ನವದೆಹಲಿ:ಇಲ್ಲಿಯವರೆಗೆ ಯಾವುದಾದರೂ ಪ್ರಕರಣದ ವಿಚಾರಣೆಗೆ ಸಿಬಿಐ ತನಿಖೆ ಅಗತ್ಯ ಎಂದು ಕಂಡುಬಂದರೆ ಕೇಂದ್ರ ಸರ್ಕಾರ ಅದನ್ನು ಸಿಬಿಐಗೆ ಒಪ್ಪಿಸುತ್ತಿತ್ತು. ಆದರೆ ಇದಕ್ಕೆ ಬ್ರೇಕ್​ ಹಾಕಿರುವ ಸುಪ್ರೀಂಕೋರ್ಟ್​, ಇನ್ನು ಆ ರೀತಿ ಮಾಡುವಂತಿಲ್ಲ ಎಂದಿದೆ.
ಅಲಹಾಬಾದ್​ನ ಫರ್ಟಿಕೋ ಮಾರ್ಕೆಟಿಂಗ್​ ಕಂಪೆನಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಈ ಮಹತ್ವದ ತೀರ್ಪು ಹೊರಬಿದ್ದಿದೆ. ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ಸಿಬಿಐ ರೇಡ್​ ಮಾಡಿದ್ದನ್ನು ಪ್ರಶ್ನಿಸಲಾಗಿತ್ತು.
ಸಿಬಿಐ ಕ್ರಮ ಸರಿಯಲ್ಲ ಎಂದು ಅಲಹಾಬಾದ್​ ಹೈಕೋರ್ಟ್​ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು. ಹೈಕೋರ್ಟ್​ ತೀರ್ಪನ್ನು ಎತ್ತಿಹಿಡಿರುವ ಸುಪ್ರೀಂಕೋರ್ಟ್​ ಯಾವುದೇ ಪ್ರಕರಣಗಳಲ್ಲಿ ಅಯಾ ರಾಜ್ಯ  ಸರ್ಕಾರದ ಅನುಮತಿ ಇಲ್ಲದೇ ಸಿಬಿಐ ತನಿಖೆಗೆ ವಹಿಸುವಂತಿಲ್ಲ ಎಂದಿದೆ.
ಇದನ್ನೂ ಓದಿ:ಪ್ರಯೋಗಾಲಯದಲ್ಲೇ ತಯಾರಾಯ್ತು ವಜ್ರ, ಇನ್ನು ನಿಸರ್ಗದಲ್ಲಿ ಹುಡುಕೋದೇ ಬೇಡ!
ರಾಜ್ಯ ಸರ್ಕಾರದ ಸಮ್ಮತಿ ಇಲ್ಲದೆ ಸಿಬಿಐ ಯಾವುದೇ ರಾಜ್ಯದಲ್ಲಿ ತನಿಖೆ ನಡೆಸಲು ಸಾಧ್ಯವಿಲ್ಲ. ಯಾವುದೇ ರಾಜ್ಯದಲ್ಲಾಗಲಿ ಸಿಬಿಐ ತನಿಖೆಗೆ ಮುನ್ನ ಆಯಾ ರಾಜ್ಯದ ಒಪ್ಪಿಗೆ ಪಡೆದಿರಬೇಕು. ರಾಜ್ಯ ಸರ್ಕಾರ ಒಪ್ಪಿಗೆ ನೀಡದಿದ್ದರೆ ಸಿಬಿಐ ತನಿಖೆ ನಡೆಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಇನ್ನು ಕೇಂದ್ರಾಡಳಿತ ಪ್ರದೇಶವನ್ನು ಮೋರಿ, ಕೇಂದ್ರ ಸರ್ಕಾರ ರಾಜ್ಯದ ಮೇಲೆ ಸಿಬಿಐ ಅಧಿಕಾರ ಹಾಗೂ ನ್ಯಾಯವ್ಯಾಪ್ತಿಯನ್ನು ವಿಸ್ತರಿಸಿದರೆ, ಅದಕ್ಕೆ ರಾಜ್ಯದ ಒಪ್ಪಿಗೆ ಇಲ್ಲದಿದ್ದರೆ ಆ ನಿರ್ಣಯವನ್ನು ಅನುಮತಿಸುವುದಿಲ್ಲ ಎಂದು ಕೂಡ ಹೇಳಿದೆ.
ಮದ್ವೆಯಾಗಲು ‘ಎಸ್’​ ಹುಡುಗೀನ್ನ ಹುಡುಕುತ್ತಿದ್ದಾನೀತ- ಮೂರು ಹೆಂಡ್ತಿಯರೂ ನೀಡ್ತಿದ್ದಾರೆ ಸಾಥ್​!

ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five − one =
Remember me
