ಮುಂಬೈ:ಸಚಿನ್​ ಜೋಶಿ… 36 ವರ್ಷದ ಈ ಯುವ ನಟ ಸಿನಿ ಪ್ರಿಯರಿಗೆ ಅದರಲ್ಲಿಯೂ ಬಾಲಿವುಡ್​, ಟಾಲಿವುಡ್​ ಜಗತ್ತಿನಲ್ಲಿ ಬಹುಪರಿಚಿತ. ಆದರೆ ಈ ನಟನೀಗ ಭಾರಿ ಸದ್ದು ಮಾಡುತ್ತಿದ್ದಾರೆ. ಈ ನಟ ಈಗ ಒಂದಲ್ಲ… ಎರಡಲ್ಲ…. ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿಗಳ ಒಡೆಯ!
ಬಿಡಿ. ಇಷ್ಟು ಮೊತ್ತದಲ್ಲಿ ಎಷ್ಟು ಸೊನ್ನೆ ಇರುತ್ತದೆ ಎಂದು ಸಾಮಾನ್ಯ ಜನರಿಗೆ ಗೊತ್ತಿರುವುದೂ ಕಷ್ಟವೇ ಸರಿ. ಹಾಗಿದ್ದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ಬೃಹತ್​ ಮೊತ್ತ ಗಳಿಸಿದ್ದು ಹೇಗೆ ಎನ್ನುವುದೇ ಈಗಿರುವ ಪ್ರಶ್ನೆ. ಕೇವಲ ಸಿನಿಮಾದಲ್ಲಿನ ನಟನೆಗಾಗಿಯಂತೂ ಅಲ್ಲವೇ ಅಲ್ಲ ಎನ್ನುವುದು ತಿಳಿದದ್ದೇ ಬಿಡಿ.
ಅವರು ಹೇಗೆ ಇಷ್ಟು ಹಣ ಮಾಡಿದ್ದಾರೆ ಎನ್ನುವ ಮೊದಲು ಒಂದು ಕುತೂಹಲದ ಮಾಹಿತಿ ಈ ನಟನ ಬಗ್ಗೆ ತಿಳಿದುಕೊಳ್ಳಬೇಕು. ಅದೇನೆಂದರೆ, ಈ ನಟ ಸ್ಟಾರ್‌ಡಸ್ಟ್ ಪ್ರಶಸ್ತಿ ಪುರಸ್ಕೃತ. ಈ ಪ್ರಶಸ್ತಿಯನ್ನು ಸಮಾಜದಲ್ಲಿ ಮಹತ್ವದ ಬದಲಾವಣೆ ತರುವ ಪ್ರಸಿದ್ಧ ವ್ಯಕ್ತಿಗಳಿಗೆ ನೀಡಲಾಗುತ್ತದೆ!
ಇದನ್ನು ಸ್ವೀಕರಿಸುವ ಸಮಯದಲ್ಲಿ ಸಚಿನ್​, “ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಮಾತ್ರ ಇಂಥ ಪ್ರಶಸ್ತಿಗಳು ಲಭಿಸಲು ಸಾಧ್ಯ. ಇದೇ ನನ್ನ ಯಶಸ್ಸಿನ ಮಂತ್ರ. ಇಂಥ ಪ್ರಶಸ್ತಿಗಳು ಸಮಾಜಕ್ಕೆ ದುಡಿಯಲು, ಉತ್ತಮ ಕೆಲಸ ಮಾಡಲು ಮಾತ್ರ ನಿಮ್ಮನ್ನು ಪ್ರೋತ್ಸಾಹಿಸುತ್ತವೆ ಎಂದು ನುಡಿದಿದ್ದರು.
ಆದರೆ ಈ ಸ್ಟಾರ್​ಡಸ್ಟ್​ ಪ್ರಶಸ್ತಿ ಪುರಸ್ಕೃತ ಯುವನಟ, ಸಾವಿರಾರು ಕೋಟಿ ಸಂಪತ್ತಿನ ಒಡೆಯ ಇದೀಗ ಪೊಲೀಸರ ಅತಿಥಿ! ಅದಕ್ಕೆ ಕಾರಣ ಬೃಹತ್​ ಗುಟ್ಕಾ ಜಾಲ. ಅಕ್ರಮ ಗುಟ್ಕಾ ದಂಧೆಯಿಂದಾಗಿ ಇಷ್ಟೊಂದು ಸಂಪಾದನೆ ಗಳಿಸಿರುವ ಆರೋಪ ಹೊತ್ತಿದ್ದಾರೆ ಸಚಿನ್​.
ಗುಟ್ಕಾ ಕಿಂಗ್​ ಎಂದೇ ಪ್ರಸಿದ್ಧಿಪಡೆದಿರುವ ತಂದೆಯವರು ಗುಟ್ಕಾದ ಅಕ್ರಮ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರೀಗ ಮಾಹಿತಿ ಸಿಕ್ಕಿದ್ದು, ತಂದೆಯ ಜತೆ, ಈ ಅಕ್ರಮದಲ್ಲಿ ಭಾಗಿಯಾಗಿರುವ ಮಗ ಸಚಿನ್​ನನ್ನೂ ಬಂಧಿಸಿದ್ದಾರೆ.
