತ್ರದ ತಜ್ಞರ ತಂಡವು ಮೇಲ್ಚಾವಣಿಯನ್ನು ಪರಿಶೀಲಿಸುತ್ತಿದೆ. ಅವರ ಸಲಹೆಯ ಮೇರೆಗೆ ದುರಸ್ತಿ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಮಾಹಿತಿ ನೀಡಿದೆ.(ಏಜೆನ್ಸೀಸ್​)
ವಿಜಯಪುರದ ಬಬಲೇಶ್ವರದಲ್ಲಿ ಮನೆಗೆ ನುಗ್ಗುತ್ತಿವೆ ವಿಷ ಜಂತುಗಳು: ಮಳೆಯಿಂದ ಬದುಕು ಹೈರಾಣ

ಕಾಂಗ್ರೆಸ್​ ನಾಯಕಿ ನವ್ಯಶ್ರೀ ಪ್ರಕರಣಕ್ಕೆ ಟ್ವಿಸ್ಟ್​: ಬಂಧನದ ಭೀತಿಯಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 18 =
Remember me
