ನವದೆಹಲಿ: ಪಾತ್ರಾ ಚಾವ್ಲ್​ ಕೇಸ್​ನಲ್ಲಿ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎರಡು ಬಾರಿ ಸಮನ್ಸ್​ ನೀಡಿದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಶಿವಸೇನಾ ಸಂಸದ ಸಂಜಯ್​ ರಾವತ್ ಅವರ ಮುಂಬೈ​ ಮನೆ ಮೇಲೆ ಕಳೆದ ವಾರ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು.
ಜುಲೈ 1 ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ಇಡಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‍ಎ) ಕ್ರಿಮಿನಲ್ ಸೆಕ್ಷನ್‍ಗಳ ಅಡಿಯಲ್ಲಿ ದಾಖಲಿಸಲಾಗಿದೆ. ಸದ್ಯ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಮುಂದುವರೆದಿರುವ ಹಿನ್ನೆಲೆಯಲ್ಲಿ ಅವರ ಬಂಧನದ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ.
ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಕೋರ್ಟ್​ನಿಂದ ಸದ್ಯ ವಜಾಗೊಂಡಿದ್ದು, ಬಂಧನದ ಅವಧಿಯನ್ನು ವಿಸ್ತರಿಸಲಾಗಿದೆ. ಇದೇ ವೇಳೆ ಕುತೂಹಲದ ಘಟನೆ ಕೂಡ ನಡೆದಿದೆ. ಅವರನ್ನು ಬಂಧಿಸಿ ಇಟ್ಟಿರುವ ಕೋಣೆಯಲ್ಲಿ ಏನಾದರೂ ಸಮಸ್ಯೆ ಇದೆಯೆ ಎಂದು ನ್ಯಾಯಾಧೀಶರು ಸಂಜಯ್​ ರಾವತ್​ ಅವರನ್ನು ಪ್ರಶ್ನಿಸಿದಾಗ, ರಾವತ್​, ಅಲ್ಲಿ ಸರಿಯಾದ ಗಾಳಿ ಬರುತ್ತಿಲ್ಲ, ಕಿಟಕಿ ವ್ಯವಸ್ಥೆ ಇಲ್ಲ ಎಂದು ದೂರಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇ.ಡಿ. ಅಧಿಕಾರಿಗಳು ರಾವತ್​ ಅವರನ್ನು ಎ.ಸಿ ರೂಮ್​ನಲ್ಲಿ ಇಡಲಾಗಿದೆ, ಅವರು ಸುಳ್ಳು ಹೇಳುತ್ತಿದ್ದಾರೆ ಎಂದರು. ನ್ಯಾಯಾಧೀಶರು ಬಂಧನ ಅವಧಿಯನ್ನು ವಿಸ್ತರಿಸಿದರು.
ಈ ನಡುವೆಯೇ, ಅವರ ಪತ್ನಿ ವರ್ಷಾ ರಾವತ್​ಗೂ ಇ.ಡಿ. ಸಮನ್ಸ್​ ಜಾರಿ ಮಾಡಿದೆ. ಈ ಅಕ್ರಮದಲ್ಲಿ ಪತ್ನಿ ಹಾಗೂ ಸ್ನೇಹಿತೆಯೂ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲು ನಿರ್ಧರಿಸಲಾಗಿದ್ದು, ಅವರಿಗೂ ಸಮನ್ಸ್​ ಜಾರಿಗೊಳಿಸಲಾಗಿದೆ.
ಏನಿದು ಪಾತ್ರಾ ಚಾವ್ಲ್​ ಹಗರಣ?ಮುಂಬೈನ ಗೋರೆಗಾಂವ್‌ನಲ್ಲಿರುವ ಸಿದ್ಧಾರ್ಥ್ ನಗರ, ಇದನ್ನು ಪಾತ್ರಾ ಚಾವ್ಲ್ ಎಂದೂ ಕರೆಯುತ್ತಾರೆ. ಇದು ಸುಮಾರು 47 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದರ ಅಭಿವೃದ್ಧಿಯಲ್ಲಿ ನಡೆದಿರುವ ಹಗರಣಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ.
2008ರಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಪಾತ್ರಾ ಚಾವ್ಲ್​ನ ಪುನರಾಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿತ್ತು. ಇದು 672 ಬಾಡಿಗೆದಾರರನ್ನು ಹೊಂದಿತ್ತು. ಇದರ ಗುತ್ತಿಗೆಯನ್ನು ಗುರು ಆಶಿಶ್ ಕನ್​ಸ್ಟ್ರಕ್ಟನ್​ ಲಿಮಿಟೆಡ್‌ಗೆ ನೀಡಲಾಯಿತು.
14 ವರ್ಷಗಳ ನಂತರವೂ ಬಾಡಿಗೆದಾರರು ತಮ್ಮ ಮನೆಗಳನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ. ಈ ಜಾಗವನ್ನು ಫ್ಲ್ಯಾಟ್‌ ನಿರ್ಮಿಸದೆ ಒಂಬತ್ತು ಬಿಲ್ಡರ್‌ಗಳಿಗೆ 901.79 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಅಕ್ರಮವಾಗಿ 1,034.79 ಕೋಟಿ ರೂ. ಗಳಿಸಿದೆ.
ಏಪ್ರಿಲ್‍ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವತ್ ಅವರ ಪತ್ನಿ ವರ್ಷಾ ರಾವತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.(ಏಜೆನ್ಸೀಸ್​)
28 ವರ್ಷಗಳ ಬಳಿಕ ಸಿಕ್ಕ ಅಮ್ಮನಿಗೆ ರೇಪಿಸ್ಟ್​ ಅಪ್ಪನ ಹುಡುಕಿಕೊಟ್ಟ ಮಗ! ಗ್ಯಾಂಗ್​ರೇಪ್​ ಪ್ರಕರಣದ ನಂಬಲಸಾಧ್ಯ ಘಟನೆಯಿದು…

ಶಾಲಾ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್​

ಬೆಲ್ಟ್​, ಕ್ಯಾಪ್​ ತೆಗೆಸಿ ಆರೋಪಿಗಳ ಜತೆ ಪೊಲೀಸರನ್ನು ಕುಳ್ಳರಿಸಿದ ಕೋರ್ಟ್​! ಏಕಿಂತ ಶಿಕ್ಷೆ ಅಂತೀರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
