ದುಬೈ:ಚಿತ್ರನಟ ಸಂಜಯ್‌ ದತ್‌ ಅವರಿಗೆ ಅರಬ್‌ ಎಮಿರೇಟ್ಸ್‌ನ (ಯುಎಇ) ಗೋಲ್ಡನ್ ವೀಸಾ ದೊರೆತಿದೆ. ಈ ಕುರಿತು ಟ್ವಿಟರ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮೇಜರ್ ಜನರಲ್ ಮೊಹಮ್ಮದ್ ಅಲ್ ಮರಿ ಅವರ ಸಮ್ಮುಖದಲ್ಲಿ ಯುಎಇ ಗೋಲ್ಡನ್ ವೀಸಾ ‍ಪಡೆದಿದ್ದೇನೆ. ಇದು ಅತ್ಯಂತ ಗೌರವದ ಸಂಗತಿಯಾಗಿದೆ. ಈ ಗೌರವಕ್ಕಾಗಿ ಯುಎಇ ಸರ್ಕಾರ ಮತ್ತು ಫ್ಲೈ ದುಬೈನ ಸಿಒಒ ಹಮದ್ ಒಬೈದಲ್ಲಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಟ್ವಿಟರ್‌ನಲ್ಲಿ ಸಂಜಯ್‌ ದತ್‌ ಹೇಳಿಕೊಂಡಿದ್ದಾರೆ.
Honoured to have received a golden visa for the UAE in the presence of Major General Mohammed Al Marri, Director General of@GDRFADUBAI. Thanking him along with the @uaegov for the honour. Also grateful to Mr. Hamad Obaidalla, COO of@flydubaifor his support🙏🏻pic.twitter.com/b2Qvo1Bvlc
— Sanjay Dutt (@duttsanjay)May 26, 2021

ಅಷ್ಟಕ್ಕೂ ಗೋಲ್ಡನ್‌ ವೀಸಾ ಪ್ರಯೋಜನ ಏನೆಂದರೆ: ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯಾಭ್ಯಾಸ, ಕೆಲಸ, ಉದ್ಯಮ ನಡೆಸಬಹುದು. 2019ರಿಂದ ವಿದೇಶಿಯರಿಗೆ ‘ಗೋಲ್ಡನ್ ವೀಸಾ’ವನ್ನು ಯುಎಇ ಸರ್ಕಾರ ನೀಡುತ್ತಿದೆ. ಇದರಿಂದ ವಿದೇಶಿ ಹೂಡಿಕೆದಾರರು ಮತ್ತು ಉದ್ಯಮಿಗಳು ಯುಎಇನಲ್ಲಿ ಸಂಪೂರ್ಣ ಮಾಲೀಕತ್ವದಲ್ಲಿ ಉದ್ಯಮ ನಡೆಸಬಹುದು. 5 ಅಥವಾ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ. ಬಳಿಕ ಅದನ್ನು ನವೀಕರಿಸಿಕೊಳ್ಳಬಹುದು.
ಇವರ ಪತ್ನಿ, ನಟಿ ಮತ್ತು ನಿರ್ಮಾಪಕಿ ಮಾನ್ಯತಾ ತಮ್ಮ ಅವಳಿ ಮಕ್ಕಳಾದ ಶಹ್ರಾನ್ ಮತ್ತು ಇಕ್ರಾ (10) ಜತೆ ದುಬೈನಲ್ಲಿಯೇ ಕೆಲ ವರ್ಷಗಳಿಂದ ನೆಲೆಸಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಹೆಗಲು ಕೊಡಲು ಪುರುಷರ ಹಿಂದೇಟು: ಹೆಣ್ಣುಮಕ್ಕಳಿಂದಲೇ ವಿಧಿವಿಧಾನ

ಪೋಷಕರು ಬದುಕಿರಲಿ, ಇಲ್ಲದಿರಲಿ… ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ…

ಯುರೇನಿಯಂ ಸಂಸ್ಥೆಯಲ್ಲಿ ಮೈನಿಂಗ್‌ಮೇಟ್‌​ ಉದ್ಯೋಗಕ್ಕೆ ಆಹ್ವಾನ: 51 ಹುದ್ದೆಗಳಿಗೆ ಅರ್ಜಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 19 =
Remember me
