ಲಖನೌ:ಸ್ವಾತಂತ್ರ್ಯಾನಂತರ ಗಲ್ಲುಶಿಕ್ಷೆಗೆ ಒಳಗಾಗಿರುವ ಮೊದಲ ಮಹಿಳೆ ಶಬನಂನಿಂದಾಗಿ ಇದೀಗ ಇಬ್ಬರು ಜೈಲಾಧಿಕಾರಿಗಳು ಕೆಲಸವನ್ನು ಕಳೆದುಕೊಂಡಿದ್ದಾರೆ.ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿರುವ ಈ ಪಾತಕಿ, ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ. ಉತ್ತರಪ್ರದೇಶ ಅಮರೋಹಿ ಜಿಲ್ಲೆಯ ಶಬನಂಗೆ ಸೆಷನ್ಸ್‌ ಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೂ ಗಲ್ಲುಶಿಕ್ಷೆಯೇ ಗತಿಯಾಗಿದೆ. ಕೊನೆಯದಾಗಿ ರಾಷ್ಟ್ರಪತಿಗಳ ಕ್ಷಮಾದಾನ ಅರ್ಜಿಯೂ ತಿರಸ್ಕೃತಗೊಂಡಿರುವ ಕಾರಣ, ಇದೀಗ ನೇಣಿಗೆ ಕೊರಳು ನೀಡಲು ಸಿದ್ಧವಾಗಿದ್ದಾಳೆ ಈ ಕೊಲೆಗಾತಿ.
ಇವಳನ್ನು ನೇಣುಗಂಬಕ್ಕೆ ಏರಿಸಲು ಮಥುರಾ ಜೈಲು ಸಕಲ ಸಿದ್ಧತೆ ನಡೆಸಿದ್ದು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಗಲ್ಲುಶಿಕ್ಷೆ ಅನುಭವಿಸುತ್ತಿರುವ ಮೊದಲ ಮಹಿಳೆ ಈಕೆ ಎನಿಸಿದ್ದಾಳೆ. ಮಥುರಾ ಜೈಲಿನಲ್ಲಿ 150 ವರ್ಷಗಳ ಹಿಂದೆ ಮೊದಲ ಮಹಿಳಾ ನೇಣುಗಂಬದ ಕೊಠಡಿಯನ್ನು ನಿರ್ಮಿಸಲಾಗಿತ್ತು. ಆದರೆ, ಸ್ವಾತಂತ್ರ್ಯ ಸಿಕ್ಕ ಬಳಿಕ ಇದುವರೆಗೂ ಯಾವ ಮಹಿಳಾ ಕೈದಿಯೂ ಗಲ್ಲುಶಿಕ್ಷೆಗೆ ಒಳಗಾಗಿಲ್ಲ. ಈ ಮೂಲಕ ಈಕೆ ಪ್ರಥಮ ಕೈದಿ ಎನಿಸಲಿದ್ದಾಳೆ. ಈಕೆಯ ಜತೆ ಈಕೆಯ ಪ್ರೇಮಿ ಸಲೀಂ ಕೂಡ ಗಲ್ಲುಶಿಕ್ಷೆಗೆ ಒಳಗಾಗಲಿದ್ದಾನೆ.
ಆದರೆ ಈಕೆಯ ಗಲ್ಲುಶಿಕ್ಷೆಯ ವಿಷಯ ಬಹಿರಂಗಗೊಂಡರೂ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಾರಣ, ಜೈಲಿನ ಇಬ್ಬರು ಅಧಿಕಾರಿಗಳು ಕೆಲಸ ಕಳೆದುಕೊಳ್ಳುವಂತಾಗಿದೆ. ಏಕೆಂದರೆ ಅಪರಾಧಿಯೊಬ್ಬಳ ಫೋಟೋ ಬಹಿರಂಗಗೊಳಿಸುವುದು ಜೈಲು ನಿಯಮದ ಉಲ್ಲಂಘನೆಯಾಗಿದೆ. ಆದರೆ ಈ ವರ್ಷ ಜನವರಿ 26 ರಂದು ಜೈಲು ಆವರಣದೊಳಗೆ ಚಿತ್ರಗಳನ್ನು ತೆಗೆಯಲಾಗಿದೆ. ಇದು ಭದ್ರತೆಯ ಉಲ್ಲಂಘನೆ ಮತ್ತು ಜೈಲು ಕೈಪಿಡಿಯ ಉಲ್ಲಂಘನೆಯಾಗಿರುವ ಕಾರಣ, ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದರ ಜತೆಗೆ, ಶಬನಂಳನ್ನು ರಾಂಪುರ್ ಜೈಲಿನಿಂದ ಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಅಷ್ಟಕ್ಕೂ ಯಾರೀ ಶಬನಂ?