ಗುಟ್ಕಾ ಕೇಸ್​ ಬಗ್ಗೆ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ:ಸಿನಿ ರಂಗದಲ್ಲಿ ಮತ್ತೊಂದು ಸಂಚಲನ- ಡ್ರಗ್ಸ್​ ಬೆನ್ನಲ್ಲೇ ಸುತ್ತಿಕೊಂಡ್ತು ಗುಟ್ಕಾ: ನಟ ಅರೆಸ್ಟ್​
ಗುಟ್ಕಾ ಜಾಲದೊಳಗೆ ಸಿಲುಕಿ ಇದೀಗ ಬಂಧನಕ್ಕೆ ಒಳಗಾಗಿರುವ ಸಚಿನ್​ ಕುರಿತ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ…ಇವರು ಹುಟ್ಟಿದ್ದ 1984ರ ಆಗಸ್ಟ್​ 7ರಂದು ಅಂದರೆ ಎರಡು ತಿಂಗಳ ಹಿಂದಷ್ಟೇ 36 ವರ್ಷ ಪೂರೈಸಿದ್ದಾರೆ. ಈ ನಟನಿಗೆ 2012ರಲ್ಲಿ ಊರ್ವಶಿ ಶರ್ಮಾರ (ಹೆಸರನ್ನು ರೈನಾ ಜೋಶಿ ಎಂದು ಬದಲಾಯಿಸಿದ್ದಾರೆ) ಜತೆ ಮದುವೆಯಾಗಿದ್ದು, ಸಮೈರಾ ಎಂಬ ಮಗಳು ಇದ್ದಾಳೆ.
ಸಚಿನ್ ವಿಶ್ವದ ಅಗ್ರ 500 ಬಿಲಿಯನೇರ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ. ಈ ಐಷಾರಾಮಿ ನಟನ ಬಳಿ ಅವರಷ್ಟೇ ಐಷಾರಾಮಿಯಾಗಿರುವ ಲಂಬೋರ್ಗಿನಿ, ಬಿಎಂಡಬ್ಲ್ಯು ಐ 8, ಬೆಂಟ್ಲೆ ಕಾಂಟಿನೆಂಟಲ್ ಜಿಟಿ, ಆಡಿ 8… ಹೀಗೆ ದೊಡ್ಡ ದೊಡ್ಡ ಮೊತ್ತದ ಅವೆಷ್ಟೋ ಕಾರುಗಳಿವೆ.
ಮದ್ಯದ ದೊರೆ ವಿಜಯ ಮಲ್ಯ ಅವರ ಅಭಿಮಾನಿಯಾಗಿರುವ ಸಚಿನ್​ ಗೋವಾದ ಪ್ರಸಿದ್ಧ ಕಿಂಗ್ಸ್ ಬಿಯರ್ ಒಡೆಯ.
ತಮ್ಮ ಚಲನಚಿತ್ರ ವೃತ್ತಿಜೀವನವನ್ನು 2002ರಿಂದ ತೆಲುಗು ಚಲನಚಿತ್ರ ಮೌನಮೆಲನೊಯಿ ಮೂಲಕ ಪ್ರಾರಂಭಿಸಿದ್ದಾರೆ. ನಿನು ಚುಡಕಾ ನೆನುಂಡಲೆನು (2002) ಮತ್ತು ಓರೆ ಪಾಂಡು (2005) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಸನ್ನಿ ಲಿಯಾನ್​ ಜತೆ ಕೆಲ ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
2011ರಲ್ಲಿ ಅಜಾನ್​ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಟನ ಜತೆಗೆ ಸಹ-ನಿರ್ಮಾಪಕ ಕೂಡ. ಆಶಿಕಿ 2 ಚಿತ್ರದ ರಿಮೇಕ್ ಮೂಲಕ ಸಚಿನ್​ ಟಾಲಿವುಡ್‌ಗೆ ಮರಳಿದರು. ನಂತರ ಹಿಂದಿ ಆವೃತ್ತಿಯಲ್ಲಿ ಆದಿತ್ಯ ರಾಯ್ ಕಪೂರ್ ನಿರ್ವಹಿಸಿದ ಪಾತ್ರವನ್ನು ನಿರ್ವಹಿಸಿದರು.
ಚಲನಚಿತ್ರಗಳಲ್ಲದೆ, ಅವರು ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ‘ಪೆಟಾ’ ಸ್ವಯಂ ಸೇವಾ ಸಂಸ್ಥೆ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಬಿಗ್ ಬ್ರದರ್ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಪರಿಸರ, ಆರೋಗ್ಯ ರಕ್ಷಣೆ, ಬಡತನ ನಿವಾರಣೆ, ಶಿಕ್ಷಣ ಮತ್ತು ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಸಾಮಾಜಿಕ ಹೋರಾಟ ಮಾಡುತ್ತಿದ್ದರಂತೆ.
ಕೊನೆಯದಾಗಿ, ಅವರು ತಮ್ಮ ಹೆಸರು ಸಚಿನ್​ (SACHIN) ಬದಲು ಸಚ್ಚಿನ್​ (SACHIIN) ಎಂದು ಬರೆದುಕೊಳ್ಳುತ್ತಾರೆ. ಸಂಖ್ಯಾಶಾಸ್ತ್ರದ ಮೇಲೆ ಅಪಾರ ನಂಬಿಕೆ ಇಟ್ಟಿರುವ ಕಾರಣ ಹೀಗೆ ಇರಬಹುದು ಎನ್ನಲಾಗುತ್ತಿದೆ.
ಹಸುಗಳೊಂದಿಗೆ ಈತ ಮಾಡುತ್ತಿದ್ದುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ; ಬಂಧನ

ಬಾಲಕಿ ಮೇಲೆ ಗ್ಯಾಂಗ್​ರೇಪ್​, ಕೊಲೆ- ಕಾಮುಕರಿಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​

ಟ್ರಂಪ್​ ಪುತ್ರನಿಗೂ ಕರೊನಾ: ಗುಣವಾದ ಮೇಲೆ ಅಮ್ಮನಿಂದ ಬಹಿರಂಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 16 =
Remember me
