ಇರಾನ್​:ವಿಶ್ವಾದ್ಯಂತ ಕರೊನಾ ಹಾವಳಿ ಮುಂದುವರಿಯುತ್ತಿರುವ ಬೆನ್ನಲ್ಲೇ ಕರೊನಾದೊಂದಿಗೇ ಬದುಕಲು ಕಲಿಯಲು ಎಲ್ಲರೂ ಶುರುಮಾಡಿದ್ದಾರೆ. ಹಲವು ಕಡೆಗಳಲ್ಲಿ ಜೀವನ ಯಥಾಸ್ಥಿತಿಗೆ ಮರಳುತ್ತಲಿದೆ.
ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮಾತ್ರ ಕರೊನಾ ಭಯ ಇರುವ ಹಿನ್ನೆಲೆಯಲ್ಲಿ, ಶಾಲಾ-ಕಾಲೇಜುಗಳನ್ನು ತೆರೆಯಬೇಕೋ, ಬೇಡವೋ ಎಂಬುದು ಇನ್ನೂ ಚರ್ಚಾಸ್ಪದವಾಗಿದೆಯೇ ಇದೆ. ಕೆಲವು ದೇಶಗಳಲ್ಲಿ ಶಾಲೆಗಳನ್ನು ತೆರೆದು ಕರೊನಾ ಹಾವಳಿ ಹೆಚ್ಚಾಗಿದ್ದರಿಂದ ಪುನಃ ಬಂದ್​ ಮಾಡಿರುವ ಘಟನೆಗಳೂ ನಡೆದಿವೆ.
ಸದ್ಯ ಕರ್ನಾಟಕದಲ್ಲಿ ಭಾಗಶಃ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಶಾಲೆಗಳ ಜತೆಗೆ ಪಾಲಕರಿಗೂ ತಳಮಳ ಆಗಿರುವುದಂತೂ ನಿಜ.
ಅದೇನೇ ಇರಲಿ. ಇರಾನ್​ನ ಕೆಲವು ಕಡೆಗಳಲ್ಲಿ ಶಾಲೆಗಳು ಆರಂಭವಾಗಿವೆ. ಕರೊನಾದಿಂದಾಗಿ ಏಳು ತಿಂಗಳ ಕಾಲ ಸ್ಥಗಿತಗೊಂಡಿದ್ದ ಶಾಲೆಗಳನ್ನು ಅಲ್ಲಿ ಆರಂಭಿಸಲಾಗಿದೆ. ಚಿಕ್ಕಮಕ್ಕಳಿಗೂ ಶಾಲೆ ಆರಂಭ ಮಾಡಲಾಗಿದ್ದು, ಅವರ ಸ್ಥಿತಿಯನ್ನು ವರ್ಣಿಸುವ ಚಿತ್ರವೊಂದು ಇದೀಗ ವೈರಲ್​ ಆಗಿದೆ. ‘
School in the age of pandemic in Iran.pic.twitter.com/Gg6v7KMhbh
— Farnaz Fassihi (@farnazfassihi)September 8, 2020

ಸೊಳ್ಳೆಪರದೆ ಮಾದರಿಯ ಪಾರದರ್ಶಕ ಡೇರೆಯೊಳಗೆ ಕುಳಿತಿರುವ ಮಕ್ಕಳು ಶಿಕ್ಷಕರ ಪಾಠವನ್ನು ಆಲಿಸುವುದನ್ನು ಫೋಟೋದಲ್ಲಿ ನೋಡಬಹುದಾಗಿದೆ. ಈ ಡೇರೆಯೊಳಗೆ ಮಕ್ಕಳು ಕರೊನಾದಿಂದ ದೂರ ಇರಬಹುದು ಎನ್ನುತ್ತಿದೆ ಶಾಲೆಯ ಆಡಳಿತ ಮಂಡಳಿ. ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಮಸ್ಯೆ ಆಗಲಾರದು ಎನ್ನುವುದು ಶಾಲೆಯ ಸ್ಪಷ್ಟನೆ.
ಈ ಫೋಟೋಗೆ ಪರ-ವಿರೋಧ ಎರಡೂ ವ್ಯಕ್ತವಾಗಿದೆ. ಕೆಲವರು ಶಾಲೆಗೆ ಭೇಷ್​ ಎಂದಿದ್ದರೆ, ಹಲವರು ಮಕ್ಕಳ ಮೇಲೆ ಆತಂಕ ವ್ಯಕ್ತಪಡಿಸಿದ್ದಾರೆ.ಅಂದಹಾಗೆ ಇರಾನ್​ನಲ್ಲಿ ಇದುವರೆಗೆ 3.93 ಲಕ್ಷ ಮಂದಿಗೆ ಕರೊನಾ ಸೋಂಕು ತಗುಲಿದ್ದು, 3.39 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 22,669 ಮಂದಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.
https://www.vijayavani.net/s-supreme-court-in-emi-moratorium/
ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − seven =
Remember me
