ಗಾಂಧಿನಗರ (ಗುಜರಾತ್​):ಪುರುಷರು ಪುರುಷನನ್ನು, ಮಹಿಳೆ ಮಹಿಳೆಯನ್ನೇ ಮದುವೆಯಾಗುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದ್ದು, ಆ ಬಗ್ಗೆ ವರದಿಯಾಗುತ್ತಲೇ ಇದೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ, ಯುವಕನೂ ಬೇಡ, ಯುವತಿಯೂ ಬೇಡ ಎಂದ 24 ವರ್ಷದ ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಲಿದ್ದಾಳೆ. ಸಾಲದು ಎಂಬುದಕ್ಕೆ ಹನಿಮೂನ್​ಗೆ ಕೂಡ ಹೋಗುವುದಾಗಿ ಹೇಳಿದ್ದಾಳೆ.
ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ ಈಗ ತನ್ನನ್ನು ತಾನು ಮದುವೆಯಾಗಲು ಮುಹೂರ್ತ ಫಿಕ್ಸ್​ ಮಾಡಿಕೊಂಡಿದ್ದಾಳೆ. ಜೂನ್ 11 ರಂದು ಈಕೆಯ ಮದುವೆ, ಅವಳ ಜತೆಯೇ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಎಲ್ಲಾ ವಿಧಿ-ವಿಧಾನಗಳ ರೀತಿಯಲ್ಲಿ ಮದುವೆಯಾಗಲಿದ್ದೇನೆ. ನಂತರ ಗೋವಾಗೆ ಹನಿಮೂನ್‍ಗೆ ಹೋಗಲಿದ್ದೇನೆ ಎಂದಿದ್ದಾಳೆ.
ಈ ಬಗ್ಗೆ ಮಾಧ್ಯಮಗಳ ಜತೆಯೂ ಕ್ಷಮಾ ಮಾತನಾಡಿದ್ದಾಳೆ. ನನ್ನದು ಭಾರತದ ಮೊದಲ ಏಕವ್ಯಕ್ತಿ ವಿವಾಹ. ಈ ರೀತಿ ಇದುವರೆಗೆ ಯಾರೂ ಮದುವೆಯಾಗಲಿಲ್ಲ. ಮದುವೆಯಾಗಿರುವವರ ಹಲವಾರು ಘಟನೆಗಳನ್ನು ನೋಡಿದ್ದೇನೆ. ಅವೆಲ್ಲಾ ನೋಡಿದ ಮೇಲೆ ಮದುವೆಯಾಗದಿರುವುದೇ ಬೆಸ್ಟ್​ ಎನ್ನಿಸಿತು. ಆದರೆ ವಧುವಿನ ರೂಪದಲ್ಲಿ ನನ್ನನ್ನು ನಾನೇ ನೋಡಿಕೊಳ್ಳುವ ಆಸೆ. ನನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ. ಆದ್ದರಿಂದ ನನ್ನನ್ನು ನಾನೇ ಮದುವೆ ಯಾಕೆ ಆಗಬಾರದು ಎಂದು ಯೋಚಿಸಿ ಈ ತೀರ್ಮಾನ ತೆಗೆದುಕೊಂಡೆ ಅಂದಿದ್ದಾಳೆ.
ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದಿದ್ದಾಳೆ. ಮದುವೆಗೆ ಪಾಲಕರೂ ಒಪ್ಪಿಗೆ ಸೂಚಿಸಿ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ಮದುವೆ ನಡೆಯಲಿದೆ. ನಂತರ ನಾನೊಬ್ಬಳೇ ಹನಿಮೂನ್‍ಗೆ ಗೋವಾಕ್ಕೆ ಹೋಗಲಿದ್ದೇನೆ ಎಂದಿದ್ದಾಳೆ.
VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

ವಿದ್ಯಾರ್ಥಿನಿಯರಿಂದ ಮತ್ತೆ ಹಿಜಾಬ್​ ಕ್ಯಾತೆ: ಮನವಿಗೂ ಸ್ಪಂದಿಸದ ಉಪ್ಪಿನಂಗಡಿಯ ಆರು ಮಂದಿ ಸಸ್ಪೆಂಡ್​

ಪ್ರೇಮಿಗಾಗಿ ಜೀವದ ಹಂಗುತೊರೆದು ಗಂಟೆಗಟ್ಟಲೆ ನದಿಯಲ್ಲಿ ಈಜಿದಳು: ಆತನನ್ನೇ ಮದ್ವೆಯಾಗಿ ಅರೆಸ್ಟ್​ ಆದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − six =
Remember me
