ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ಸಮನ್ಸ್​ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ಸಂಜಯ್​ ರಾವತ್ ಅವರ ಮುಂಬೈ​ ಮನೆ ಮೇಲೆ ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದರು.
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿದ್ದು, ಸದ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಮೊದಲ ಸಮನ್ಸ್​ ವೇಳೆ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಬಳಿಕ ರಾವತ್​​ ಅವರಿಗೆ ಎರಡನೇ ಸಮನ್ಸ್​ ನೀಡಲಾಗಿತ್ತು. ಆಗಲೂ ವಿಚಾರಣೆಗೆ ಹಾಜರಾಗದ ಕಾರಣ, ಇದೀಗ ಇಡಿ ಅಧಿಕಾರಿಗಳೇ ರಾವತ್​​ ಅವರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ರಾವತ್​, ನಾನೇನೂ ತಪ್ಪು ಮಾಡಲಿಲ್ಲ. ಸತ್ತರೂ ನಾನು ಶರಣಾಗುವುದಿಲ್ಲ ಎಂದು ಟ್ವೀಟ್​ ಮಾಡಿದ್ದರು.
ಇದೀಗ ರಾವತ್​ ಅವರನ್ನು ಇ.ಡಿ ಅಧಿಕಾರಿಗಳು ಬಂಧಿಸಿದ್ದಾರೆ. 1,034 ಕೋಟಿ ರೂ.ಗಳ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ.
ಮುಂಬೈನ ಪಾತ್ರಾ ಚಾವ್ಲ್ (ವಠಾರ) ಮರು-ಅಭಿವೃದ್ಧಿಯಲ್ಲಿ ನಡೆದಿರುವ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯವು 60 ವರ್ಷದ ರಾವತ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ, ರಾವತ್​ ಅವರು ಈ ಆರೋಪವನ್ನು ನಿರಾಕರಿಸಿ, ರಾಜಕೀಯ ದ್ವೇಷದ ಕಾರಣ ತಮ್ಮನ್ನು ಟಾರ್ಗೆಟ್​ ಮಾಡಲಾಗಿದೆ, ನನ್ನ ವಿರುದ್ಧ ಸುಳ್ಳು ಪುರಾವೆ ಸೃಷ್ಟಿಸಲಾಗಿದೆ. ನಾನು ಶಿವಸೇನಾವನ್ನು ತೊರೆಯುವುದಿಲ್ಲ. ನಾನು ಸತ್ತರೂ ಶರಣಾಗುವುದಿಲ್ಲ. ಹಗರಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ಶಿವಸೇನಾ ಮುಖ್ಯಸ್ಥ ಬಾಳ ಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಬಾಳಸಾಹೇಬರು ನಮಗೆ ಹೋರಾಡುವುದನ್ನು ಕಲಿಸಿದ್ದಾರೆ. ನಾನು ಶಿವಸೇನಾಗಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಟ್ವೀಟ್​ ಮೂಲಕ ಹೇಳಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ.
ಜುಲೈ 1 ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‍ಎ) ಕ್ರಿಮಿನಲ್ ಸೆಕ್ಷನ್‍ಗಳ ಅಡಿಯಲ್ಲಿ ದಾಖಲಿಸಲಾಗಿದೆ. ಏಪ್ರಿಲ್‍ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
खोटी कारवाई..खोटे पुरावेमी शिवसेना सोडणार नाही..मरेन पण शरण जाणार नाहीजय महाराष्ट्र
— Sanjay Raut (@rautsanjay61)July 31, 2022

ಏನಿದು ಪಾತ್ರಾ ಚಾವ್ಲ್​ ಹಗರಣ?ಮುಂಬೈನ ಗೋರೆಗಾಂವ್‌ನಲ್ಲಿರುವ ಸಿದ್ಧಾರ್ಥ್ ನಗರ, ಇದನ್ನು ಪಾತ್ರಾ ಚಾವ್ಲ್ ಎಂದೂ ಕರೆಯುತ್ತಾರೆ. ಇದು ಸುಮಾರು 47 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದರ ಅಭಿವೃದ್ಧಿಯಲ್ಲಿ ನಡೆದಿರುವ ಹಗರಣಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ.
2008ರಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಪಾತ್ರಾ ಚಾವ್ಲ್​ನ ಪುನರಾಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿತ್ತು. ಇದು 672 ಬಾಡಿಗೆದಾರರನ್ನು ಹೊಂದಿತ್ತು. ಇದರ ಗುತ್ತಿಗೆಯನ್ನು ಗುರು ಆಶಿಶ್ ಕನ್​ಸ್ಟ್ರಕ್ಟನ್​ ಲಿಮಿಟೆಡ್‌ಗೆ ನೀಡಲಾಯಿತು.
14 ವರ್ಷಗಳ ನಂತರವೂ ಬಾಡಿಗೆದಾರರು ತಮ್ಮ ಮನೆಗಳನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ. ಈ ಜಾಗವನ್ನು ಫ್ಲ್ಯಾಟ್‌ ನಿರ್ಮಿಸದೆ ಒಂಬತ್ತು ಬಿಲ್ಡರ್‌ಗಳಿಗೆ 901.79 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಅಕ್ರಮವಾಗಿ 1,034.79 ಕೋಟಿ ರೂ. ಗಳಿಸಿದೆ.
ಏಪ್ರಿಲ್‍ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.(ಏಜೆನ್ಸೀಸ್​)
ಸಾವಿನ ಸೂಚನೆ ಸಿಗುತ್ತಲೇ ಶಾಲೆಗೆ ಬಂದ ಬಾಲಕ: ಸ್ನೇಹಿತರ ನೋಡಿ ಕೊನೆಯುಸಿರೆಳೆದ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ

ರಾಶಿ ರಾಶಿ ಹಣದೊಂದಿಗೆ ಸಿಕ್ಕಿಬಿದ್ದ ಮೂವರು ಶಾಸಕರ ಅಮಾನತು ಮಾಡಿದ ಸೋನಿಯಾ: ಬಿಜೆಪಿ ಕುತಂತ್ರ ಎಂದ ಪಕ್ಷ

ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
