ರಾಮಗಢ (ಮಧ್ಯಪ್ರದೇಶ):ಸೆಲ್ಫಿ ಚಟಕ್ಕೆ ಬಿದ್ದು ಬಲಿಯಾದವರು ಅದೆಷ್ಟೋ ಮಂದಿ. ಆದರೂ ಕೆಲವರಿಗೆ ಬುದ್ಧಿನೇ ಬರುವಂತೆ ತೋರುತ್ತಿಲ್ಲ.
ಅದೇ ರೀತಿಯ ದುರ್ಘಟನೆಯೊಂದು ಮಧ್ಯಪ್ರದೇಶದ ಬಾರ್ವಾನಿ ಜಿಲ್ಲೆಯಲ್ಲಿ ನಡೆದಿದೆ. ಮೊಬೈಲ್ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾಗ ಇಬ್ಬರು ಯುವಕರು ಒಂದು ಸಾವಿರ ಅಡಿ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ.
ಧಾರ್ ಜಿಲ್ಲೆಯ ದಾಹಿ ನಿವಾಸಿಗಳಾದ ದಿನೇಶ್ (25) ಮತ್ತು ರುವಬಂಟಿ (22) ಯುವಕರು ಮೃತಪಟ್ಟಿದ್ದಾರೆ. ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ರಾಮಗಢದ ಕೋಟೆಯ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದರು ಈ ಯುವಕರು.
ಇದನ್ನೂ ಓದಿ:ಗಾಂಜಾ ಬೆಳೆಯಲು ಪಶ್ಚಿಮಘಟ್ಟ ಕಾಡುಗಳೇ ಫೇವರಿಟ್
ಆದರೆ ಈ ಪ್ರದೇಶದಲ್ಲಿ ವಿಪರೀತ ಮಳೆಯಿತ್ತು. ಮಾತ್ರವಲ್ಲದೇ ಇವರು ಸೆಲ್ಫಿ ತೆಗೆದುಕೊಳ್ಳುವ ಸಮಯದಲ್ಲಿ ದಟ್ಟವಾದ ಮಂಜು ಇತ್ತು. ಬೆಟ್ಟದ ತುದಿಯಲ್ಲಿ ಸೆಲ್ಫಿಗಾಗಿ ಹೋದಾಗ ಮಂಜು ಇದ್ದುದರಿಂದ ನಿಲ್ಲುವ ಸ್ಥಳ ಸರಿಯಾಗಿ ಕಾಣಿಸುತ್ತಿರಲಿಲ್ಲ.
ಆಯತಪ್ಪಿ ಸಾವಿರ ಅಡಿಯಷ್ಟು ಕಂದಕದಲ್ಲಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳನ್ನು ನೋಡಿಕೊಳ್ಳಲು ಇಲ್ಲಿ ಸಿಗಲಿದ್ದಾನೆ ಬಾಡಿಗೆ ಅಪ್ಪ: ರೇಟ್‌ ಕೇಳಿ ಶಾಕ್‌ ಆಗ್ಬೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + ten =
Remember me
