ಮುಂಬೈ:ಗಾನಕೋಗಿಲೆ ಲತಾ ಮಂಗೇಶ್ಕರ್‌ ಭಾನುವಾರ ವಿಧಿವಶರಾದರು. ಅವರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಕ್ಷೇತ್ರದ ದಿಗ್ಗಜರು ಬಂದು ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನಟ ಶಾರುಖ್‌ ಖಾನ್‌ ಮಾಡಿರುವ ಒಂದು ಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿ, ನಟನ ವಿರುದ್ಧ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ.
ತಮ್ಮ ಮ್ಯಾನೇಜರ್ ಪೂಜಾ ದದ್ಲಾನಿ ಜತೆ ಅಂತ್ಯಸಂಸ್ಕಾರ ನಡೆಯುತ್ತಿದ್ದ ಶಿವಾಜಿ ಪಾರ್ಕ್‌ಗೆ ಬಂದಿದ್ದ ಶಾರುಖ್‌ ಖಾನ್‌ ಮಾಡಿದ್ದೇನೆಂದರೆ, ಪಾರ್ಥಿವ ಶರೀರದ ಬಳಿ ಬಂದು ನಮಸ್ಕರಿಸಿ ಕೂಡಲೇ ಮಾಸ್ಕ್‌ ತೆಗೆದು ಉಗುಳಿದರು. ಮೊದಲಿಗೆ ಪುಷ್ಪಗುಚ್ಛರನ್ನಿರಿಸಿ ಎರಡೂ ಕೈಗಳನ್ನು ಮೇಲೆತ್ತಿ ನಮನ ಸಲ್ಲಿಸಿದ ನಂತರ ಮಾಸ್ಕ್‌ ತೆಗೆದು ಉಗುಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತು.
ಈ ವಿಡಿಯೋ ಭಾರಿ ವೈರಲ್‌ ಆಗುತ್ತಿದ್ದಂತೆಯೇ ನಟನ ವಿರುದ್ಧ ಸಿಕ್ಕಾಪಟ್ಟೆ ಕಮೆಂಟ್‌ಗಳ ಸುರಿಮಳೆಯೇ ಆಯಿತು. ಇತ್ತೀಚೆಗಷ್ಟೇ ಮಗ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದರಿಂದ ಮೌನಕ್ಕೆ ಜಾರಿದ್ದ ಶಾರುಖ್‌ ಖಾನ್‌ ಅವರ ವಿರುದ್ಧ ಪುನಃ ಟ್ವಿಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗತೊಡಗಿದೆ.
ಈ ಕುರಿತು ಸಂಸದ ಅನಂತ ಕುಮಾರ್‌ ಹೆಗಡೆ, ‘ಬಾಲಿವುಡ್ ಖಾನ್‌ಗಳ ದರಿದ್ರ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲು. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ’ ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಹಲಾಲ್‌’ ಹೆಸರಿನಲ್ಲಿ ಆಹಾರಗಳ ಮೇಲೆ ಉಗುಳಿದ್ದಾಯ್ತು, ಇದೀಗ ಪಾರ್ಥಿವ ಶರೀರದ ಮೇಲೂ ಉಗುಳುವ ಚಾಳಿ ಬಿಟ್ಟಿಲ್ಲ ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟೆಲ್ಲಾ ಗಲಾಟೆಯಾಗುತ್ತಿದ್ದಂತೆಯೇ ಇದರ ಫ್ಯಾಕ್ಟ್‌ಚೆಕ್‌  ಮಾಡಲಾಯಿತು.  ಕೊನೆಗೆ ಫ್ಯಾಕ್ಟ್‌ಚೆಕ್‌ ಮಾಡಿದವರು ಈ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಅದೇನೆಂದರೆ, ಇಸ್ಲಾಂ ಧರ್ಮದ ಪದ್ಧತಿಯಂತೆ ಶಾರುಖ್‌ ನಡೆದುಕೊಂಡಿದ್ದಾರೆ. ಇಸ್ಲಾಂನಲ್ಲಿ, ದುಷ್ಟ ಶಕ್ತಿಗಳು ಅಥವಾ ‘ಸೈತಾನ’ನನ್ನು ದೂರವಿಡಲು ಹೀಗೆ ಉಫ್‌ ಎಂದು ಮಾಡಲಾಗುತ್ತದೆ. ಅಸಲಿಗೆ ಶಾರುಖ್‌ ಖಾನ್‌ ಉಗುಳಿದ್ದಲ್ಲ, ಬದಲಿಗೆ ತಮ್ಮ ಇಸ್ಲಾಂ ಧರ್ಮದ ಪ್ರಕಾರ ಲತಾ ಅವರಿಗೆ ಯಾವುದೇ ಕೆಟ್ಟದ್ದು ಆಗದಿರಲಿ ಎಂದು ‘ಉಫ್‌’ ಎಂದಿದ್ದಾರಷ್ಟೇ. ಇದರಲ್ಲಿ ಯಾವುದೇ ಅಪಾರ್ಥ, ಕೆಟ್ಟ ನಡತೆಯಿಲ್ಲ’ ಎಂದಿದ್ದಾರೆ.
ಇಲ್ಲಿವೆ ನೋಡಿ ವಿಡಿಯೋ:
Is#ShahRukhKhanspitting??What is this non senseCan anyone speak out it ??
We have seen many people spitting on chapati, fruits, food, glasses this is new🤔#latamangeshkar@TajinderBagga@KapilMishra_IND@IamAjaySehrawat@ThePlacardGuy@ShefVaidya@Abhinav_Panpic.twitter.com/9aRez3qjuf
— अनुराग गौतम Anurag Gautam🇮🇳 (@anuraggautambjp)February 6, 2022

A post shared by Viral Bhayani (@viralbhayani)
VIDEO: ಆಹಾರದ ಮೇಲೆ ಉಗುಳಿ ಜನರಿಗೆ ಅದನ್ನೇ ನೀಡ್ತಿದ್ದವರು ಅಂದರ್‌- ಸಿಸಿಟಿವಿಯಲ್ಲಿ ಸೆರೆಯಾಯ್ತು ಅಸಹ್ಯ ದೃಶ್ಯ

‌ಎಲ್ಲಿದ್ದೀರಾ ಕಾಮನ್‌ಮ್ಯಾನ್‌ ಸಿಎಂ ಸಾರ್‌.. ನಿಮ್ಮ ಪಕ್ಷದ ಶಾಸಕನಿಂದ ನನಗೆ ಮಗುವಾಗಿದೆ, ನ್ಯಾಯ ಕೊಡ್ಸಿ….

ಪೋಸ್ಟ್‌ಮಾರ್ಟಮ್‌ಗೆ ಕೈದಿಯ ದೇಹ ಸೀಳಲು ಸಿದ್ಧತೆ ಮಾಡುತ್ತಿದ್ದಂತೆಯೇ ವೈದ್ಯರಿಗೆ ಕೇಳಿಬಂತು ಗೊರಕೆ ಶಬ್ದ!

ಲತಾ ಅವಿವಾಹಿತರಾಗಿಯೇ ಉಳಿದಿದ್ದೇಕೆ? ಅವರ ಬಾಳಲ್ಲಿ ಬಂದಿದ್ದ ಆ ವ್ಯಕ್ತಿ ಯಾರು? ಗಾನಕೋಗಿಲೆಯ ದುರಂತಮಯ ಬದುಕಿನ ಕಥೆಯಿದು…

Sign in to your account
Please enter an answer in digits:19 − 17 =
Remember me
