ನವದೆಹಲಿ:ಕರೊನಾ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಇದಾಗಲೇ ಕೆಲವು ಬ್ಯಾಂಕುಗಳು ಮನೆ-ಮನೆಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುತ್ತಿವೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ಗ್ರಾಹಕರ ಮನೆ ಬಾಗಿಲಿಗೆ, ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಮುಂದಾಗಿದೆ.
ಪಿಕ್ ಅಪ್ ಸೇವೆಗಳು, ವಿತರಣಾ ಸೇವೆಗಳು ಮತ್ತು ಇತರ ಸೇವೆಗಳು ಎಂಬ ಮೂರು ವಿಭಾಗಗಳಲ್ಲಿ ಸೌಲಭ್ಯ ಸಿಗಲಿದೆ. ಇದರ ಡಿಟೇಲ್ಸ್​ ಹೀಗಿದೆ:ಪಿಕಪ್​ ಸೇವೆ(ಪಿಕ್​ ಅಪ್​ ಸರ್ವೀಸ್​): ಪಿಕಪ್ ಸೇವೆಗಳಲ್ಲಿ,ಚೆಕ್, ಡ್ರಾಫ್ಟ್, ಪೇ ಆರ್ಡರ್, ಹೊಸ ಚೆಕ್ ಬುಕ್, ಡಿಮ್ಯಾಂಡ್ ಸ್ಲಿಪ್, ಐಟಿ ಚಲನ್ ಸೇರಿವೆ.ವಿತರಣಾ ಸೇವೆ(ಡೆಲಿವರಿ ಸರ್ವೀಸ್​): ವಿತರಣಾ ಸೇವೆಯಲ್ಲಿ ಡ್ರಾಫ್ಟ್, ಪೇ ಆರ್ಡರ್, ಸ್ಥಿರ ಠೇವಣಿ ರಸೀದಿಗಳು, ಖಾತೆಯ ವಿವರ, ಟಿಡಿಎಸ್, ಫಾರ್ಮ್ -16 ಪ್ರಮಾಣ ಪತ್ರಗಳು ಸೇರಿವೆ.ಇತರ ಸೇವೆ(ಅದರ್​ ಸರ್ವೀಸ್​): ಇದರಲ್ಲಿ ನಗದು ಹಿಂಪಡೆಯುವಿಕೆ ಮತ್ತು ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರ ಸೌಲಭ್ಯ ಸಿಗಲಿದೆ.
ನೋಂದಣಿ ಅವಶ್ಯಕಮನೆಯ ಬಾಗಿಲಿಗೆ ಈ ಎಲ್ಲಾ ಸೇವೆಗಳನ್ನು ಪಡೆಯಲು ಮೊದಲು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಹೆಸರು ನೋಂದಾಯಿಸಬೇಕು. ನಿಮ್ಮ ಖಾತೆ ಹೊಂದಿರುವ ಶಾಖೆಯಲ್ಲಿ ಹೆಸರು ನೋಂದಣಿಯಾದರೆ ಮಾತ್ರ ಈ ಸೌಲಭ್ಯ ಪಡೆಯಬಹುದು.
ನಗದು ಹಿಂಪಡೆಯುವಿಕೆ ಮತ್ತು ನಗದು ಠೇವಣಿ ಮಿತಿ ಪ್ರತಿ ದಿನ 20 ಸಾವಿರ ರೂಪಾಯಿಗೆ ನಿಗದಿಪಡಿಸಲಾಗಿದೆ. ಇದಕ್ಕೆ ಸೇವಾ ಶುಲ್ಕ ಭರಿಸಬೇಕು. ಹಣಕಾಸೇತರ ವಹಿವಾಟಿಗೆ 60 ರೂಪಾಯಿ ಜತೆ ಜಿಎಸ್​ಟಿ ಪಾವತಿ ಮಾಡಬೇಕು. ಹಣಕಾಸಿನ ವಹಿವಾಟಿಗೆ 100 ರೂಪಾಯಿ ಜತೆ ಜಿಎಸ್​ಟಿ ವಿಧಿಸಲಾಗುತ್ತದೆ.
