ವಾಷಿಂಗ್ಟನ್​:ಈ ಚಿತ್ರದಲ್ಲಿ ಕಾಣಿಸುತ್ತಿರುವ ದಂಪತಿ ಹೆಸರು ಹಿಲರಿಯಾ ಮತ್ತು ಅಲೆಕ್​ ಬಾಲ್ಡ್​ವಿನ್​. ಈ ದಂಪತಿ ಪ್ರಸಿದ್ಧ ನಟ-ನಟಿ, ಜತೆಗೆ ಹಿಲರಿಯಾ ಯೋಗ ಗುರು ಕೂಡ. ಕಳೆದ ಸೆಪ್ಟೆಂಬರ್​ನಲ್ಲಿ ಆರನೇ ಮಗುವಿಗೆ ಜನ್ಮ ನೀಡಿರುವ ಬಗ್ಗೆ ಫೋಟೋ ಶೇರ್​ ಮಾಡಿಕೊಂಡಿದ್ದ ಹಿಲರಿಯಾ ಆರೇ ತಿಂಗಳಿನಲ್ಲಿ ಇನ್ನೊಂದು ಫೋಟೋ ಹಾಕಿ ಏಳನೇ ಮಗುವಿಗೆ ಸ್ವಾಗತ ಕೋರುತ್ತಿರುವುದಾಗಿ ಹೇಳಿದ್ದಾರೆ, ಜತೆಗೆ ಅದರ ಫೋಟೋ ಕೂಡ ಹಾಕಿಕೊಂಡಿದ್ದಾರೆ.
ತಮ್ಮ ಪತಿಯ ಜತೆಗಿರುವ ಫೋಟೋದೊಂದಿಗೆ ಏಳೂ ಮಕ್ಕಳ ಫೋಟೋ ಹಾಕಿಕೊಂಡಿರುವ ಹಿಲರಿಯಾ ಕುರಿತು ಇದೀಗ ಭಾರಿ ಚರ್ಚೆ ಶುರುವಾಗಿದೆ. ಒಂದಾದ ಮೇಲೊಂದರಂತೆ ಮಗುವನ್ನು ಹೆರುವುದು ಮಾತ್ರವಲ್ಲದೇ, ಆರೇ ತಿಂಗಳಿನಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡಿರುವುದು ಹೇಗೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.


A post shared by Hilaria Thomas Baldwin (@hilariabaldwin)

ಈಕೆ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಸುದ್ದಿಯಾಗುತ್ತಿದೆ. “7” ಎಂಬ ಶೀರ್ಷಿಕೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ ಈಕೆ.
ಅಂದಹಾಗೆ ಇವರಿಗೆ ಈ ಮೊದಲು ಇರುವ ಮಕ್ಕಳ ವಯಸ್ಸು ನೋಡಿದಾಗ ಇನ್ನಷ್ಟು ಅಚ್ಚರಿಯಾಗುತ್ತದೆ. ಇದಕ್ಕೆ ಕಾರಣ, ಆರು ತಿಂಗಳ ವಯಸ್ಸಿನ ಎಡು, ಎರಡೂವರೆ ವರ್ಷದ ರೋಮಿಯೋ ಅಲೆಜಾಂಡ್ರೊ ಡೇವಿಡ್, ನಾಲ್ಕು ವರ್ಷದ ಲಿಯೊನಾರ್ಡೊ ಏಂಜೆಲ್ ಚಾರ್ಲ್ಸ್, ಐದೂವರೆ ವರ್ಷದ ರಾಫೆಲ್ ಥಾಮಸ್ ಮತ್ತು ಏಳು ವರ್ಷದ ಮಗಳು ಕಾರ್ಮೆನ್ ಗೇಬ್ರಿಯೆಲಾ ಮಕ್ಕಳನ್ನು ಹೊಂದಿರುವ ಇವರೀಗ ಏಳನೇ ಮಗುವಿನ ಅಪ್ಪ- ಅಮ್ಮ.
ನಮಗೆ ಮಕ್ಕಳೆಂದರೆ ಬಹಳ ಪ್ರೀತಿ ಎಂದಿರುವ ಈ ದಂಪತಿ, ಆರೇ ತಿಂಗಳಿನಲ್ಲಿ ಮತ್ತೊಂದು ಮಗು ಹುಟ್ಟಿದ್ದು ಹೇಗೆ ಎಂಬ ಬಗ್ಗೆ ಕೇಳಿರುವ ಪ್ರಶ್ನೆಗೆ ಮೌನವಾಗಿದ್ದಾರೆ. ಈ ಮಗುವನ್ನು ಅವರಂತೂ ಹೆತ್ತಿರಲು ಸಾಧ್ಯವಿಲ್ಲ. ಬದಲಿಗೆ ಈ ಏಳನೇ ಮಗುವನ್ನು ಅವರು ದತ್ತು ಪಡೆದಿದ್ದಾರೋ ಅಥವಾ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದುಕೊಂಡಿದ್ದಾರೋ ಎಂಬ ಬಗ್ಗೆ ಇದೀಗ ಚರ್ಚೆ ಶರುವಾಗಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ನಾನು ಕರೊನಾ ಲಸಿಕೆ ಹಾಕಿಸಿಕೊಳ್ಳಲ್ಲ ಎಂದ ಆರೋಗ್ಯ ಸಚಿವ- ಅದಕ್ಕೆ ಕೊಟ್ಟರು ಈ ಕಾರಣ…

ದೊಡ್ಡದಾಗಿ ಬೆಳೆದಿದ್ದು ಕಟ್‌ ಮಾಡುವುದು ಅನಿವಾರ್ಯ… ಅಮಿತಾಭ್‌ ಟ್ವೀಟರ್‌ನಲ್ಲಿ ನಿಗೂಢ ಚಿಹ್ನೆ ‘!!!!! ?????’

ಕಾನೂನಿನಾಚೆ ಮಾನವೀಯ ಆದೇಶ: ಅಪ್ರಾಪ್ತರ ಮದುವೆಗೆ ಕೋರ್ಟ್‌ನಿಂದ ಅಸ್ತು: ಲೈಂಗಿಕ ಸಂಪರ್ಕವಾದರೂ ನೀಡದ ಶಿಕ್ಷೆ

ನಾಳೆಯಿಂದ ಸಾರ್ವಜನಿಕರಿಗೂ ಕರೊನಾ ಲಸಿಕೆ ಭಾಗ್ಯ- ಎಲ್ಲಿ? ಹೇಗೆ? ಯಾರಿಗೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − twelve =
Remember me
