ಮುಂಬೈ:ಮುಂಬೈನ ಕೋರೇಂಗಾವ್​ನಲ್ಲಿರುವ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್​ ಹಿನ್ನೆಲೆಯಲ್ಲಿ ಇಂದು ಶಿವಸೇನಾ ನಾಯಕ ಸಂಜಯ್​ ರಾವುತ್​​ ಹಾಜರಾಗಲಿದ್ದಾರೆ.
ಕೆಲ ದಿನಗಳ ಹಿಂದೆ ಇಡಿ ನೋಟಿಸ್​ ಜಾರಿ ಮಾಡಿದ್ದಾಗ ತಾವು ಹಾಜರು ಆಗಲು ಸಾಧ್ಯವಿಲ್ಲ, ಬೇರೆ ಕೆಲಸವಿದೆ ಎಂದಿದ್ದರು. ಶಿವಸೇನಾ ನಾಯಕ ಏಕನಾಥ ಶಿಂಧೆ ಬಣ ಬಂಡಾಯವೆದ್ದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಉದ್ಧವ್​ ಠಾಕ್ರೆಯವರನ್ನು ಕೆಳಕ್ಕೆ ಇಳಿಸಬಾರದು ಎಂಬ ಪ್ರಯತ್ನದಲ್ಲಿ ರಾವತ್​ ತೊಡಗಿದ್ದರು. ಆದರೆ ಇದೀಗ ಠಾಕ್ರೆ ಖುರ್ಚಿಯಿಂದ ಇಳಿದು ಆ ಸ್ಥಾನಕ್ಕೆ ಶಿಂಧೆ ಬರುತ್ತಿದ್ದಂತೆಯೇ ಈಗ ಇಡಿ ಮುಂದೆ ಹಾಜರಾಗಲು ರೆಡಿಯಾಗಿದ್ದಾರೆ. ಇಡಿ ಎರಡನೆಯ ಬಾರಿ ಇವರಿಗೆ ಸಮನ್ಸ್​ ಜಾರಿ ಮಾಡಿತ್ತು.
ಈ ಸಂಬಂಧ ಟ್ವೀಟ್​ ಮಾಡಿರುವ ಸಂಜಯ್ ರಾವುತ್​ ಇಂದು ಮಧ್ಯಾಹ್ನ ಇಡಿ ಕಚೇರಿಗೆ ಹಾಜರಾಗಲಿದ್ದೇನೆ ಎಂದು ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಇಡಿ ಮುಂದೆ ಹಾಜರಾಗುವುದಾಗಿ ಅವರು ಮಾಹಿತಿ ನೀಡಿದ್ದಾರೆ.
Yes, I am going to ED today. Everyone knows that it is totally political. The central agency summoned me and I am a citizen as well as MP. So I will go to ED: Sanjay Raut, Shiv Senapic.twitter.com/iW7KlqHAL4
— ANI (@ANI)July 1, 2022

ಇಡಿ ನೀಡಿರುವ ಸಮನ್ಸ್ ಗೌರವಿಸುತ್ತೇನೆ. ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡುವುದು ತಮ್ಮ ಆದ್ಯ ಕರ್ತವ್ಯ. ಇಡಿ ಕಚೇರಿ ಬಳಿ ಯಾರೂ ಜಮಾಯಿಸದಂತೆ ಇದೇ ವೇಳೆ ಟ್ವೀಟ್​ ಮೂಲಕ ಸಂಜಯ್​ ರಾವತ್​​ ಪಕ್ಷದ ಕಾರ್ಯಕರ್ತರಿಗೆ ಮನವಿ ಕೂಡ ಮಾಡಿದ್ದಾರೆ.
47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್​ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್​ ರಾವತ್​ ಮೇಲಿದ್ದು, 1,034 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಭೂ ಅಭಿವೃದ್ಧಿ ಹಗರಣದಲ್ಲಿ ರಾವತ್​ಗೆ ಸಂಬಂಧಿಸಿದ 9 ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಿದೆ. ರಾವತ್​ ಪತ್ನಿಗೆ ಸಂಬಂಧಿಸಿದ 2 ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ. 672 ಕುಟುಂಬಗಳಿಗೆ ಇ-ಟೆಂಡರ್​ ಮೂಲಕ ಮನೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಹಫ್ತಾ, ಹವಾಲ, ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ.
ತಮ್ಮ ಫೋಟೋ ತೆಗೆದು ಟ್ವಿಟರ್​ನಲ್ಲಿ ಮಾಜಿ ಸಿಎಂ ತಂದೆಯ ಫೋಟೋ ಹಾಕಿಕೊಂಡ ನೂತನ ಮುಖ್ಯಮಂತ್ರಿ!

ಮಗು ಗರ್ಭದಲ್ಲಿ ಇರುವಾಗಲೇ ದತ್ತು ತೆಗೆದುಕೊಳ್ಳಬಹುದಾ? ಹೈಕೋರ್ಟ್​ನಿಂದ ಹೊರಟಿದೆ ಮಹತ್ವದ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
