ಲಂಡನ್​: ಇದೇ 8ರಂದು ನಿಧನರಾದ ರಾಣಿ ಎಲಿಜಬೆತ್ II ಅವರ ಆತ್ಮಕ್ಕೆ ಶಾಂತಿ ಸಿಕ್ಕು ಅವರಿಗೆ ಸ್ವರ್ಗ ಪ್ರಾಪ್ತಿಯಾಗಲಿ ಎಂದು ಬೇಡಿಕೊಳ್ಳುವ ಸಲುವಾಗಿ ಮೆಕ್ಕಾದವರೆಗೆ ‘ಉಮ್ರಾ ಯಾತ್ರೆ’ ಕೈಗೊಳ್ಳುವುದಾಗಿ ಬಂದ ಯೆಮೆನ್​ ನಿವಾಸಿಯೊಬ್ಬನನ್ನು ಸೌದಿ ಅಧಿಕಾರಿಗಳು ಬಂಧಿಸಿದ್ದಾರೆ.
ಇಸ್ಲಾಂ ಧರ್ಮದ ಪವಿತ್ರ ತಾಣವಾದ ಮೆಕ್ಕಾದಲ್ಲಿನ ಗ್ರ್ಯಾಂಡ್ ಮಸೀದಿಯಲ್ಲಿ ದಿವಂಗತ ರಾಣಿ ಎಲಿಜಬೆತ್ ಅವರ ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಕೈಗೊಂಡಿದ್ದೇನೆ ಎಂಬ ಬ್ಯಾನರ್‌ ಪ್ರದರ್ಶಿಸುವ ವಿಡಿಯೋವನ್ನು ಈತ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದನು. (ಯಾವುದೇ ಸಮಯದಲ್ಲಿ ಕೈಗೊಳ್ಳಬಹುದಾದ ಮುಸ್ಲಿಮರ ತೀರ್ಥಯಾತ್ರೆ ಉಮ್ರಾ. ಇದು ಹಜ್‌ಗಿಂತ ಭಿನ್ನವಾಗಿದೆ).
ಇದರಲ್ಲಿ ಈತ, ಅರೇಬಿಕ್ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ‘ರಾಣಿ ಎಲಿಜಬೆತ್ II ರ ಆತ್ಮಕ್ಕಾಗಿ ಉಮ್ರಾ’ ಎಂದು ಬರೆದಿರುವ ಬ್ಯಾನರ್​ ಹಿಡಿದುಕೊಂಡು ‘ರಾಣಿ ಎಲಿಜಬೆತ್ IIರ ಆತ್ಮಶಾಂತಿಗಾಗಿ ಉಮ್ರಾ ಯಾತ್ರೆ ಕೈಗೊಂಡಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಸ್ವರ್ಗವಾಸಿಯಾಗಲೆಂದು ಬಯಸುತ್ತೇನೆ’ ಎಂದು ಮಾತನಾಡಿದ್ದಾನೆ. ಈ ವಿಡಿಯೋ ಭಾರಿ ವೈರಲ್​ ಆಗುತ್ತಿದ್ದಂತೆಯೇ, ಈತನ ಬಂಧನಕ್ಕೆ ಆಗ್ರಹಗಳು ಕೇಳಿಬಂದಿದ್ದವು. ಪವಿತ್ರ ಸ್ಥಳಗಳು ರಾಜಕೀಯ ವಿಮರ್ಶೆಗೆ ಅಖಾಡವಲ್ಲ, ಕೂಡಲೇ ಆತನನ್ನು ಬಂಧಿಸಿ ಶಿಕ್ಷೆ ನೀಡಿ ಎಂದು ನೆಟ್ಟಿಗರು ಆಗ್ರಹಿಸಿದರು.
ಮೆಕ್ಕಾದ ಗ್ರ್ಯಾಂಡ್ ಮಸೀದಿಯ ಅಂಗಳದಲ್ಲಿ ಈತನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಸೌದಿ ಸಾರ್ವಜನಿಕ ಭದ್ರತಾ ನಿರ್ದೇಶನಾಲಯವು ಈ ಕುರಿತು ತನ್ನ ಟ್ವಿಟ್ಟರ್​ನಲ್ಲಿ ತಿಳಿಸಿದೆ. ಈತ ಕಾನೂನು ಉಲ್ಲಂಘಿಸಿ ಗ್ರ್ಯಾಂಡ್ ಮಸೀದಿಯೊಳಗೆ ಬ್ಯಾನರ್ ಹಿಡಿದುಕೊಂಡು ಬಂದ ಹಿನ್ನೆಲೆಯಲ್ಲಿ ಮಸೀದಿಯ ಭದ್ರತೆಗಾಗಿ ವಿಶೇಷ ಪಡೆ ಬಂಧಿಸಿದೆ ಎಂದು ಇಲಾಖೆ ಟ್ವೀಟ್​ನಲ್ಲಿ ತಿಳಿಸಿದೆ.
ಸೌದಿ ಅರೇಬಿಯಾವು ಮೆಕ್ಕಾಗೆ ಯಾತ್ರಿಕರು ಬ್ಯಾನರ್‌ಗಳನ್ನು ಅಥವಾ ಘೋಷಣೆಗಳನ್ನು ಹಾಕುವುದನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೇ, ಇಲ್ಲಿ ಸತ್ತ ಮುಸ್ಲಿಮರ ಪರವಾಗಿ ಉಮ್ರಾ ಮಾಡುವುದು ಸ್ವೀಕಾರಾರ್ಹವಾಗಿದ್ದರೂ, ಇದು ರಾಣಿಯಂತಹ ಮುಸ್ಲಿಮೇತರರಿಗೆ ಅನ್ವಯಿಸುವುದಿಲ್ಲ, ಅವರು ಚರ್ಚ್ ಆಫ್ ಇಂಗ್ಲೆಂಡ್‌ನ ಸರ್ವೋಚ್ಚ ಗವರ್ನರ್ ಆಗಿದ್ದರೂ ಮಸೀದಿಗೆ ಸಂಬಂಧಿಸಿದ ನಿಯಮಗಳಡಿ ಇದು ವಿರುದ್ಧವಾಗಿದೆ. ಹೀಗಾಗಿ ಈ ನಿಯಮಗಳನ್ವಯ ಬ್ಯಾನರ್‌ ಹಿಡಿದು ಬಂದಿದ್ದ ಯೆಮನ್‌ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. (ಏಜೆನ್ಸೀಸ್​)
A Yemeni man has been arrested in Mecca by Saudi police while he was on his Umrah pilgrimage, which he dedicated to the late Queen Elizabeth II after she died last Thursday. The police said the man violated Umrah rules for carrying a sign with a message about the Queen.pic.twitter.com/d038dwxLVb
— Middle East Eye (@MiddleEastEye)September 13, 2022

ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!

ಬಿಎಸ್​ವೈಗೆ ಬಿಗ್​ ಶಾಕ್​: ಭ್ರಷ್ಟಾಚಾರದ ಆರೋಪದಡಿ ಎಫ್​ಐಆರ್​ ದಾಖಲಿಸಿ ತನಿಖೆಗೆ ಕೋರ್ಟ್​ ಆದೇಶ

ಗೋವಾ ಕಾಂಗ್ರೆಸ್​ನಲ್ಲಿ ಮತ್ತೆ ಕೋಲಾಹಲ! ಬಿಜೆಪಿಯ ಕೈ ಹಿಡಿಯಲಿದ್ದಾರಾ ಎಂಟು ಶಾಸಕರು?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − eight =
Remember me
