ನವದೆಹಲಿ:ಕಾಂಗ್ರೆಸ್​ ತ್ಯಜಿಸುವ ಮೂಲಕ ಪಕ್ಷಕ್ಕೆ ದೊಡ್ಡ ಶಾಕ್​ ನೀಡಿದ್ದಾರೆ ಹಿಮಾಚಲ ಪ್ರದೇಶದ ಹಿರಿಯ ಮುಖಂಡ, ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹರ್ಷ್ ಮಹಾಜನ್. 1993, 1998 ಮತ್ತು 2003ರಲ್ಲಿ ಸತತವಾಗಿ ಗೆದ್ದು ಮೂರು ಬಾರಿ ಚಂಬಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಸೋಲಿಲ್ಲದ ಸರದಾರ ಎಂದೇ ಹೆಸರು ಗಳಿಸಿದ್ದ ಹರ್ಷ್​ ಅವರ ನಡೆಗೆ ಕಾಂಗ್ರೆಸ್​ ತತ್ತರಿಸಿ ಹೋಗಿದೆ.
ಕಾಂಗ್ರೆಸ್​ ನಾಯಕತ್ವದ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಹರ್ಷ್​ ಮಹಾಜನ್​, ಕಾಂಗ್ರೆಸ್​ ಬಿಟ್ಟು ಬಿಜೆಪಿ ಕೈಹಿಡಿದಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹರ್ಷ್​ ಬಿಜೆಪಿ ಸೇರ್ಪಡೆಯಾದರು.
ಈ ವರ್ಷಾಂತ್ಯದಲ್ಲಿ ಹಿಮಾಚಲದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಘಟನೆಯಿಂದಾಗಿ ಕಾಂಗ್ರೆಸ್​ಗೆ ಆಘಾತವಾಗಿದೆ.
ತಾವು ಕಾಂಗ್ರೆಸ್​ ತೊರೆಯುತ್ತಿರುವ ಕಾರಣ ನೀಡಿದ ಹರ್ಷ್​ ಅವರು, “ನಾನು ಸುಮಾರು 45 ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದೇನೆ. ನಾನು ಯಾವ ಚುನಾವಣೆಯಲ್ಲಿಯೂ ಸೋಲಲಿಲ್ಲ. ವೀರಭದ್ರ ಸಿಂಗ್ ಇರುವವರೆಗೂ ಕಾಂಗ್ರೆಸ್ ಇತ್ತು. ಇಂದು ಕಾಂಗ್ರೆಸ್ ದಿಕ್ಕಿಲ್ಲದಂತಿದೆ. ದೂರದೃಷ್ಟಿಯೂ ಇಲ್ಲ ಮತ್ತು ನಾಯಕತ್ವವೂ ಇಲ್ಲ ಎಂದು ಹರ್ಷ್ ಮಹಾಜನ್ ಹೇಳಿದ್ದಾರೆ. ವೀರಭದ್ರ ಸಿಂಗ್ ಕಳೆದ ವರ್ಷ ನಿಧನರಾಗಿದ್ದರು. ಅವರ ಪತ್ನಿ ಪ್ರತಿಭಾ ಸಿಂಗ್ ಮಂಡಿಯಿಂದ ಸಂಸದರಾಗಿದ್ದು, ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಶಾಸಕರಾಗಿದ್ದಾರೆ.
ಮಹಾಜನ್, ದೀರ್ಘಕಾಲ ವೀರಭದ್ರ ಸಿಂಗ್ ಅವರ ಸಹವರ್ತಿಯಾಗಿದ್ದರು. ಅವರು ಹಿಮಾಚಲ ಪ್ರದೇಶದ ಪಶುಸಂಗೋಪನೆ ಸಚಿವರೂ ಆಗಿದ್ದರು. ಮಹಾಜನ್ ಅವರ ತಂದೆ ದೇಶ್ ರಾಜ್ ಮಹಾಜನ್ ಅವರು ವಿಧಾನಸಭೆಯ ಸ್ಪೀಕರ್ ಮತ್ತು ಕ್ಯಾಬಿನೆಟ್ ಸಚಿವರಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಡ್ಡಗಾಡು ರಾಜ್ಯಗಳಲ್ಲಿ ಈ ಹಿಂದೆ ಅಧಿಕಾರದಲ್ಲಿರುವ ಪಕ್ಷ ಮತ್ತೆ ಸರ್ಕಾರ ರಚಿಸುವುದಿಲ್ಲ ಎಂಬ ಅಭಿಪ್ರಾಯವಿತ್ತು, ಆದರೆ ಇತ್ತೀಚೆಗೆ ಉತ್ತರಾಖಂಡದಲ್ಲಿ ಬಿಜೆಪಿ ಈ ಸಂಪ್ರದಾಯವನ್ನು ಮುರಿದಿದೆ ಎಂದು ಹೇಳಿದರು.(ಏಜೆನ್ಸೀಸ್​)
‘ಕಾಂಗ್ರೆಸ್​ ಜೋಡೋ’ ಮಾಡಿ ಎಂದು ಸೋನಿಯಾಗೆ ದುಂಬಾಲು: ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಗೆಹ್ಲೋಟ್​ ಔಟ್​?
VIDEO: ಕಿಕ್ಕಿರಿದು ತುಂಬಿದ್ದ ಮಾಲ್​ನಲ್ಲಿ ಅಸಹ್ಯ ಅನುಭವ- ಕಹಿ ಘಟನೆ ವಿಡಿಯೋ ಮೂಲಕ ಬಿಚ್ಚಿಟ್ಟ ನಟಿ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two + 19 =
Remember me
