ಸೂರತ್‌:ಗುಜರಾತ್‌ನ ಆಯುಬ್‌ಖಾನ್‌ ಎನ್ನುವ 63 ವರ್ಷದ ವ್ಯಕ್ತಿಯೊಬ್ಬ ಏಳನೇ ಮದುವೆಯಾಗಲು ರೆಡಿಯಾಗಿದ್ದು, ಮದುಮಗಳಿಗಾಗಿ ಹುಡುಕಾಟ ನಡೆಸಿದ್ದಾನೆ. ಇದಕ್ಕೆ ಕಾರಣ ಈತನ ಆರನೇ ಪತ್ನಿ ಸೆಕ್ಸ್‌ಗೆ ನಿರಾಕರಿಸಿದ್ದಾಳೆ ಎಂದು!ಇಂಥದ್ದೊಂದು ವಿಲಕ್ಷಣ ಘಟನೆ ನಡೆದಿರುವುದು ಗುಜರಾತ್‌ನ ಸೂರತ್‌ನಲ್ಲಿ. ಈತ ತನಗಿಂತ 21 ವರ್ಷ ಚಿಕ್ಕವಳಾಗಿದ್ದ ಮಹಿಳೆಯನ್ನು ಆರನೇ ಮದುವೆಯಾಗಿದ್ದ. ಪತಿಯನ್ನು ಕಳೆದುಕೊಂಡಿದ್ದ ಮಹಿಳೆಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿ ಆಕೆಯನ್ನು ಮದುವೆಯಾಗಿದ್ದ ಅಯುಬ್‌.
ಆದರೆ ಮದುವೆಯ ಸಮಯದಲ್ಲಿ ತನಗೆ ಈಗಾಗಲೇ ಐವರು ಪತ್ನಿಯರು ಇರುವ ವಿಷಯವನ್ನು ಮುಚ್ಚಿಟ್ಟಿದ್ದ. ಮದುವೆಯಾದ ನಂತರ 6ನೇ ಪತ್ನಿಗೆ ಪತಿ ಮಾಡಿದ ಮೋಸ ತಿಳಿದಿದೆ. ಒಬ್ಬರಿಗೊಬ್ಬರಿಗೆ ತಿಳಿಯದಂತೆ ಗುಟ್ಟಾಗಿ ಇದಾಗಲೇ ಐದು ಮದುವೆಯಾಗಿದ್ದು, ತಾನು 6ನೇ ಪತ್ನಿ ಎಂದು ತಿಳಿದಿದೆ.
ಇದರಿಂದಾಗಿ ಸಿಟ್ಟಿನಿಂದ ಆಕೆ ಈತನ ಜತೆ ಸೇರಲು ಇಚ್ಛಿಸದೇ ದೂರು ಉಳಿದಿದ್ದಾರೆ. ಪತ್ನಿ ದೂರವಾಗುತ್ತಿದ್ದಂತೆಯೇ ಇತ್ತ ಅಯುಬ್‌ 7ನೇಯವಳಿಗೆ ಬಲೆ ಬೀಸಿದ್ದಾನೆ.
ಆರನೇ ಪತ್ನಿ ತನ್ನ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳಲು ಇಚ್ಛಿಸಿಲ್ಲ. ಅಲ್ಲದೆ ತನಗೆ ಸೋಂಕು, ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ ಎಂದು ದೂರುತ್ತಿದ್ದಳು. ಆದರೆ ತನ್ನ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ಮಹಿಳೆಯನ್ನು ನಾನು ಬಯಸಿದ್ದೆ ಎಂದಿದ್ದಾನೆ.
ಈತ ಇನ್ನೆಷ್ಟು ಮಹಿಳೆಯರನ್ನು ಮದುವೆಯಾಗುತ್ತಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಪತಿ ತನಗೆ ಮೋಸ ಮಾಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಆತನ ವಿರುದ್ಧ ಆರನೇ ಪತ್ನಿ ದೂರು ದಾಖಲು ಮಾಡಿದ್ದಾರೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

ಪತಿಗೆ ಬ್ಲೂಫಿಲಂ ನೋಡುವ ಚಟ- ಮಧ್ಯರಾತ್ರಿಯೂ ಎದ್ದು ವೀಕ್ಷಿಸುತ್ತಾರೆ, ಇದನ್ನು ತಪ್ಪಿಸುವುದು ಹೇಗೆ?

ವಿಚ್ಛೇದನವಾಗಿದೆ; ಮಕ್ಕಳು, ಅಪ್ಪ- ಅಮ್ಮ ಇಲ್ಲದಿದ್ದರೆ ನನಗೆ ಆಸ್ತಿ ಸಿಗತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
