ನವದೆಹಲಿ:ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಜಾಗತಿಕ ಅಭಿಯಾನವು ಅಂತಿಮ ಹಂತದಲ್ಲಿದ್ದು, 100ನೇ ದಿನದ ಜಾಗತಿಕ ಸಾರ್ವಜನಿಕ ಕಾರ್ಯಕ್ರಮಕ್ಕೆ ಮೈಸೂರು ಸಜ್ಜಾಗಿದೆ.
ಮಣ್ಣು ರಕ್ಷಣೆ ಸಲುವಾಗಿ 27 ದೇಶಗಳಲ್ಲಿ ಒಟ್ಟು 30 ಸಾವಿರ ಕಿ.ಮೀ. ದೂರವನ್ನು 100 ದಿನಗಳಲ್ಲಿ ಏಕಾಂಗಿಯಾಗಿ ಬೈಕ್​ನಲ್ಲಿ ಸಂಚರಿಸಿ ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಜಾಗತಿಕ ಅಭಿಯಾನವನ್ನು ಇದೇ ಮಾ. 21ರಂದು ಸದ್ಗುರು ಲಂಡನ್​ನಲ್ಲಿ ಆರಂಭಿಸಿದ್ದರು. ಅಲ್ಲಿಂದ 26 ದೇಶಗಳಲ್ಲಿ ಬೈಕ್​ನಲ್ಲಿ ಸಂಚರಿಸಿ ಗುಜರಾತ್​ ಮೂಲಕ ಭಾರತಕ್ಕೆ ಪ್ರವೇಶ ಮಾಡಿದ್ದಾರೆ ಸದ್ಗುರು.
ಮೈಸೂರು ಸದ್ಗುರುಗಳ ತವರೂರು ಆಗಿದ್ದು, ಮಣ್ಣು ಉಳಿಸಿ ಅಭಿಯಾನದ 100ನೇ ಜಾಗತಿಕ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಕೊನೆಯ ನಗರವಾಗಿದೆ. ಇದೇ 19ರಂದು ಸಂಜೆ 7.30 ಕ್ಕೆ ಮೈಸೂರಿನ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸದ್ಗುರುಗಳು ಮೈಸೂರಿನ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಜನರು ಸದ್ಗುರುಗಳಿಗೆ ಅಮೋಘವಾದ ಸ್ವಾಗತವನ್ನು ನೀಡಲು ಸಜ್ಜಾಗಿದ್ದಾರೆ.
ಸಂಕಲ್ಪ್ ಮತ್ತು ಸಿದ್ಧಾರ್ಥ ಹೋಟೆಲ್, ಅಶೋಕ ಹಾರ್ಡ್‌ವೇರ್, STG-ರೆಡಿ ಮಿಕ್ಸ್ ಬ್ರ್ಯಾಂಡ್, ರೋಟರಿ ಮೈಸೂರು ಉತ್ತರ ವಲಯದ ಅಧ್ಯಕ್ಷರು – ಜಗದೀಶ್, ರಘುಲಾಲ್ & Co. ಫಾರ್ಮಾ – ಶ್ರೀ ರಾಘವನ್, ಮೈಸೂರು ಹೋಟೆಲ್ ಸಂಘದ ಅಧ್ಯಕ್ಷ – ನಾರಾಯಣ ಗೌಡ, ಬಿಲ್ಡರ್ಸ್ ಅಸೋಸಿಯೇಷನ್ ​​- ಆರ್ ರಘುನಾಥ್ ಮತ್ತು ಮೈಸೂರು ಚೇಂಬರ್ ಆಫ್ ಕಾಮರ್ಸ್ ಅವರುಗಳು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿ, ಈಶಾ ಔಟ್ರೀಚ್‌ನ ಸ್ವಯಂಸೇವಕರೊಂದಿಗೆ ಕೈಜೋಡಿಸಿ ಸದ್ಗುರು ಅವರನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು