ನವದೆಹಲಿ:ಕೋವಿಡ್‌ ಹಿನ್ನೆಲೆಯಲ್ಲಿ 2020ರ ಮಾರ್ಚ್ 1 ರಿಂದ ಆಗಸ್ಟ್ 31 ರವರೆಗೆ ಸಾಲಗಾರರು ಪಾವತಿ ಮಾಡಬೇಕಿದ್ದ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ಸಾಲಗಾರನಿಂದ ಚಕ್ರಬಡ್ಡಿಯನ್ನು ಬ್ಯಾಂಕ್‌ಗಳು ಪಡೆದುಕೊಂಡಿದ್ದರೆ, ಅವರಿಗೆ ಅದನ್ನು ಹಿಂದಿರುಗಿಸುವ ಬದಲು, ಅವರ ಮುಂದಿನ ಬಡ್ಡಿಯ ಕಂತಿನಲ್ಲಿ ಅದನ್ನು ಸರಿದೂಗಿಸುವಂತೆ ಕೋರ್ಟ್‌ ಹೇಳಿದೆ.
ಆದರೆ ಯಾವುದೇ ಕಾರಣಕ್ಕೂ ಈ ಅವಧಿಯನ್ನು ವಿಸ್ತರಣೆ ಮಾಡಲು (ಮೊರಟೋರಿಯಂ ಪಿರಿಯಡ್‌) ಸಾಧ್ಯವಿಲ್ಲ ಎಂಬ ಆರ್‌ಬಿಐ ಮಾತಿಗೆ ಕೋರ್ಟ್‌ ಸಮ್ಮತಿ ನೀಡಿದೆ. ಜತೆಗೆ, ಈ ಅವಧಿಯಲ್ಲಿನ ಚಕ್ರಬಡ್ಡಿಯ ಜತೆಗೆ, ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿ ಹಲವಾರು ಸಾಲಗಾರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಲಾಕ್‌ಡೌನ್‌ನಿಂದಾಗಿ ಹಲವಾರು ಸಾಲಗಾರರು ತೊಂದರೆ ಅನುಭವಿಸಿದ್ದ ಹಿನ್ನೆಲೆಯಲ್ಲಿ, ಆರ್‌ಬಿಐ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿ, 2020ರ ಮಾರ್ಚ್‌ 1 ರಿಂದ ಮೇ 31ರವರೆಗೆ ಸಾಲಗಾರರಿಂದ ಮಾಸಿಕ ಕಂತಿನ ಮರುಪಾವತಿಗೆ ಬೇಡಿಕೆ ಒಡ್ಡದಂತೆ ಸೂಚಿಸಿತ್ತು. ನಂತರ ಈ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಣೆ ಮಾಡಿತ್ತು. ಆದರೆ ಈ ಅವಧಿಯಲ್ಲಿ ಯಾರ್ಯಾರು ಕಂತುಗಳನ್ನು ಕಟ್ಟಲಿಲ್ಲವೋ ಅವರಿಗೆ ಬಡ್ಡಿ ಮತ್ತು ಚಕ್ರಬಡ್ಡಿಯನ್ನು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹಲವಾರು ಸಾಲಗಾರರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.
ಅರ್ಜಿದಾರರ ಮನವಿಯನ್ನು ಭಾಗಶಃ ಒಪ್ಪಿಕೊಂಡಿರುವ ಸುಪ್ರೀಂಕೋರ್ಟ್‌, ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಹೇಳಿದೆ. ಆದರೆ ಈ ಮೊರಿಟೋರಿಯಂ ಅವಧಿಯ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಿದರೆ ಕೇಂದ್ರದ ಬೊಕ್ಕಸಕ್ಕೆ ಆರು ಲಕ್ಷ ಕೋಟಿ ನಷ್ಟ ಆಗುವುದಾಗಿ ಕೇಂದ್ರ ಸರ್ಕಾರ ಮಾಡಿದ್ದ ವಾದವನ್ನು ಕೋರ್ಟ್‌ ಪರಿಗಣನೆಗೆ ತೆಗೆದುಕೊಂಡು, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
ಕುಡಿದು ಸತ್ತರೆ ವಿಮೆ ಹಣ ಸಿಗಲ್ಲ: ಮಹತ್ವದ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಏನು ಹೇಳಿದೆ ನೋಡಿ…

ಗಂಡ ಗಿಫ್ಟ್‌ ಕೊಡಿಸ್ತಾರೆ, ಸುತ್ತಾಡಿಸ್ತಾರೆ… ಆದ್ರೆ ಅಸಲಿ ಮುಖ ಭಯಾನಕ- ಅವರಿಂದ ಹೇಗೆ ಮುಕ್ತಿ ಪಡೆಯಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
