ಮುಂಬೈ:ನೇಣು ಬಿಗಿದುಕೊಂಡು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿರುವ ಹಿಂದಿ ಕಿರುತೆರೆ ನಟ ಸಮೀರ್‌ ಶರ್ಮಾ. ಅವರು ಕೊನೆಯದಾಗಿ ಸುಶಾಂತ್‌ ಸಿಂಗ್‌ ಅವರ ಕುರಿತಾಗಿ ಬರೆದಿದ್ದು, ಈಗ ಇವರ ಸಾವಿನ ಬಗ್ಗೆಯೂ ಅನೇಕ ಸಂದೇಹಗಳು ಹುಟ್ಟುಹಾಕಿವೆ.
44 ವರ್ಷಗಳ ಸಮೀರ್‌ ಶರ್ಮಾ ನಿನ್ನೆ ರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ದೇಹ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಎರಡು ದಿನಗಳ ಮುಂಚೆಯೇ ಅವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅವರ ಇನ್‌ಸ್ಟಾಗ್ರಾಮ್‌ ಪರಿಶೀಲಿಸಿದಾಗ ಕೊನೆಯದಾಗಿ ಅವರು ಬರೆದಿರುವುದು ಮಾನಸಿಕ ಆರೋಗ್ಯದ ಕುರಿತು. ಮಾನಸಿಕ ಖಿನ್ನತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೆಲವು ಸಾಲುಗಳನ್ನು ಹಂಚಿಕೊಂಡಿದ್ದ ಸಮೀರ್‌ ‘ಸುಶಾಂತ್‌ ಸಿಂಗ್ ಬಗ್ಗೆ ಪ್ರೀತಿ ಇದ್ದರೆ ಇದನ್ನು ಓದಿ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ನಿಮ್ಮನ್ನು ನೀವೇ ಕೊಲ್ಲುವುದರ ಅರ್ಥ ನಿಮಗೆ ಗೊತ್ತೇ..? ಅದನ್ನು ಊಹಿಸಲೂ ಬೇಡಿ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಡಿಪ್ರೆಷನ್‌ನಿಂದ ಬಳಲುವ ವ್ಯಕ್ತಿಯ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಏನಿದು ಪ್ರಕರಣ:ಕಿರುತೆರೆಯ ಮತ್ತೊಬ್ಬ ಪ್ರಖ್ಯಾತ ನಟ ಆತ್ಮಹತ್ಯೆ- ಕೊಳೆತ ಸ್ಥಿತಿಯಲ್ಲಿ ಶವ!
ಒಂದು ಕ್ಷಣವೂ ಆತ ಹೇಡಿ ಎಂದು ಯೋಚಿಸಬೇಡಿ. ಆತ ಆ ರೀತಿ ಮಾಡಿಕೊಂಡಿರುವುದಕ್ಕೆ ಕಾರಣಗಳು ಹಲವಾರು ಇರಬಹುದು. ಸಾಮಾಜಿಕ, ಆರ್ಥಿಕ ಅಥವಾ ಇನ್ಯಾವುದೇ ಒತ್ತಡಗಳ ಹೊರತಾಗಿಯೂ ಬೇರೆ ಕಾರಣ ಇರಬಹುದು. ಆತ್ಮಹತ್ಯೆ ಮಾಡಿಕೊಳ್ಳುವುದು ಅಸಹನೀಯ ನೋವನ್ನು ಉಂಟು ಮಾಡುತ್ತದೆ, ಈ ನೋವು ಹೇಗಿರುತ್ತದೆ ಎಂದು ಅದನ್ನು ಸಂಪೂರ್ಣವಾಗಿ ವಿವರಿಸಲಾಗದ್ದು ಎಂದು ಬರೆದಿದ್ದಾರೆ.
ಸಮುದ್ರದ ಫೋಟೋವೊಂದನ್ನು ಸಮೀರ್ ಕೊನೆಯದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಸಮುದ್ರ, ಸಮುದ್ರ ಕಿನಾರೆ, ಮುಂಬೈ ನಗರ ಹೀಗೆ ಇಂತಹುದೇ ಫೋಟೋ ಶೇರ್ ಮಾಡಿಕೊಂಡಿದ್ದಾರೆ ಅವರು.
ನಾನು ನನ್ನ ಚಿತೆಯನ್ನು ಮಾಡಿದೆ, ಅದರಲ್ಲಿ ಮಲಗಿದೆ, ನನ್ನ ಬೆಂಕಿ ನನ್ನನ್ನೇ ಸುಟ್ಟಿತು, ನಾನದರಲ್ಲಿ ಸುಟ್ಟು ಹೋದೆ ಎಂಬ ಅರ್ಥದ ಕವಿತೆಯನ್ನೂ ಅವರು ಶೇರ್ ಮಾಡಿದ್ದರು.
15 ದಿನಗಳ ಫಿಲ್ಮ್‌ ಫೆಸ್ಟಿವಲ್‌- ಮನೆಯಲ್ಲಿದ್ದೇ ನೋಡಿ ಸಿನಿಮಾ- ಇಲ್ಲಿದೆ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 6 =
Remember me
