ಧರ್ಮಾವರಂ (ಹೈದರಾಬಾದ್​):ಗಾರೆ ಕೆಲಸ ಮಾಡುತ್ತಿದ್ದ ಪ್ರೇಮಿಯೊಬ್ಬ ತನ್ನ ಮಾಜಿ ಪ್ರೇಯಸಿಯನ್ನು ಬೆಂಕಿ ಹಚ್ಚಿ ಸುಟ್ಟುಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದ ಧರ್ಮಾವರಂಬಲ್ಲಿ ನಡೆದಿದೆ.
ಆರೋಪಿಯನ್ನು ಗೂಟೈ ರಾಜೇಶ್ ಎಂದು ಗುರುತಿಸಲಾಗಿದ್ದು, ಕೊಲೆಯಾದ ಯುವತಿ ಸ್ನೇಹಲತಾ.
ಪೊಲೀಸರ ಪ್ರಕಾರ ಇವರಿಬ್ಬರೂ ಪ್ರೀತಿಸುತ್ತಿದ್ದರು. ಗಾರೆ ಕೆಲಸ ಮಾಡುತ್ತಿದ್ದ ಯುವಕನ ಪ್ರೀತಿಗೆ ಸ್ನೇಹಲತಾ ಬಿದ್ದಿದ್ದಳು. ಅದರೆ ಆಕೆಗೆ ಆಗಿನ್ನೂ ಕೆಲಸ ಸಿಕ್ಕಿರಲಿಲ್ಲ. ನಂತರ ಬ್ಯಾಂಕ್​ ಒಂದರಲ್ಲಿ ಗುತ್ತಿಗೆ ಆಧಾರದ ಮೇಲೆ ಆಕೆಗೆ ಕೆಲಸ ಸಿಕ್ಕಿದೆ.
ಕೆಲಸ ಸಿಗುತ್ತಿದ್ದಂತೆಯೇ ಸ್ನೇಹಲತಾ ತನ್ನ ವರಸೆ ಬದಲಿಸಲು ಶುರು ಮಾಡಿದ್ದಳು ಎನ್ನಲಾಗಿದೆ. ಆಕೆ ಮತ್ತೊಬ್ಬ ಯುವಕನ ಜತೆ ಸಂಬಂಧ ಹೊಂದಿರುವುದಾಗಿ ರಾಜೇಶ್​ ಸದಾ ಜಗಳ ತೆಗೆಯುತ್ತಿದ್ದನಂತೆ. ಮಾತ್ರವಲ್ಲದೇ, ಆಕೆ ತನ್ನನ್ನು ಅಸಡ್ಡೆ ಮಾಡಲು ಶುರು ಮಾಡಿದಳು. ನನ್ನ ಕಣ್ಣೆದುರಿಗೇ ಬೇರೊಬ್ಬ ಯುವಕನ ಜತೆ ಸುತ್ತಾಡಲು ತೊಡಗಿದಳು. ಇದರಿಂದ ನನಗೆ ಸಹಿಸಲು ಆಗಲಿಲ್ಲ.
ಅವಳನ್ನು ಭೇಟಿಯಾಗಿ ಮಾತನಾಡುವ ಎಂದರೆ ಆಕೆ ಅದಕ್ಕೂ ಆಸ್ಪದ ಕೊಡಲಿಲ್ಲ ಎಂದು ದೂರಿರುವ ರಾಜೇಶ್​, ಕೊನೆಗೂ ಸ್ನೇಹಲತಾಳನ್ನು ಭೇಟಿಯಾಗುವಲ್ಲಿ ಯಶಸ್ವಿಯಾಗಿದ್ದ. ಮಾತನಾಡಬೇಕು ಎಂದು ಹೇಳಿ ಆಕೆಯನ್ನು ಬೈಕ್‌ನಲ್ಲಿ ಕರೆದೊಯ್ದಿದ್ದಾನೆ.
ಇನ್ನೊಬ್ಬನ ಜತೆ ಸುತ್ತಾಡುವ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದೆ. ನಂತರ ರಾಜೇಶ್​ ಆಕೆಯನ್ನುಉಸಿರುಗಟ್ಟಿಸಿ ಸಾಯಿಸಿದ್ದಾನೆ. ಬ್ಯಾಂಕ್​ನಿಂದ ನೇರವಾಗಿ ರಾಜೇಶ್​ ಬಳಿ ಬಂದಿದ್ದರಿಂದ ಸ್ನೇಹಲತಾ ಅವಳ ಬಳಿ ಬ್ಯಾಂಕ್​ಗೆ ಸಂಬಂಧಿಸಿದ ಕೆಲವೊಂದು ಕಾಗದಪತ್ರಗಳು ಇದ್ದವು. ಅದಕ್ಕೆ ಬೆಂಕಿ ಹಚ್ಚಿದ ರಾಜೇಶ್​ ಅದನ್ನು ಶವದ ಮೇಲೆ ಹಾಕಿ ಗುರುತು ಸಿಗದಂತೆ ಮಾಡಿದ್ದಾನೆ.
ಯುವತಿಯ ಫೋನ್​ ಚೆಕ್​ ಮಾಡಿದಾಗ ಅದರಲ್ಲಿ ಕಳೆದ ಒಂದು ವರ್ಷದಲ್ಲಿ ಸ್ನೇಹಲತಾ ಮತ್ತು ರಾಜೇಶ್ 1,618 ಬಾರಿ ಕರೆ ಮಾತನಾಡಿರುವುದು ತಿಳಿದುಬಂದಿದೆ. ಆದ್ದರಿಂದ ರಾಜೇಶ್​ ಹೇಳಿರುವ ಹೇಳಿಕೆ ಮೇಲ್ನೋಟಕ್ಕೆ ನಿಜ ಎಂದು ಕಾಣಿಸುತ್ತಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಸದ್ಯ ತಾನು ಕೊಲೆ ಮಾಡಿರುವ ವಿಷಯವನ್ನು ರಾಜೇಶ್​ ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.
ಬಿಜೆಪಿ ಜತೆ ಮೈತ್ರಿ ಮಾಡ್ಕೋಬೇಡಾ ಎಂದು ಬಡ್ಕೊಂಡೆ… ಈಗ ಗೋಳೋ ಎಂದ್ರೆ ಏನ್​ ಬಂತು?

ಕೋವಿಡ್​ನ ಹೊಸರೂಪ ತಿಳಿಯುವ ಮೊದಲೇ ಬ್ರಿಟನ್​ನಲ್ಲಿ ಒಕ್ಕರಿಸಿದೆ ಆಫ್ರಿಕಾ ವೈರಸ್​!

ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:8 − 4 =
Remember me
