ತಿರುವನಂತಪುರ:ಶೂಟಿಂಗ್​ ವೇಳೆ ಅನೇಕಬಾರಿ ಅನೇಕ ರೀತಿಯ ಅನಾಹುತಗಳು ಸಂಭವಿಸುವುದು ಮಾಮೂಲು. ಅದರಲ್ಲಿಯೂ ಹೆಚ್ಚಾಗಿ ಅಪಾಯಕಾರಿ ಸ್ಟಂಟ್​ಗಳನ್ನು ಖುದ್ದು ನಾಯಕ-ನಾಯಕಿಯರೇ ಮಾಡಲು ಮುಂದಾದಾಗ ಇಂಥ ಅಪಾಯಗಳು ಸಂಭವಿಸುವುದುಂಟು.
ಅಂಥದ್ದೇ ಒಂದು ಅನಾಹುತ ಮಲಯಾಳಂ ಸೆಟ್​ನಲ್ಲಿ ಇಂದು ನಡೆದಿದೆ. ಖ್ಯಾತ ನಟ ಜಯಸೂರ್ಯ ಅವರು ಅಭಿನಯಿಸುತ್ತಿರುವ “ವೆಲ್ಲಂ” ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ಸಂಭವಿಸಿದೆ.
ಈ ಚಿತ್ರದಲ್ಲಿ ಜಯಸೂರ್ಯ ಅವರು ಪವರ್​ ಟಿಲ್ಲರ್​ ಎಳೆದುಕೊಂಡು ಹೋಗುವ ದೃಶ್ಯವಿದೆ. ಆ ದೃಶ್ಯವನ್ನು ಮಾಡುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ಟಿಲ್ಲರ್​ ಅವರನ್ನು ಎಳೆದುಕೊಂಡು ಹೋಗಿದೆ. ಕೂಡಲೇ ಭಯಭೀತರಾದ ನಟ ದಿಗಿಲುಗೊಳ್ಳುತ್ತಿದ್ದಂತೆಯೇ ಅಲ್ಲಿದ್ದ ಸಿಬ್ಬಂದಿ ಕೂಡಲೇ ಓಡೋಡಿ ಬಂದಿದ್ದಾರೆ.
ಶೂಟಿಂಗ್​ ವೇಳೆ ಮಲಯಾಳಂ ನಟ ಜಯಸೂರ್ಯನನ್ನು ಎಳೆದೊಯ್ದ ಟಿಲ್ಲರ್​- ಸ್ವಲ್ಪದರಲ್ಲೇ ತಪ್ಪಿದೆ ಅಪಾಯ#shooting#jayasooryapic.twitter.com/TH7VNLeZKI
— Vijayavani (@VVani4U)December 21, 2020

ಅವರೆಲ್ಲರೂ ಸೇರಿ ನಟನನ್ನು ತಕ್ಷಣವೇ ಹಿಡಿದುಕೊಂಡ ಕಾರಣ, ಭಾರಿ ಅನಾಹುತ ತಪ್ಪಿದೆ. ಪವರ್​ ಟಿಲ್ಲರ್​ ದೃಶ್ಯವು ಸ್ವಲ್ಪಅಪಾಯಕಾರಿಯಾಗಿದ್ದು, ಡ್ಯೂಪ್​ ಬಳಸಿಕೊಳ್ಳುವಂತೆ ಹೇಳಲಾಗಿತ್ತು. ಆದರೆ ಜಯಸೂರ್ಯ ಅವರು ಈ ದೃಶ್ಯವನ್ನು ತಾವೇ ಮಾಡುವುದಾಗಿ ಹೇಳಿ ಅದರ ತರಬೇತಿ ಕೂಡ ಪಡೆದುಕೊಂಡಿದ್ದರು.
ಆದರೆ ಶೂಟಿಂಗ್​ ವೇಳೆ ನಿಯಂತ್ರಣ ತಪ್ಪಿಬಿಟ್ಟಿದೆ ಎಂದು ಚಿತ್ರತಂಡ ಹೇಳಿದೆ.
ಇದೇ ವೇಳೆ ತಮ್ಮ ನೂರನೇ ಚಿತ್ರವಾದ “ಸನ್ನಿ”ಯಲ್ಲಿ ಜಯಸೂರ್ಯ ನಟಿಸುತ್ತಿದ್ದು, ಆ ಚಿತ್ರದ ಚಿತ್ರೀಕರಣ ಮುಗಿಸಿ ಈ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದರು. ಸ್ವಲ್ಪ ಸುಸ್ತಾಗಿದ್ದರಿಂದ ಹೀಗಾಗಿರಬಹುದು ಎಂದು ತಂಡ ಹೇಳಿದೆ. ಒಟ್ಟಿನಲ್ಲಿ ಅಪಾಯ ತಪ್ಪಿದೆ.
ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿದ್ದು, ಜಯಸೂರ್ಯ ಅವರ ಅಭಿಮಾನಿಗಳನ್ನು ಕಂಗೆಡಿಸಿದೆ. ತಮ್ಮ ನೆಚ್ಚಿನ ನಟನಿಗೆ ಏನೂ ಅಪಾಯ ಆಗದೇ ಇರುವ ಕಾರಣ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ. ಈ ದೃಶ್ಯಕ್ಕೆ ಡ್ಯೂಪ್​ ಬಳಸಿಕೊಳ್ಳುವಂತೆ ಸಲಹೆ ಕೊಟ್ಟಿದ್ದಾರೆ.
ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

400 ವರ್ಷಗಳ ಬಳಿಕ ಆಗಸದಲ್ಲಿ ಇಂದು ಕೌತುಕ- ನೀವೂ ಕಣ್ತುಂಬಿಸಿಕೊಳ್ಳಬಹುದು ಈ ‘ಮಹಾ ಸಂಯೋಗ’

ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