ಉತ್ತರ ಪ್ರದೇಶದ ಅಮ್ರೋಹಾದ ಹಸನ್ಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಬವಾಂಖೇಡಿ ಎಂಬ ಗ್ರಾಮದ ಶಬನಂ ಮಾಡಿರುವ ಕೃತ್ಯ ಎಂದರೆ, ಏಳು ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ! 2008ರ ಏಪ್ರಿಲ್‌ 14 ಮತ್ತು 15ರ ಮಧ್ಯರಾತ್ರಿ ನೆನಪಿಸಿಕೊಂಡರೆ ಗ್ರಾಮಸ್ಥರು ಇಂದಿಗೂ ಬೆಚ್ಚಿ ಬೀಳುತ್ತಾರೆ.
ತನ್ನದೇ ಕುಟುಂಬದ 7 ಜನರನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಳು ಈಕೆ. ಅಷ್ಟಕ್ಕೂ ಇಂಥದ್ದೊಂದು ಕೃತ್ಯ ಎಸಗಲು ಕಾರಣ, ಈಕೆಯ ಲವ್‌ ಸ್ಟೋರಿ.
ಮೊದಲೇ ಸಲೀಂ ಎಂಬಾತನನ್ನು ಪ್ರೀತಿಸುತ್ತಿದ್ದ ಈಕೆಯ ಮದುವೆ ಬೇರೆಯವರ ಜತೆ ಆಗಿತ್ತು ಆದರೆ ಮದುವೆಯಾದ ಮೇಲೂ ಸಲೀಂನನ್ನು ಪ್ರೀತಿಸುತ್ತಿದ್ದ ಶಬನಮ್ ತನ್ನ ಪ್ರಿಯಕರನ ಜತೆ ಸೇರಿ ತನ್ನ ಗಂಡನ ಮನೆಯ 7 ಜನರನ್ನು ಕೊಚ್ಚಿ ಕೊಲೆ ಮಾಡಿದ್ದಳು. ಇದಕ್ಕೆ ಕಾರಣ, ಆಕೆಯ ಕುಟುಂಬದವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರಿಂದ. ಕೊಲೆ ಮಾಡಿದ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಶಬನಂ, ನಿರುದ್ಯೋಗಿ ಪ್ರೇಮಿ ಸಲೀಂ ಜತೆ ಸಂಚು ರೂಪಿಸಿ ಮನೆಯರಿಗೆ ಚಹಾದಲ್ಲಿ ಮತ್ತು ಬರಿಸುವ ಔಷಧ ಬೆರೆಸಿದ್ದಳು. ನಂತರ ಮನೆಗೆ ಬಂದ ಸಲೀಂ ಏಳು ಮಂದಿಯ ಕುತ್ತಿಗೆ ಸೀಳಿದ್ದ.
ಬಟ್ಟೆಯೊಳಗೆ ಮುಚ್ಚಾಯ್ತು.. ಖಾಸಗಿ ಅಂಗಗಳಲ್ಲೂ ಅಡಗಿಸಿಯಾಯ್ತು.. ಈಗ ಪೇಸ್ಟ್​ ರೂಪದಲ್ಲಿ ತಂದಳೀಕೆ!

ಹಾಸ್ಟೆಲ್​ಗೆ ನುಗ್ಗಿದ ಪೊಲೀಸರು ಬಾಲಕಿಯರ ಬೆತ್ತಲೆಗೊಳಿಸಿ, ನೃತ್ಯ ಮಾಡಿಸಿದರು- ಮಹಾರಾಷ್ಟ್ರದಲ್ಲಿ ಭಯಾನಕ ಘಟನೆ!

ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?

ಪುಸ್ತಕದ ಹಿಂಭಾಗ ತೋರಿಸಿ ಎಂದ್ರೆ ತಮ್ಮದೇ ಹಿಂಭಾಗ ತೋರಿಸಿದ್ರಾ ರಾಹುಲ್? ಟ್ರೋಲ್​ ಪುಟದಲ್ಲಿ ಸಂಸದ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eighteen − ten =
Remember me
