ನವದೆಹಲಿ:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಪ್ರೆಂಟಿಸ್​ ಆಗಿ ಸೇವೆ ಸಲ್ಲಿಸಲು ಬಯಸಿ ಅರ್ಜಿ ಸಲ್ಲಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಬಿಗ್​ ಶಾಕ್​ ನೀಡಿದೆ. ಕಳೆದ ನವೆಂಬರ್ 20ರಂದು 8500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕರೆದಿದ್ದ ಅರ್ಜಿಯನ್ನು ರದ್ದುಗೊಳಿಸಿದೆ. ಈ ಮೂಲಕ ಲಕ್ಷಾಂತರ ಅಭ್ಯರ್ಥಿಗಳ ಕನಸು ನುಚ್ಚುನೂರಾಗಿದೆ.ಅನಿವಾರ್ಯ ಕಾರಣಗಳಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗಿದ್ದು, ಅಭ್ಯರ್ಥಿಗಳು ಸಂದಾಯ ಮಾಡಿರುವ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ ಎಂಬುದಾಗಿ ಎಸ್​ಬಿಐ ಹೇಳಿದೆ. ಆದರೆ ಈ ಶುಲ್ಕ ವಾಪಸ್​ ಹೇಗೆ ನೀಡುತ್ತದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಬ್ಯಾಂಕ್ ಹಣವನ್ನು ಅಭ್ಯರ್ಥಿಗಳ ಖಾತೆಗೆ ಜಮಾ ಆಗಬಹುದು ಇಲ್ಲವೇ ನಿಗದಿತ ನಮೂನೆ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಬೇಕಾಗಬಹುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಬ್ಯಾಂಕ್​ ತಿಳಿಸಲಿದೆ.
ಆದರೆ ಇದೇ ವೇಳೆ ಹೊಸದಾಗಿ 6100 ಹುದ್ದೆಗಳ ನೇಮಕಾತಿಗೆ ಎಸ್​ಬಿಐ ಹೊಸದಾಗಿ ಅರ್ಜಿ ಕರೆದಿದೆ. ಈ ಅರ್ಜಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಈ ಹೊಸ ನೇಮಕಾತಿಯ ಕುರಿತು ಇಲ್ಲಿದೆ ಮಾಹಿತಿ:ಪದವೀಧರರಿಗೆ ಗುಡ್‌ನ್ಯೂಸ್‌- 6100 ಮಂದಿ ಅಪ್ರೆಂಟಿಸ್‌ಗೆ ಆಹ್ವಾನಿಸಿದ ಎಸ್‌ಬಿಐ
ಬಾಂಬ್​ ಕಟ್ಟಿಕೊಂಡು ಭಾರಿ ಸ್ಫೋಟಕ್ಕೆ ಸಂಚು! ಸ್ವಲ್ಪದರಲ್ಲಿಯೇ ತಪ್ಪಿತು ಭಾರಿ ಅನಾಹುತ
ಫೋಟೋದಲ್ಲಿದ್ದ ಚಿನ್ನದ ಸರವೇ ಮಹಿಳೆ ಪ್ರಾಣ ಕಸಿದುಕೊಂಡಿತು! ಭೀಕರ ಪ್ರಕರಣವನ್ನು ಭೇದಿಸಿದ ಪೊಲೀಸರು
ಡಿವೋರ್ಸ್​ ಆಗಿದ್ದು, ಮಕ್ಕಳಿಗಾಗಿ ಒಂದಾಗಲು ತೀರ್ಮಾನಿಸಿದ್ದೇವೆ- ಈಗ ಏನು ಮಾಡಬೇಕು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
