ಪಟ್ನಾ:ಮದುವೆಯಾಗಿ ಒಂದು ಮಗುವಿದ್ದರೂ ಆಕೆಗೂ ತಿಳಿಯದಂತೆ, ಇನ್ನೊಬ್ಬಳಿಗೂ ಹೇಳದೇ ಮತ್ತೊಂದು ಮದುವೆಯಾದ ಭೂಪನೊಬ್ಬ ಇಬ್ಬರೂ ಪತ್ನಿಯರಿಂದ ಧರ್ಮದೇಟು ತಿಂದ ಘಟನೆ ಬಿಹಾರದ ಅಮರಪುರ ಗ್ರಾಮದಲ್ಲಿ ನಡೆದಿದೆ.
ಈ ಒಂದು ಸಾಹಸಕ್ಕೆ ಕೈಹಾಕಿ ಚಪ್ಪಲಿ ಏಟು ತಿಂದಿರುವವನ ಹೆಸರು ರೂಪೇಶ್ ಕುಮಾರ್. ಈತ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು ಒಂದು ಹೆಣ್ಣುಮಗುವಿದೆ. ಆದರೆ ಯಾರ ಅರಿವಿಗೂ ಬಾರದಂತೆ ಮತ್ತೊಂದು ಮದುವೆಯಾಗಿದ್ದಾನೆ.
ಮದುವೆಯಾಗಿ ಹೊಸ ಹೆಂಡತಿ ಜತೆಗೆ ಮನೆಗೆ ಬಂದಿರುವ ರೂಪೇಶ್‌ನನ್ನು ಕಂಡು ಮೊದಲ ಪತ್ನಿ ಹೌಹಾರಿ ಹೋಗಿದ್ದಾಳೆ. ಮೊದಲೇ ಆ ಮನೆಯಲ್ಲಿ ಹೆಣ್ಣು ಇರುವುದನ್ನು ಕಂಡು ಎರಡನೆಯ ಪತ್ನಿಯೂ ಸುಸ್ತಾಗಿದ್ದಾಳೆ. ಇದರ ನಡುವೆಯೇ ಎರಡನೆಯ ಪತ್ನಿಯನ್ನು ಸ್ವಾಗತಿಸುವಂತೆ ಮೊದಲ ಪತ್ನಿಗೆ ರೂಪೇಶ್‌ ಆವಾಜ್‌ ಹಾಕಿದ್ದಾನೆ.
ಕೂಡಲೇ ಆಕೆ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಾಳೆ. ಅಣ್ಣ ಬರುವ ಮುನ್ನವೇ ಅಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಗಂಡನಿಗೆ ಚೆನ್ನಾಗಿ ಬಾರಿಸಿದ್ದಾಳೆ.
ಇತ್ತ ಎರಡನೆಯ ಪತ್ನಿ ರೋಸಿಹೋಗಿದ್ದು, ಅಲ್ಲಿಯೇ ಸಿಕ್ಕ ಪೊರಕೆಯಿಂದಲೇ ಗಂಡನಿಗೆ ಚೆನ್ನಾಗಿ ಹೊಡೆದಿದ್ದಾಳೆ. ಇಬ್ಬರೂ ಪತ್ನಿಯರು ಥಳಿಸಿರುವುದಾಗಿ ರೂಪೇಶ್‌ ಬೊಬ್ಬೆ ಹಾಕಿದ್ದು, ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕೊನೆಯ ಮೊದಲ ಪತ್ನಿ ಇರುವುದನ್ನು ತಿಳಿದ ಎರಡನೆಯವಳು ರೂಪೇಶ್ ಕಟ್ಟಿದ್ದ ಮಾಂಗಲ್ಯ ಕಿತ್ತು, ಸಿಂಧೂರ ಅಳಸಿ ಊರಿಗೆ ಮರಳಿದಳು. ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆಯಿತು. ಸದ್ಯ ರೂಪೇಶ್ ಮೊದಲ ಪತ್ನಿಯ ಜತೆ ಇದ್ದಾನೆ.
‘ಅವ್ರಿರೋದು ಬೆಳಗಾವಿ, ನಾನಿರೋದು ಬೆಂಗಳೂರು… ಸಿಡಿ ವಿಚಾರ ಅವರ ವೈಯಕ್ತಿಕ, ನನಗ್ಹೇಗೆ ಗೊತ್ತಾಗತ್ತೆ?’

ನಿಮ್ಮ ಸಂಬಂಧ ಪತ್ನಿ ಒಪ್ಪಿಕೊಳ್ಳಬೇಕು, ಆದ್ರೆ ಅವಳ ಸಂಬಂಧ ನಿಮ್ಮಿಂದ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಲ್ವಾ?

ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − five =
Remember me
