ನವದೆಹಲಿ:ಭಾರತದ 15ನೇ ರಾಷ್ಟ್ರಪತಿ ಹುದ್ದೆ ಯಾರಿಗೆ ಒಲಿಯಲಿದೆ ಎಂಬ ಬಗೆಗಿನ ಕುತೂಹಲ ತಣಿಯಲು ಇನ್ನೆರಡೇ ಗಂಟೆ ಬಾಕಿ ಇವೆ. 8 ಗಂಟೆ ಸುಮಾರಿಗೆ ಅಂತಿಮ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ.
ಇಂದು ಬೆಳಗ್ಗೆ 11 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದ್ದು, ಇದಾಗಲೇ ಎರಡು ಸುತ್ತಿನ ಮತ ಎಣಿಕೆ ಕಾರ್ಯ ನಡೆದಿದೆ. ಎರಡನೆಯ ಹಂತದ ಎಣಿಕೆಯ ನಂತರವೂ ನಿರೀಕ್ಷೆಯಂತೆಯೇ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಮುನ್ನಡೆ ಸಾಧಿಸಿದ್ದಾರೆ.
ಎರಡನೆಯ ಹಂತದಲ್ಲಿ 10 ರಾಜ್ಯಗಳ ಶಾಸಕರ ಮತಗಳು, ಎಲ್ಲಾ ಸಂಸದರ ಮತಗಳನ್ನು ಎಣಿಕೆ ಮಾಡಲಾಗಿದೆ. 2ನೇ ಸುತ್ತಿನಲ್ಲಿ 1,138 ಶಾಸಕರ ಮತಗಳ ಪೈಕಿ ಮುರ್ಮು ಅವರು 809 ಮತ್ತು ಯಶವಂತ್ ಸಿನ್ಹಾ 329 ಮತ ಗಳಿಸಿದ್ದಾರೆ. ಜನಸಂಖ್ಯೆ ಮತ್ತು ವಿಧಾನಸಭೆ ಬಲದ ಆಧಾರದ ಮೇಲೆ ಸೂತ್ರದ ಪ್ರಕಾರ ಈ ಮತಗಳ ಮೌಲ್ಯ 1.49 ಲಕ್ಷ. ಅದರಲ್ಲಿ ಮುರ್ಮು ಅವರಿಗೆ 1.05 ಲಕ್ಷ ಮೌಲ್ಯದ ಮತಗಳು ಬಂದಿದ್ದರೆ, ಸಿನ್ಹಾ ಅವರ ಮತದ ಮೌಲ್ಯ 44,276.
ದೇಶದಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಪ್ರಸ್ತುತ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ. ಇಲ್ಲಿ ಪ್ರತಿ ಸಂಸದರ ಮತ ಮೌಲ್ಯ 708 ಆಗಿದೆ. ಇನ್ನೂ ಶಾಸಕರ ಮತ ಮೌಲ್ಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹೀಗೆ ಒಂದೊಂದು ಶಾಸಕರು ಮತ್ತು ಸಂಸದರ ಮತವನ್ನು ಕೂಡಿಸಿ ಮೌಲ್ಯಗಳನ್ನು ನೀಡಲಾಗುತ್ತದೆ.
ರಾಷ್ಟ್ರಪತಿಗಳ ಆಯ್ಕೆಗೆ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ.
ಯಾರಿಗೆ ಒಲಿಯಲಿದೆ ರಾಷ್ಟ್ರಪತಿ ಗದ್ದುಗೆ? ಮುಗಿಯಿತು ಮೊದಲ ಹಂತದ ಎಣಿಕೆ- ಹೀಗಿದೆ ಫಲಿತಾಂಶ

ಅತ್ತ ಮತ ಎಣಿಕೆ, ಇತ್ತ 20 ಸಾವಿರ ಬಗೆಯ ಸಿಹಿ ತಿಂಡಿ ತಯಾರಿ! ಮುರ್ಮು ತವರಲ್ಲೀಗ ಹಬ್ಬದ ಕಳೆ

VIDEO: ಇಂದು ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು- ಸಂಘರ್ಷದಿಂದ ಶಿಖರದವರೆಗೆ… ಪುಸ್ತಕ ಬರೆದ 13ರ ಬಾಲಕಿ,

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 17 =
Remember me
