ಮುಂಬೈ:ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್​ಗಳಿಂದ ತೆಗೆದುಕೊಂಡಿರುವ ಸಾಲದ ಇಐಎಂ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾದಿಂದ ಭರ್ಜರಿ ಸುದ್ದಿ ಸಿಕ್ಕಿದೆ.
ಗೃಹಸಾಲ ಸೇರಿದಂತೆ ಇತರ ಸಾಲಗಳನ್ನು ಪಡೆದಿರುವ ಗ್ರಾಹಕರು ಕಟ್ಟಬೇಕಿರುವ ಇಎಂಐ ಅವಧಿಯನ್ನು ಬ್ಯಾಂಕ್​ ಎರಡು ವರ್ಷ ಅಂದರೆ 24 ತಿಂಗಳವರೆಗೆ ವಿಸ್ತಾರ ಮಾಡಿದೆ.
ಇದಕ್ಕಾಗಿ ಸ್ಟೇಟ್​ ಬ್ಯಾಂಕ್​ ವತಿಯಿಂದ ಹೊಸದೊಂದು ಪೋರ್ಟಲ್​ ತೆರೆಯಲಾಗಿದ್ದು, ಅಲ್ಲಿ ನೀವು ಈ ಸೌಲಭ್ಯಕ್ಕೆ ಅರ್ಹರೋ ಎಂಬುದನ್ನು ತಿಳಿದುಕೊಳ್ಳಬಹುದು. ಏಕೆಂದರೆ, ಈ ಸೌಲಭ್ಯವನ್ನು ಪಡೆಯಲು ಒಂದು ಷರತ್ತನ್ನು ಎಸ್​ಬಿಐ ವಿಧಿಸಿದೆ.
ಇಎಂಐ ಪಡೆಯಲು ಯಾರು ಅರ್ಹರು? ಈ ಲಿಂಕ್ ಕ್ಲಿಕ್​ ಮಾಡಿ:ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​
ಅದೇನೆಂದರೆ, 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಅಷ್ಟೇ ಅಲ್ಲದೇ, ಇಐಎಂ ಎರಡು ವರ್ಷ ಮುಂದೂಡಿದ ಮಾತ್ರಕ್ಕೆ ಗ್ರಾಹಕರು ತುಂಬಬೇಕಿರುವ ಮೊತ್ತವು ಕಡಿಮೆಯಾಗುತ್ತದೆ ಎಂಬ ಅರ್ಥ ಕಲ್ಪಿಸಕೂಡದು. ಏಕೆಂದರೆ, ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವವರು ಎರಡು ವರ್ಷಗಳವರೆಗೆ ಕಂತನ್ನು ತುಂಬಬೇಕಿಲ್ಲ ಎನ್ನುವುದು ನಿಜವಾದರೂ, ಈ ಅವಧಿ ಮುಗಿದ ಮೇಲೆ 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್​ ಸ್ಪಷ್ಟಪಡಿಸಿದೆ.
ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

ಕೇಂದ್ರ, ರಾಜ್ಯದ ವಿರುದ್ಧ ಪ್ರತಿಭಟನೆ: 25ರಂದು ಕರ್ನಾಟಕ ಆಗಲಿದೆಯೇ ಬಂದ್​?

ಮತ್ತೊಂದು ಮದ್ವೆಯಾಗಬೇಡ ಎಂದ ಮಗನನ್ನು ಕಚ್ಚಿಕಚ್ಚಿ ಹಾಕಿದ ಅಪ್ಪ!

ಒಂದೇ ರೂಪಾಯಿಯಲ್ಲಿ ಕರೊನಾ ಗೆದ್ದ 106 ವರ್ಷದ ಅಜ್ಜಿ!

ಉಡುಪಿ ಜಿಲ್ಲೆಯ ಬಂದರಿನಲ್ಲಿ ವಿಚಿತ್ರ ವಸ್ತು ಪತ್ತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten − 2 =
Remember me