ಯಾರ್‍ಯಾರು ಈ ಸೌಲಭ್ಯ ಪಡೆಯಬಹುದು?ದೃಷ್ಟಿಹೀನ ವ್ಯಕ್ತಿಗಳು, ವಿಕಲಚೇತನರು ಸೇರಿದಂತೆ 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಈ ಸೇವೆ ಪಡೆಯಬಹುದು. ಕೆವೈಸಿ ಪೂರ್ಣಗೊಳಿಸಿರುವ ಖಾತೆದಾರರಿಗೆ ಇದು ಲಭ್ಯವಾಗಲಿದೆ. ಮೊಬೈಲ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಿರಬೇಕು. ಜಂಟಿ ಖಾತೆಗಳು, ಸಣ್ಣ ಖಾತೆಗಳು, ಶಾಖೆಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಇರುವ ಗ್ರಾಹಕರಿಗೆ ಈ ಸೌಲಭ್ಯ ಲಭ್ಯವಿಲ್ಲ.
ಸೇವೆ ಹೇಗೆ ಆರಂಭಿಸುವುದು?ಐಒಎಸ್ ಮತ್ತು ಆಂಡ್ರಾಯ್ಡ್ ಪ್ಲೇ ಸ್ಟೋರ್​ನಿಂದ ಮೊದಲು ಡೋರ್ ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ ಡೌನ್​ಲೋಡ್​ ಮಾಡಿಕೊಳ್ಳಬೇಕು. ನೋಂದಾಯಿಸಲು ಮೊದಲು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಇದಕ್ಕೆ ಬರುವ ಒಟಿಪಿಯನ್ನು ನಮೂದಿಸಬೇಕು. ದೃಢೀಕರಣದ ನಂತರ ಹೆಸರು ಮತ್ತು ಇಮೇಲ್, ಪಾಸ್​ವರ್ಡ್​ ಒದಗಿಸಬೇಕು.ನಿಯಮಗಳು ಮತ್ತು ಷರತ್ತುಗಳಿಗೆ ಓಕೆ ಅನ್ನಬೇಕು. ಇಷ್ಟಾದ ಮೇಲೆ ಎಸ್‌ಎಂಎಸ್ ಬರುತ್ತದೆ. ಹೆಚ್ಚುವರಿ ಮಾಹಿತಿಯನ್ನು ನಮೂದಿಸಲು ಪಿನ್‌ನೊಂದಿಗೆ ಅಪ್ಲಿಕೇಷನ್​ಗೆ ಲಾಗಿನ್ ಆಗಬೇಕು. ವಿಳಾಸದ ಆಯ್ಕೆ ಆರಿಸಿ ಅಲ್ಲಿ ವಿಳಾಸ ನಮೂದಿಸಬೇಕು. ಎಸ್‌ಬಿಐ ಡೋರ್ ಸ್ಟೆಪ್ಸ್ ಬ್ಯಾಂಕಿಂಗ್ ಸೇವೆಗಳನ್ನು ಮೊಬೈಲ್ ಅಪ್ಲಿಕೇಶನ್, ವೆಬ್ ಪೋರ್ಟಲ್ ಮತ್ತು ಕಾಲ್ ಸೆಂಟರ್ ಮೂಲಕ ಪಡೆಯಬಹುದು.
ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಕನಸು ನುಚ್ಚುನೂರು: 8500 ಹುದ್ದೆ ರದ್ದು ಮಾಡಿದ ಎಸ್​ಬಿಐ

ಜುಲೈ 1ರಿಂದ ಹಣ ವಿತ್‌ಡ್ರಾ, ಚೆಕ್‌ಬುಕ್‌ನಲ್ಲಿ ಭಾರಿ ಬದಲಾವಣೆ- ಇಲ್ಲಿದೆ ನೋಡಿ ಡಿಟೇಲ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