ಮತ್ತು ಸದ್ಗುರುಗಳು ಪ್ರಾರಂಭಿಸಿರುವ ಈ ಅಭಿಯಾನವು “ಯುಗ”ದ ಅತಿದೊಡ್ಡ ಪರಿಸರ ಅಭಿಯಾನವಾಗಿದೆ ಮತ್ತು ಅಭಿಯಾನದಲ್ಲಿ ಮೈಸೂರಿನ ಜನರು ಮನಃಪೂರ್ವಕವಾಗಿ ಭಾಗವಹಿಸಬೇಕೆಂದು ಕರೆ ನೀಡಿದರು. ಮೈಸೂರಿನ ರಾಜಮನೆತನದ ಪರವಾಗಿ ರಾಜಮಾತೆ ಎಚ್.ಎಚ್.ಡಾ.ಪ್ರಮೋದಾ ದೇವಿ ಒಡೆಯರ್ ಅವರು ಅಭಿಯಾನಕ್ಕೆ ಬೆಂಬಲವನ್ನು ನೀಡಿದರು ಮತ್ತು ಅಭಿಯಾನವು ಮಣ್ಣಿನ ಅವನತಿಯನ್ನು ಎದುರಿಸಲು ನೀತಿ ಮಟ್ಟದ ಬದಲಾವಣೆಗಳನ್ನು ತರುತ್ತಿದೆ ಎಂದು ಶ್ಲಾಘಿಸಿದರು.

ನವದೆಹಲಿಯಲ್ಲಿ ನಡೆದ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದ್ಗುರುಗಳೊಂದಿಗೆ ಸೇರಿ ಅಭಿಯಾನದ ನಿರ್ಣಾಯಕ ಅಗತ್ಯ ಮತ್ತು ಮೌಲ್ಯವನ್ನು ಪೂರ್ಣ ಹೃದಯದಿಂದ ಗುರುತಿಸಿದರು. ಸದ್ಗುರುಗಳು ಭಾರತಕ್ಕೆ ಆಗಮಿಸಿದಾಗಿನಿಂದ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಅಭಿಯಾನಕ್ಕೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿವೆ ಮತ್ತು ಈಶ ಔಟ್ ರೀಚ್ ನೊಂದಿಗೆ ನಿವೇದನ ಪತ್ರಗಳಿಗೆ (MOU) ಗಳಿಗೆ ಸಹಿ ಹಾಕಿವೆ.
ಅಭಿಯಾನವು ಇಲ್ಲಿಯವರೆಗೆ, 2.5 ಶತಕೋಟಿ ಜನರನ್ನು ತಲುಪಿದ್ದು, ಜೊತೆಗೆ 74 ದೇಶಗಳು ತಮ್ಮ ರಾಷ್ಟ್ರಗಳ ಮಣ್ಣನ್ನು ಉಳಿಸಲು ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಭಾರತದ 15 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಮಣ್ಣು ಮತ್ತು ಅವರ ಭವಿಷ್ಯವನ್ನು ಉಳಿಸಲು ಕಾರ್ಯನಿರ್ವಹಿಸುವಂತೆ ವಿನಂತಿಸಿದ್ದಾರೆ. ಉತ್ತರ ಪ್ರದೇಶದ 25 ಜಿಲ್ಲೆಗಳ 300 ಕ್ಕೂ ಹೆಚ್ಚು ಶಾಲೆಗಳ 65 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಮೈಸೂರು ನಗರದಿಂದಲೇ ಸುಮಾರು 5 ಸಾವಿರ ಶಾಲಾ ಮಕ್ಕಳು ಪ್ರಧಾನಿಯವರಿಗೆ ಮಣ್ಣು ಉಳಿಸುವ ಕುರಿತು ಪತ್ರ ಬರೆದಿದ್ದಾರೆ.
ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ತುರ್ತು ಕಾರ್ಯನೀತಿ ಸುಧಾರಣೆಗಳ ಮೂಲಕ ಕೃಷಿ ಮಣ್ಣಿನಲ್ಲಿ ಕನಿಷ್ಠ 3-6% ಜೈವಿಕ ಅಂಶವನ್ನು ಕಡ್ಡಾಯಗೊಳಿಸುವಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳನ್ನು ಆಗ್ರಹಪಡಿಸುವುದು. ಇಷ್ಟು ಕನಿಷ್ಠ ಜೈವಿಕ ಅಂಶವಿಲ್ಲದೆ, ಮಣ್ಣಿನ ವಿಜ್ಞಾನಿಗಳು ಮಣ್ಣಿನ ನಿರ್ಧಾರಿತ ಅವನತಿಯ ಬಗ್ಗೆ ಎಚ್ಚರಿಸಿದ್ದಾರೆ, ಈ ವಿದ್ಯಮಾನವನ್ನು ಅವರು ‘ಮಣ್ಣಿನ ಅಳಿವು’ ಎಂದು ಕರೆಯುತ್ತಿದ್ದಾರೆ.
ಭಾರತದಲ್ಲಿ, ಸುಮಾರು 30% ಫಲವತ್ತಾದ ಮಣ್ಣು ಈಗಾಗಲೇ ಬಂಜರಾಗಿ ವ್ಯವಸಾಯ ಮಾಡಲು ಅಸಮರ್ಥವಾಗಿದೆ. ಪ್ರಸ್ತುತದಲ್ಲಿ ನಡೆಯುತ್ತಿರುವ ಮಣ್ಣಿನ ಅವನತಿಯು ಹೀಗೆಯೇ ಮುಂದುವರೆದರೆ, 2050 ರ ಹೊತ್ತಿಗೆ ಪ್ರಪಂಚದ 90% ರಷ್ಟು ಮಣ್ಣು ಮರುಭೂಮಿಯಾಗಿ ಬದಲಾಗಬಹುದು ಎಂದು ವಿಶ್ವಸಂಸ್ಥೆಯು ಎಚ್ಚರಿಸಿದೆ – ಇದು ಇನ್ನು ಕೇವಲ ಮೂರು ದಶಕಗಳಿಗಿಂತಲೂ ಕಡಿಮೆ. ಈ ಅನಾಹುತವನ್ನು ತಪ್ಪಿಸಲು, ಸದ್ಗುರುಗಳು ಈ ವರ್ಷದ ಮಾರ್ಚ್‌ನಲ್ಲಿ ಮಣ್ಣು ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು 27 ದೇಶಗಳಲ್ಲಿ ಸಂಚರಿಸಿ ಅಲ್ಲಿನ ನಾಯಕರು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ನಾಗರಿಕರನ್ನು ಭೇಟಿ ಮಾಡಿ ಮಣ್ಣನ್ನು ಉಳಿಸಲು ಬೆಂಬಲವನ್ನು ಪಡೆದರು.
ಮಣ್ಣು ಉಳಿಸಿ ಅಭಿಯಾನವು ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕೊಂಬಾಟ್ ದೆಸೆರ್ಟಿಫಿಕೇಷನ್(ಯುಎನ್ ಸಿಸಿಡಿ), ದಿ ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ(ಯುಎನ್ಇಪಿ), ವಿಶ್ವ ಆಹಾರ ಕಾರ್ಯಕ್ರಮ, ಮತ್ತು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಷನ್ ಆ ನೇಚರ್(ಐಯುಸಿಎನ್) ಬೆಂಬಲವನ್ನು ಪಡೆದುಕೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 99451 25510
ಕರ್ನಾಟಕಕ್ಕೆ ಪ್ರವೇಶಿಸಿತು ಮಣ್ಣು ರಕ್ಷಿಸಿ ಜಾಗತಿಕ ಅಭಿಯಾನ; ಬೀದರ್​ನಲ್ಲಿ ಸದ್ಗುರು…

ಮಹಾರಾಷ್ಟ್ರದಲ್ಲಿ ಮಣ್ಣು ಉಳಿಸಿ ಅಭಿಯಾನ; ಆದಿತ್ಯ ಠಾಕ್ರೆ-ಸದ್ಗುರು ನಡುವೆ MoU

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 13 =
Remember me
