ತಿರುಪತಿ (ಆಂಧ್ರ ಪ್ರದೇಶ):ಜಗತ್ತಿನ ಸಿರಿವಂತ ದೇವಾಲಯ ಎನಿಸಿಕೊಂಡಿರುವ ತಿರುಮಲ ದೇಗುಲಕ್ಕೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ, ವಜ್ರಾಭರಣಗಳನ್ನು ಭಕ್ತಾದಿಗಳು ಕೊಡುವುದು ಹೊಸ ವಿಷಯವೇನಲ್ಲ. ಇದೀಗ ಅಂಥದ್ದೇ ಒಂದು ಅಪೂರ್ವ ಕಾಣಿಕೆ ನೀಡಿದ್ದಾರೆ ತಮಿಳುನಾಡಿನ ಭಕ್ತ.
ತಿರುಮಲನಿಗಾಗಿ ಚಿನ್ನದ ಶಂಖ- ಚಕ್ರವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ ಈ ಭಕ್ತ. ಚಿನ್ನದ ಕಾಣಿಕೆಗಳ ತೂಕ 3.5 ಕೆ.ಜಿ. ಇಂಥದ್ದೊಂದು ಬಹು ಬೆಲೆ ಬಾಳುವ ಕಾಣಿಕೆ ನೀಡಿರುವವರು ತಂಗದೊರೈ. ಇವರು ತಮಿಳುನಾಡಿನ ಥೇನಿಯನವರು. ತಿರುಪತಿಯಲ್ಲಿ ನಡೆದ ಮಹಾ ಪೂಜೆಯ ಬಳಿಕ ಚಿನ್ನದ ಶಂಕು ಮತ್ತು ಚಕ್ರವನ್ನು ದೇವಾಲಯದ ಆಡಳಿತ ಮಂಡಳಿಗೆ ಇವರು ನೀಡಿದ್ದಾರೆ.
Andhra Pradesh: A devotee from Theni in Tamil Nadu says he has donated golden ‘Sankha’ and ‘Chakra’ worth approximately Rs 2 crores to Balaji Temple in Tirumala.pic.twitter.com/dk2EBtSeeA— ANI (@ANI)February 24, 2021
Andhra Pradesh: A devotee from Theni in Tamil Nadu says he has donated golden ‘Sankha’ and ‘Chakra’ worth approximately Rs 2 crores to Balaji Temple in Tirumala.pic.twitter.com/dk2EBtSeeA
ಇದರ ಬೆಲೆ ಎಷ್ಟು ಗೊತ್ತಾ? ಎರಡು ಕೋಟಿ ರೂಪಾಯಿ! ಈ ಬಗ್ಗೆ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಕ್ಕೂ ಇಂಥದ್ದೊಂದು ಬಹುಬೆಲೆಬಾಳುವ ಕಾಣಿಕೆ ನೀಡಲು ಕಾರಣ ಕೋವಿಡ್‌. ಹೌದು. ಬಿಜಿನೆಸ್‌ಮನ್‌ ಆಗಿರುವ ತಂಗದೊರೈ, ಲಾಕ್‌ಡೌನ್‌ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಸೋಂಕಿನಿಂದ ಬಳಲುತ್ತಿದ್ದರು. ಮಾತ್ರವಲ್ಲದೇ ನಷ್ಟವನ್ನೂ ಅನುಭವಿಸಿದ್ದರು. ತಾವು ಬೇಗ ಗುಣಮುಖರಾಗಿ ಸಂಕಷ್ಟದಿಂದ ಪಾರಾಗಲು ತಿರುಮಲನಿಗೆ ಇವರು ಪ್ರಾರ್ಥನೆ ಸಲ್ಲಿಸಿದ್ದರು. ಹೀಗಾದರೆ ಚಿನ್ನದ ಆಭರಣಗಳನ್ನು ಅರ್ಪಿಸುವ ಹರಕೆಯೊತ್ತಿದ್ದರು. ಅವರು ಗುಣಮುಖರಾಗಿದ್ದು, ಹರಕೆ ತೀರಿಸುವ ಸಲುವಾಗಿ ಚಿನ್ನದ ಆಭರಣ ಅರ್ಪಿಸಿರುವುದಾಗಿ ತಂಗದೊರೈ ತಿಳಿಸಿದ್ದಾರೆ.
VIDEO: ಹೊಡಿಮಗ… ಹೊಡಿಮಗ… ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌
ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಹಾವೇರಿಯಲ್ಲಿ ಅಪಘಾತ: ರಕ್ಷಣಾಸಿಬ್ಬಂದಿ ಹರಸಾಹಸ
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
