ನವದೆಹಲಿ:ಇಂಗ್ಲೆಂಡ್‌ ಮೂಲಕ ಸೆನ್ಸೋಡೈನ್ ಟೂಥ್‌ಪೇಸ್ಟ್‌ ಜಾಹೀರಾತು ಭಾರತ ಎಲ್ಲಿಯೂ ಕಾಣಿಸಕೂಡದು. ಹೀಗೆಂದು ಗ್ರಾಹಕರ ಕೋರ್ಟ್‌ ಆದೇಶ ಹೊರಡಿಸಿದೆ. ಈ ಟೂಥ್‌ಪೇಸ್ಟ್‌ ತಯಾರಿಕೆಯ ಸಂಸ್ಥೆಯಾಗಿರುವ ಗ್ಲ್ಯಾಕ್ಸೋ ಸ್ಮಿತ್‌ಕ್ಲೈನ್ ಕನ್ಸ್ಯೂಮರ್ ಹೆಲ್ತ್‌ಕೇರ್ ಲಿಮಿಟೆಡ್‌ಗೆ ನೋಟಿಸ್‌ ಜಾರಿ ಮಾಡಿರುವ ಗ್ರಾಹಕ ರಕ್ಷಣೆ ನಿಯಂತ್ರಕ (ಸಿಸಿಪಿಎ) ಇಂಥದ್ದೊಂದು ಆದೇಶ ಜಾರಿಗೊಳಿಸಿದೆ. ಟಿ.ವಿಗಳಲ್ಲಿ ಸೇರಿದಂತೆ ಎಲ್ಲಿಯೂ ಇದರ ಜಾಹೀರಾತು ತೋರಿಸಬಾರದು ಎಂದು ನಿರ್ಬಂಧ ವಿಧಿಸಲಾಗಿದೆ.
ಇದಕ್ಕೆ ಕಾರಣ ಏನೆಂದರೆ, ಟಿವಿಯಲ್ಲಿ ಬರುವ ಜಾಹೀರಾತಿನಲ್ಲಿ ಕೆಲವು ವೈದ್ಯರು ಈ ಉತ್ಪನ್ನವನ್ನು ಅನುಮೋದಿಸುವುದಾಗಿ ಹೇಳುವುದನ್ನು ಕಾಣಬಹುದು. ಆದರೆ ಭಾರತದ ಹೊರಗೆ ಅಭ್ಯಾಸ ಮಾಡುತ್ತಿರುವ ದಂತವೈದ್ಯರು ಜಾಹೀರಾತಿನಲ್ಲಿ ಉತ್ಪನ್ನಗಳನ್ನು ಅನುಮೋದಿಸುತ್ತಿದ್ದಾರೆ. ಇದು ನಿಯಮ ಬಾಹಿರ. ಜಾಹೀರಾತಿನ ನಿಯಮದ ಅನ್ವಯ ಇದು ಉಲ್ಲಂಘನೆ ಆಗಿದೆ ಎಂದು ಸಿಸಿಪಿಎ ಹೇಳಿದೆ.
ಭಾರತದಲ್ಲಿ ಜಾರಿಯಲ್ಲಿರುವ ಕಾನೂನನ್ನು ದುರ್ಬಳಕೆ ಮಾಡಿಕೊಂಡು ಮತ್ತು ಹಲ್ಲಿನ ಸೂಕ್ಷ್ಮತೆಯ ಬಗ್ಗೆ ಗ್ರಾಹಕರಿಗೆ ಭಯ ಹುಟ್ಟಿಸುವ ಸಲುವಾಗಿ ವಿದೇಶಿ ದಂತವೈದ್ಯರನ್ನು ಜಾಹೀರಾತಿನಲ್ಲಿ ತೋರಿಸಿದೆ. ಆದರೆ ಇದನ್ನು ಭಾರತದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಸಿಸಿಪಿಎ ತಿಳಿಸಿದ್ದು ನಿರ್ಬಂಧ ವಿಧಿಸಿದ್ದು 10 ಲಕ್ಷ ರೂಪಾಯಿ ದಂಡ ವಿಧಿಸಿದೆ.
“ವಿಶ್ವಾದ್ಯಂತ ದಂತವೈದ್ಯರು ಶಿಫಾರಸು ಮಾಡಿರುವ , ವಿಶ್ವದ ನಂ.1 ಸೆನ್ಸಿಟಿವಿಟಿ ಟೂಥ್‌ಪೇಸ್ಟ್ ಇದಾಗಿದೆ ಮಾತ್ರವಲ್ಲದೇ 60 ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಜಾಹೀರಾತಿನಲ್ಲಿ ತೋರಿಸಲಾಗುತ್ತಿತ್ತು. ಇದು ದಾರಿ ತಪ್ಪಿಸುವ ಜಾಹೀರಾತು ಆಗಿರುವುದಾಗಿ ಸಿಸಿಪಿಎ ಅಭಿಪ್ರಾಯ ಪಟ್ಟಿದೆ.
VIDEO: ಬೆಡ್‌ಷೀಟ್‌ಗಾಗಿ 10ನೇ ಮಹಡಿಯಿಂದ ಸೀರೆ ಕಟ್ಟಿ ಮಗನನ್ನು ಜೋತು ಬೀಳಿಸಿದ ಅಮ್ಮ! ಶಾಕಿಂಗ್‌ ವಿಡಿಯೋ ನೋಡಿ…

VIDEO: ಟಿವಿಯಲ್ಲಿ ವರದಿ ಓದುವಾಗಲೇ ಎದ್ದುಬಿಟ್ಟ ಕಂದಮ್ಮ! ಮಗುವನ್ನು ಎತ್ತಿಕೊಂಡೇ ಸುದ್ದಿ ಹೇಳಿದ ವಾಚಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 7 =
Remember me
