ಲಂಡನ್​:ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪರವಾಗಿ ವಾದ ಮಂಡಿಸುತ್ತಿರುವ, ಮಾಜಿ ಸಾಲಿಸಿಟರ್‌ ಜನರಲ್‌, ಹಿರಿಯ ವಕೀಲ ಹರೀಶ್​ ಸಾಳ್ವೆ ಅವರು ಇಂದು ಎರಡನೆಯ ಬಾರಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
65 ವರ್ಷದ ಹರೀಶ್​ ಅವರು ಲಂಡನ್‌ ಮೂಲದ ಕಲಾವಿದೆ ಕ್ಯಾರೊಲೀನ್‌ ಬ್ರೊಸ್ಸಾರ್ಡ್‌ ಅವರನ್ನು ಲಂಡನ್​ನ ಚರ್ಚ್​ನಲ್ಲಿ ಇಂದು ಮದುವೆಯಾಗಿದ್ದಾರೆ.
ಕಳೆದ ಜೂನ್‌ನಲ್ಲಿ ಪತ್ನಿ ಮೀನಾಕ್ಷಿ ಅವರಿಗೆ ವಿಚ್ಛೇದನ ನೀಡಿರುವ ಸಾಳ್ವೆ ಅವರು, ತಮ್ಮ ದಾಂಪತ್ಯದ ಎರಡನೇ ಇನ್ನಿಂಗ್ಸ್​ ಶುರು ಮಾಡಿದ್ದಾರೆ. ಕರೊನಾ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ವಿವಾಹಕ್ಕೆ ಕೇವಲ 15 ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗಿತ್ತು. ಸರಳ ಸಮಾರಂಭದಲ್ಲಿ ಮದುವೆ ಏರ್ಪಟ್ಟಿದೆ.
ಸಾಳ್ವೆ ಅವರಿಗೆ ಇದಾಗಲೇ ಮೊದಲ ದಾಂಪತ್ಯದಿಂದ ಸಾಕ್ಷಿ (37) ಹಾಗೂ ಸಾನಿಯಾ (33) ಎಂಬ ಹೆಣ್ಣುಮಕ್ಕಳಿದ್ದು, ಅವರ ನೂತನ ಪತ್ನಿ ಕ್ಯಾರೊಲೀನ್​ ಅವರಿಗೆ 18 ವರ್ಷದ ಮಗಳಿದ್ದಾಳೆ.
ಲಂಡನ್​ನಲ್ಲಿ ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಪರಿಚಿತರಾಗಿದ್ದಾರೆ. ಬ್ರಿಟನ್​ಲ್ಲಿ ಜನಿಸಿರುವ ಕ್ಯಾರೋಲಿನ್ ಅವರಿಗೆ ತಮ್ಮಂತೆಯೇ ಕಲೆ, ರಂಗಭೂಮಿ ಹಾಗೂ ಶಾಸ್ತ್ರೀಯ ಸಂಗೀತದ ಬಗ್ಗೆ ಅಭಿರುಚಿ ಇದೆ. ಇದೇ ಕಾರಣಕ್ಕೆ ಆಕೆಯನ್ನು ವರಿಸಿರುವುದಾಗಿ ಸಾಳ್ವೆ ಹೇಳಿದ್ದಾರೆ.
ಇದನ್ನೂ ಓದಿ:ಈ ಏಡಿ ಅಪ್ಪಿತಪ್ಪಿ ತಲೆಯ ಮೇಲೆ ಬಿದ್ದರೆ ಅಷ್ಟೇ..!
ಭಾರತದ ಮಾಜಿ ಸಾಲಿಸಿಟರ್ ಜನರಲ್ ಆಗಿರುವ ಹರೀಶ್ ಸಾಳ್ವೆ, ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್​ಕ್ವೀನ್ಸ್ ಕೌನ್ಸೆಲ್ ಆಗಿ ನೇಮಕವಾಗಿದ್ದಾರೆ. ಕುಲಭೂಷಣ್‌ ಜಾಧವ್‌ ನೇಣುಶಿಕ್ಷೆ ತಪ್ಪಿಸಲು ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇವರು ವಾದ ಮಂಡಿಸುತ್ತಿದ್ದಾರೆ.
ಇಷ್ಟೇ ಅಲ್ಲದೇ ಹೈ ಪ್ರೊಫೈಲ್​ ಕೇಸ್​ಗಳಾದ ವೊಡಾಫೋನ್​, ಐಟಿಸಿ ಹೋಟೆಲ್ಸ್​, ಮುಖೇಶ್​ ಅಂಬಾನಿ, ರತನ್​ ಟಾಟಾ ಸೇರಿದಂತೆ ಸಹಸ್ರಾರು ಮಹತ್ವದ ಕೇಸ್​ಗಳಲ್ಲಿ ಇವರು ವಾದಿಸಿದ್ದಾರೆ. ಇವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿದೆ.
ಗಂಡ ವಿಚಾರಣೆಗೆ ಬರದೇ ಡಿವೋರ್ಸ್​ ಅರ್ಜಿ ವಜಾ ಆದ್ರೆ ಮತ್ತೆ ಹಾಕ್ಬೋದಾ?

ಬಡ್ತಿಯಲ್ಲಿನ ಅಸಮಾಧಾನ? ಐಪಿಎಸ್​ ಅಧಿಕಾರಿ ದಿಢೀರ್​ ರಾಜೀನಾಮೆ

ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 7 =
Remember me
