ಶಿಮ್ಲಾ:ಪ್ರಧಾನಿ ಮೋದಿಯವರು ರಾಜಕೀಯದಲ್ಲಷ್ಟೇ ಅಲ್ಲದೇ ಅಡುಗೆಯಲ್ಲಿಯೂ ಮುಂದೆಯೇ. ಆಹಾರ ಪ್ರಿಯರಾಗಿರುವ ಮೋದಿಯವರು ಖುದ್ದು ಅಡುಗೆ ತಯಾರಿಸುವಲ್ಲಿಯೂ ಖ್ಯಾತಿ ಪಡೆದಿದ್ದಾರೆ. ಇದಕ್ಕೆ ನಿದರ್ಶನ ಎಂದರೆ ಬಿಜೆಪಿ ಮುಖಂಡರೊಬ್ಬರ ಪತ್ನಿ ಮೋದಿಯವರ ಅಡುಗೆ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.
ಶಿಮ್ಲಾದ ಬಿಜೆಪಿ ನಾಯಕ ದೀಪಕ್ ಶರ್ಮಾ ಅವರು ತಮ್ಮ ಪತ್ನಿ ಸೀಮಾ ಶರ್ಮಾಗೆ ಮೋದಿಯವರು ಅಡುಗೆ ಪಾಕ ವಿಧಾನ ಕಲಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುನ್ನ ಅಂದರೆ 1997ರಲ್ಲಿ ಶಿಮ್ಲಾ ಭೇಟಿಗೆ ನೀಡಿದ್ದರು. ಆ ಸಮಯದಲ್ಲಿ ದೀಪಕ್​ ಅವರ ಮನೆಗೆ ಹೋಗಿದ್ದರು. ಅದು ನವರಾತ್ರಿಯ ಸಮಯವಾಗಿತ್ತು. ಮನೆಯಲ್ಲಿ ‘ಸಾಬುದಾನಿ ಖಿಚಡಿ’ (ಸಬ್ಬಕ್ಕಿ ಖಿಚಡಿ) ಮಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಪತ್ನಿ ಮಾಡಿದ ಖಿಚಡಿ ಅಷ್ಟು ಚೆನ್ನಾಗಿ ಇರಲಿಲ್ಲ. ಆಗ ಖುದ್ದು ಮೋದಿಯವರೇ ಪಾಕ ವಿಧಾನ ಹೇಳಿಕೊಟ್ಟರು. ನಂತರ ಆ ಖಿಚಡಿ ತುಂಬಾ ಟೇಸ್ಟಿಯಾಗಿ ಬಂದಿತ್ತು. ಅಲ್ಲಿಂದ ಅದೇ ಮಾದರಿಯಲ್ಲಿ ಇಂದಿಗೂ ಪತ್ನಿ ಸೀಮಾ ಖಿಚಡಿ ಮಾಡುತ್ತಾಳೆ ಎಂದಿದ್ದಾರೆ ದೀಪಕ್​.
ಮಂಗಳವಾರ ಶಿಮ್ಲಾ ಭೇಟಿ ನೀಡಿದ್ದರು ಮೋದಿ. ಆ ಸಮಯದಲ್ಲಿ ಹಿಂದಿನ ದಿನಗಳನ್ನು ನೆನಪಿಸಿಕೊಂಡರು ದೀಪಕ್​ ಶರ್ಮ.
VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

ಪತಿಯ ವಿರುದ್ಧ ಲೇಖನ ಬರೆದು 78 ಕೋಟಿ ರೂ. ಕಳೆದುಕೊಂಡ ನಟಿ: ಕಾನೂನು ಸಮರ ಗೆದ್ದ ಖ್ಯಾತ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
