ಇಂದೋರ್‌ (ಮಧ್ಯಪ್ರದೇಶ):ಪ್ರೇಯಸಿ ಕೈಕೊಟ್ಟಳೆಂದು ಸಿಟ್ಟಿನಿಂದ ಯುವಕನೊಬ್ಬ ಮಾಡಿದ ಎಡವಟ್ಟು ಏಳು ಮಂದಿಯ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ದುರಂತ ಸಂಭವಿಸಿದೆ.
ಸಂಜಯ್ ಅಲಿಯಾಸ್ ಶುಭಂ ದೀಕ್ಷಿತ್ ಎಂಬ ಯುವಕ ಮಾಡಿದ ಎಡವಟ್ಟಿನಿಂದ ಈ ಭಯಾನಕ ಕೃತ್ಯ ನಡೆದಿದೆ. ತಾನು ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂಬ ಕಾರಣಕ್ಕೆ ಈತ ವಾಹನ ಒಂದಕ್ಕೆ ಬೆಂಕಿ ಹಚ್ಚಿದ್ದ. ಆದರೆ ಸಮೀಪದಲ್ಲಿಯೇ ಇದ್ದ ವಸತಿ ಸಮುಚ್ಚಕ್ಕೆ ಬೆಂಕಿ ಹರಡಿದೆ. ಅದರಲ್ಲಿದ್ದ 7 ಜನರು ಸಜೀವ ದಹನವಾಗಿದ್ದು ಹಲವರ ಸ್ಥಿತಿ ಗಂಭೀರವಾಗಿದೆ.
ಇಲ್ಲಿನ 3 ಮಹಡಿ ಕಟ್ಟಡದಲ್ಲಿ ಶನಿವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ನಿದ್ದೆಯ ಮಂಪರಿನಲ್ಲಿದ್ದ ಜನರಿಗೆ ಅರಿವಾಗುವುದರ ಒಳಗೆ ಇಡೀ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಹಲವರು ಮನೆಯ ಬಾಲ್ಕನಿಯಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ.
ಬೆಂಕಿಯನ್ನು ನೋಡಿದ ನೆರೆಹೊರೆಯವರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರೂ, ಅವರು ತಕ್ಷಣಕ್ಕೆ ಬರಲಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಯಿತು ಎನ್ನಲಾಗಿದೆ. ಪೊಲೀಸರು ಸಿಸಿಟಿವಿ ಗಮನಿಸಿದಾಗ ವ್ಯಕ್ತಿಯೊಬ್ಬ ನೆಲ ಮಾಳಿಗೆಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ ಹಚ್ಚಿದ್ದು, ಅದರಿಂದಲೇ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿರುವುದು ತಿಳಿದುಬಂದಿದೆ.
”50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗಿದೆ. ಸಂಜಯ್ ಅಲಿಯಾಸ್ ಶುಭಂ ದೀಕ್ಷಿತ್ ಎಂಬ ವ್ಯಕ್ತಿ ಘಟನೆಯ ಸ್ವಲ್ಪ ಮೊದಲು ಹೋಗುತ್ತಿರುವುದನ್ನು ಒಂದು ದೃಶ್ಯಾವಳಿ ತೋರಿಸಿದೆ. ಹೆಚ್ಚಿನ ಮಾಹಿತಿ ಪಡೆದ ಪೊಲೀಸರು ಬೆಂಕಿ ಹಚ್ಚಿರುವುದು ಪತ್ತೆಯಾಗಿದೆ. ಹೆಚ್ಚಿನ ಮಾಹಿತಿಯನ್ನು ಹೊರತೆಗೆಯಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.
ಪಿಎಸ್‌ಐ ಗೋಲ್‌ಮಾಲ್‌: ಖದೀಮರಿಗೆ ನಂಬರ್‌ ಕೊಡ್ತಿದ್ದ ಡಿವೈಎಸ್ಪಿಯೇ ಇದೀಗ ‘ಕೈದಿ ನಂಬರ್‌ 18197’

VIDEO: ಯೂಕ್ರೇನ್ ಸ್ಫೋಟದಲ್ಲಿ ಕಾಲುಗಳನ್ನು ಕಳಕೊಂಡ ಯುವತಿಯ ಕೈಬಿಡದ ಗೆಳೆಯ: ಇದು ಮನಕಲುಕುವ ಘಟನೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 9 =
Remember me
