ನವದೆಹಲಿ:ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಬಾಸ್‌ ಸಂಬಳವನ್ನು ಹೆಚ್ಚು ಮಾಡಿಲ್ಲ ಎಂಬ ಸಿಟ್ಟಿನಿಂದ ನೌಕರನೊಬ್ಬ ಕಂಪನಿಯಲ್ಲಿದ್ದ 10 ಲಕ್ಷ ರೂಪಾಯಿಗಳನ್ನು ಎಗರಿಸಿ ಹಾಕಿಕೊಂಡು ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ವಿಜಯ್ ಪ್ರತಾಪ್ ದೀಕ್ಷಿತ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ವಿಚಿತ್ರ ಎಂದರೆ ತನ್ನ ಮೇಲೆ ಎಲ್ಲಿ ಕೇಸು ಬಂದುಬಿಡುತ್ತದೋ ಎನ್ನುವ ಕಾರಣಕ್ಕೆ ತಾನೇ ಪೊಲೀಸರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ಕಳುವಾಗಿರುವ ಬಗ್ಗೆ ದೂರು ಕೊಟ್ಟು ಸಿಕ್ಕಿಬಿದ್ದಿದ್ದಾನೆ.
ಈತನ ದೂರಿನ ಆಧಾರದ ಮೇಲೆ ಪೊಲೀಸರು ಕೇಸು ದಾಖಲು ಮಾಡಿಕೊಂಡಿದ್ದರು. ತಾನು ಬಾಸ್‌ನ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅದನ್ನು ಕೆಲ ವ್ಯಕ್ತಿಗಳು ಅಪಹರಿಸಿಕೊಂಡು ಹೋಗಿದುದಾಗಿ ದೀಕ್ಷಿತ್‌ ದೂರು ದಾಖಲು ಮಾಡಿದ್ದ.
ಇದನ್ನೂ ಓದಿ:ಎಚ್1ಎನ್1 ತಗ್ಗಿಸಿದ ಕರೊನಾ; ಲಾಕ್​ಡೌನ್, ಕೋವಿಡ್ ಮಾರ್ಗಸೂಚಿಯೂ ಕಾರಣ?
ಅವನು ಪೊಲೀಸರಿಗೆ ಹೇಳಿದ್ದು ಏನೆಂದರೆ:ನನ್ನ ಬಾಸ್‌ ನನಗೆ ಕಂಪನಿಯ ವ್ಯವಸ್ಥಾಪಕ ರಮೇಶ್ ಭಾಟಿಯಾ ಅವರಿಗೆ ನೀಡಲು ಎರಡು ಲಕ್ಷ ರೂಪಾಯಿ ನಗದು ಹಾಗೂ 10 ಲಕ್ಷ ರೂಪಾಯಿಗಳ ಚೆಕ್‌ ನೀಡಿದ್ದರು. 10 ಲಕ್ಷ ರೂಪಾಯಿಗಳನ್ನು ಕ್ಯಾಷ್‌ ಮಾಡಿಕೊಂಡು ಭಾಟಿಯಾ ಅವರಿಗೆ ನೀಡಲು ಹೋಗುತ್ತಿದ್ದೆ. ಆ ಸಮಯದಲ್ಲಿ ಬೈಕ್‌ನಿಂದ ಬಂದಿದ್ದ ದುಷ್ಕರ್ಮಿಗಳು ಹಣವನ್ನು ಹಾರಿಸಿಕೊಂಡು ಹೋಗಿದ್ದಾರೆ ಎಂದು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದ ದೀಕ್ಷಿತ್‌.ಈ ಬಗ್ಗೆ ದೂರು ದಾಖಲು ಮಾಡಿಕೊಂಡಿದ್ದ ಪೊಲೀಸರು ಬಾಸ್‌ ನಿತಿನ್‌ ಅವರಲ್ಲಿ ಈ ಬಗ್ಗೆ ವಿಚಾರಿಸಿದ್ದರು. ಆದರೆ ಅವರು ತಾವು ಆ ರೀತಿ ಈತಕ ಕೈಯಲ್ಲಿ ಹಣ ನೀಡಿಯೇ ಇಲ್ಲ ಎಂದರು.
ಇದರಿಂದ ಸಂದೇಹಗೊಂಡ ಪೊಲೀಸರು ತಮ್ಮದೇ ರೀತಿಯಲ್ಲಿ ವಿಚಾರಣೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾನೆ ಆರೋಪಿ. ನಾನು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಸಂಬಳ ಹೆಚ್ಚು ಮಾಡಲಿಲ್ಲ. ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲರ ಮುಂದೆ ಕೆನ್ನೆಗೆ ಹೊಡೆದಿದ್ದರು. ಈ ಸಿಟ್ಟನ್ನು ತೀರಿಸಿಕೊಳ್ಳುವ ಸಲುವಾಗಿ 10 ಲಕ್ಷ ರೂಪಾಯಿ ಅವರ ಛೇಂಬರ್‌ನಿಂದ ಕಳುವು ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಅಮ್ಮನ ಕದ್ದೊಯ್ದ ಗೋಕಳ್ಳರು- ವಾಹನ ಹಿಂಬಾಲಿಸಿದ ಕರು- ಸಿಸಿಟಿಯಲ್ಲಿ ವಿಡಿಯೋ ಸೆರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − twelve =
Remember me
