ಉಜ್ಬೇಕಿಸ್ತಾನ್‌:ಉಜ್ಬೇಕಿಸ್ತಾನ್‌ನಲ್ಲಿ ನಡೆಯುತ್ತಿರುವ ಪ್ರಾದೇಶಿಕ ಶೃಂಗಸಭೆಯಲ್ಲಿ ಇಯರ್​ ಫೋನ್​ ಹಾಕಿಕೊಳ್ಳಲು ಸಿಕ್ಕಾಪಟ್ಟೆ ಪರದಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಅವರು ಇಯರ್​ ಫೋನ್​ ಹಾಕಿಕೊಳ್ಳಲು ಸಾಧ್ಯವಾಗದೇ ಕೆಲವು ನಿಮಿಷ ಪರದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.
ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್​ ಈ ದೃಶ್ಯ ನೋಡಿ ಕಿರುನಗೆ ಬೀರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪುತಿನ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಇಯರ್​ಫೋನ್​ ಹಾಕಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಟ್ರಾನ್ಸ್‌ಲೇಟರ್ ಟೂಲ್ ಇರುವ ಇಯರ್‌ಫೋನ್‌ ಇದಾಗಿದ್ದು, ಮುಖಂಡರು ಭಾಷಣ ಮಾಡುವಾಗ ಹಿಂದಿಯಲ್ಲಿ ಭಾಷಾಂತರ ಮಾಡಿ ಅದನ್ನು ಇದರ ಮೂಲಕ ಕೇಳಿಸಲಾಗುತ್ತದೆ.
ಆದರೆ ಅದನ್ನು ಹಾಕಿಕೊಳ್ಳಲು ಪ್ರಧಾನಿ ಪರದಾಡಿದರು. ಕೊನೆಗೆ ಸಾಧ್ಯವಾಗದೇ ಹೋದಾಗ ಯಾರಾದರೂ ಪ್ಲಿಸ್​ ನನಗೆ ಸಹಾಯ ಮಾಡಿ ಎಂದು ಪಾಕ್​ ಪ್ರಧಾನಿ ಕೋರಿಕೊಂಡಿದ್ದಾರೆ. ನಂತರ ಸಭಾಂಗಣದಲ್ಲಿದ್ದ ಅಧಿಕಾರಿಗಳು ತಮ್ಮ ಟ್ರಾನ್ಸ್‌ಲೇಟರ್ ಟೂಲ್ ಇರುವ ಇಯರ್‌ಫೋನ್‌ಗಳನ್ನು ಸರಿಯಾಗಿ ಕಿವಿಗೆ ಹಾಕಿದರು. ಆದರೆ ಇಲ್ಲಿದೆ ಮುಗಿಯಲಿಲ್ಲ. ಪುತಿನ್​ ಮಾತು ಆರಂಭಿಸಿದ ಕೂಡಲೇ ಮತ್ತೊಮ್ಮೆ ಷರೀಫ್ ಅವರ ಇಯರ್ ಫೋನ್ ಕೆಳಗೆ ಬಿದ್ದು ಹೋಗಿದೆ. ಎರಡನೇ ಬಾರಿ ಮತ್ತೆ ಅಧಿಕಾರಿಗಳು ಬಂದು ಇಯರ್‌ಫೋನ್‌ ಮತ್ತೆ ಸರಿಪಡಿಸಿದರು.
ಈಗಾಗಲೇ ಹಲವು ದೇಶಗಳ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಈ ವಿಡಿಯೋದಿಂದ ಮತ್ತಷ್ಟು ನಗೆಪಾಟಲಿಗೀಡಾಗಿದೆ. ಈ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೂಡ ಹಂಚಿಕೊಂಡಿದ್ದು ವ್ಯಂಗ್ಯವಾಡಿದೆ(ಏಜೆನ್ಸೀಸ್​)
This CrimeMinister is a constant embarrassment for Pakistan. Even President Putin had to eventually just laugh at this clumsy man. Pathetic. This is what conspirators wanted? To have by design a politician who would not only be a crook but also a pathetic apology for a PM?pic.twitter.com/mmEhLY7RZg— Shireen Mazari (@ShireenMazari1)September 15, 2022
This CrimeMinister is a constant embarrassment for Pakistan. Even President Putin had to eventually just laugh at this clumsy man. Pathetic. This is what conspirators wanted? To have by design a politician who would not only be a crook but also a pathetic apology for a PM?pic.twitter.com/mmEhLY7RZg
ಬುರ್ಖಾ ತೆಗೆಯುತ್ತಿದ್ದಂತೆಯೇ ಮೂರ್ಛೆ ಹೋಗೋ ಬೆಂಗಳೂರಿನ ಚಿನ್ನದಂಗಡಿವರು! ಬ್ಲ್ಯಾಕ್​ ಮ್ಯಾಜಿಕ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ…
ಆ ನಿರ್ದೇಶಕ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ME TOO- ನಟಿ ಆಶಿತಾ ಕಣ್ಣೀರು
Sign in to your account
Please enter an answer in digits:16 + 14 =
Remember me
