ಬೆಂಗಳೂರು:ಸಿನಿಮಾ ರಂಗದಲ್ಲಿ ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ಕುರಿತು ನಟಿ ಶ್ರುತಿ ಹರಿಹರನ್‌ 2018ರಲ್ಲಿ ದನಿ ಎತ್ತುತ್ತಿದ್ದಂತೆಯೇ ಸಿನಿಮಾ ನಟಿಯರು ತಮಗಾಗಿರುವ ಅನ್ಯಾಯಗಳ ವಿರುದ್ಧವೂ ದನಿ ಎತ್ತತೊಡಗಿದರು. ಹೀಗೆ ‘ಮೀ ಟೂ’ ಅಭಿಯಾನ ಭಾರಿ ಸುದ್ದಿಯನ್ನೇ ಮಾಡಿತ್ತು. ಈ ರೀತಿ ಚಿತ್ರರಂಗದವರ ವಿರುದ್ಧ ದನಿ ಎತ್ತಿದ ನಟಿಯರ ಪೈಕಿ ಸಂಗೀತಾ ಭಟ್‌ ಕೂಡ ಒಬ್ಬರು.
‘ಎರಡನೇ ಸಲ’ ಎಂಬ ಸಿನಿಮಾ ಚಿತ್ರದ ಶೂಟಿಂಗ್ ವೇಳೆ ಅರೆ ಬೆತ್ತಲೆ ದೃಶ್ಯಗಳನ್ನು ಬಲವಂತವಾಗಿ ಶೂಟ್ ಮಾಡಲಾಗಿದೆ ಎಂದು ಅವರು ಆರೋಪ ಮಾಡಿದ್ದರು. ಗುರುಪ್ರಸಾದ್​ ನಿರ್ದೇಶಕನದ ಈ ಸಿನಿಮಾದಲ್ಲಿ ಡಾಲಿ ಧನಂಜಯ್​ ನಾಯಕ ನಟನಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಸಂಗೀತಾ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದೇ ದೂರ ಸರಿದಿದ್ದರು. ಅವರು ವಿದೇಶದಲ್ಲಿ ಹೋಗಿ ನೆಲೆಸಿದ್ದರು ಎನ್ನಲಾಗಿದೆ.
ಈಗ ತಾವು ಕಮ್‌ ಬ್ಯಾಕ್‌ ಆಗಿರುವ ಬಗ್ಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸಂಗೀತಾ ಮಾಹಿತಿ ನೀಡಿದ್ದಾರೆ. ನಟ ಕಿಶೋರ್ ಜೊತೆ ಸಂಗೀತಾ ಭಟ್ ಮುಂದಿನ ಸಿನಿಮಾವನ್ನು ಮಾಡುತ್ತಿದ್ದಾರೆ. ‘ನಮಸ್ಕಾರ, ನಟನೆ ಯಾವಾಗಲೂ ನನ್ನ ಮೊದಲ ಪ್ರೀತಿ, ಅದರಿಂದ ದೂರ ಉಳಿಯುವುದು ನನ್ನ ಜೀವನದ ಕಠಿಣ ಭಾಗವಾಗಿತ್ತು. ಈ ಪೋಸ್ಟ್‌ನೊಂದಿಗೆ, ನನ್ನ ಬಹುನಿರೀಕ್ಷಿತ ಚಲನಚಿತ್ರಗಳಿಗೆ ಪುನರಾಗಮನವನ್ನು ಘೋಷಿಸಲು ನಾನು ತುಂಬ ಸಮಯ ಕಾತರದಿಂದ ಕಾಯುತ್ತಿದ್ದೆ. ನೀವೆಲ್ಲರೂ ಈ ಹಿಂದೆ ನನ್ನ ಕೆಲಸಕ್ಕೆ ತುಂಬಾ ಮೆಚ್ಚುಗೆ ಹಾಗೂ ಬೆಂಬಲ ನೀಡಿದ್ದೀರಿ. ನಿಮ್ಮ ಪ್ರೀತಿ,ವಿಶ್ವಾಸ ಹಾಗೂ ಬೆಂಬಲ ಸದಾಕಾಲ ಹೀಗೆ ನನ್ನ ಕೆಲಸದ ಮೇಲೆ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
’ ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ. ಇದರ ಬಗ್ಗೆ ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್‌ಸ್ಟಾಗ್ರಾಮ್ ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿರಿ. ಸುಂದರ ನೆನಪುಗಳಿಗಾಗಿ ‘ರೂಪಾಂತರ’ ತಂಡಕ್ಕೆ ಧನ್ಯವಾದಗಳು’ ಎಂದು ಅವರು ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರಿ ಖುಷಿ ಮೂಡಿಸಿದೆ.


A post shared by Sangeetha Bhat Sudarshan (@sangeetha_bhat)

ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

ಪೊಲೀಸ್‌ ಅಂಕಲ್‌ ನಾನು ಶಾಲೆಗೆ ಹೋಗಲ್ಲ… ಆ ದಾರಿಯಲ್ಲಿ ಬಂದು ನೋಡಿ… ಪುಟಾಣಿಯಿಂದ ಹೀಗೊಂದು ಕಂಪ್ಲೇಂಟ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
