ಪುಣೆ:ಪ್ರಧಾನಿ ಮೋದಿ ಕೆಲಸವನ್ನು ಒಮ್ಮೆ ಕೈಗೆತ್ತಿಕೊಂಡರೆ ಅದು ಮುಕ್ತಾಯಕ್ಕೆ ಬರುವವರೆಗೂ ಅವರು ವಿರಮಿಸುವುದಿಲ್ಲ. ಅವರು ಆಡಳಿತದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದ್ದಾರೆ.
ಪುಣೆಯಲ್ಲಿ ಮರಾಠಿ ದೈನಿಕ ‘ಲೋಕಸತ್ತಾ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಪ್ರಧಾನಿ ಮೋದಿ ವಿರಮಿಸುವುದೇ ಕಡಿಮೆ. ಕೆಲಸ ಕಾರ್ಯಗಳಿಗೆ ಸಾಕಷ್ಟು ಸಮಯ ಮೀಸಲು ಇಡುತ್ತಾರೆ. ಯಾವುದೇ ಕೆಲಸ ಕೈಗೆತ್ತಿಕೊಂಡರೆ ಅದು ಮುಗಿಯುವವರೆಗೂ ಬಿಡುವುದಿಲ್ಲ. ಅವರ ಕಾರ್ಯವಿಧಾನ ಬಹಳ ಅದ್ಭುತವಾದದ್ದು ಎಂದು ಹೇಳಿದರು.
ತಮ್ಮ ಸರ್ಕಾರದ ನೀತಿಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಡಳಿತ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹೇಗೆ ಒಗ್ಗೂಡಬಹುದು ಎಂಬುದಕ್ಕೆ ಪ್ರಧಾನಿ ಒತ್ತು ನೀಡುತ್ತಾರೆ. ಎಲ್ಲಾ ಕೆಲಸಗಳಿಗೂ ತಮ್ಮ ಸಹೋದ್ಯೋಗಿಗಳನ್ನು ಜತೆಯಾಗಿಯೇ ಕರೆದುಕೊಂಡು ಹೋಗುತ್ತಾರೆ. ಒಬ್ಬರೇ ನಿರ್ಧರಿಸುವುದಿಲ್ಲ. ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡುತ್ತಾರೆ ಎಂದು ಹೊಗಳಿಸಿದರು.
ಇದೇ ವೇಳೆ ತಾವು ಕಾಂಗ್ರೆಸ್‌ನಿಂದ ಹೊರಬಂದಿರುವ ವಿಷಯವನ್ನು ತಿಳಿಸಿದ ಶರದ್‌ ಪವಾರ್, ನಾನು ಕಾಂಗ್ರೆಸ್‍ನಿಂದ ದೂರ ಹೋಗುವ ಬಗ್ಗೆ ಯೋಚಿಸಿರಲಿಲ್ಲ. ಬೇರೆ ಯಾವುದನ್ನು ಸಹ ಮಾಡಬೇಕೆಂದು ಚಿಂತಿಸಿರಲಿಲ್ಲ. ಕಾಂಗ್ರೆಸ್ ನನ್ನನ್ನು ಆರು ವರ್ಷಗಳ ಕಾಲ ಪಕ್ಷದಿಂದ ತೆಗೆದುಹಾಕಿತು. ಆದ್ದರಿಂದ ನಾನು ಎನ್‍ಸಿಪಿ ರಚಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು. ಕಾಂಗ್ರೆಸ್‍ನಿಂದ ಹೊರಬಂದಿದ್ದರೂ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ ಮತ್ತು ಯಶವಂತ್‌ರಾವ್ ಚವಾಣ್ ಅವರ ಸಿದ್ಧಾಂತಗಳನ್ನು ಬಿಟ್ಟಿಲ್ಲ ಎಂದು ಹೇಳಿದರು.
ಎನ್‍ಸಿಪಿ ಸ್ಥಾಪಿಸಲು 1999 ರವರೆಗೆ ಕಾದ ಬಗ್ಗೆ ಪಶ್ಚಾತ್ತಾಪವಿಲ್ಲ. ನನ್ನ ಕುಟುಂಬ ಕೆಲವು ಸಿದ್ಧಾಂತಗಳನ್ನು ಅನುಸರಿತ್ತು. ಎಡಪಂಥೀಯ ಸಿದ್ಧಾಂತವನ್ನು ನಮ್ಮ ಪಕ್ಷ ಪ್ರತಿಪಾದಿಸುತ್ತಿದೆ. 1958 ರಲ್ಲಿ ಪುಣೆಗೆ ಬಂದಾಗ ನನ್ನಂತಹ ಯುವಕರು ಗಾಂಧಿ, ನೆಹರೂ ಮತ್ತು ಚವಾಣ್ ಅವರ ಸಿದ್ಧಾಂತಗಳಿಂದ ಪ್ರೇರಣೆಗೊಂಡು ಆ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದೆವು. ಕಾಂಗ್ರೆಸ್‍ಗೆ ಆ ಸಿದ್ಧಾಂತಗಳೇ ಆಧಾರಸ್ತಂಭವಾಗಿತ್ತು ಎಂದು ಸ್ಮರಿಸಿಕೊಂಡರು.
ವಿವಾಹಿತ ಮತ್ತೊಬ್ಬಳ ಜತೆ ಲೈಂಗಿಕ ಸಂಬಂಧ ಹೊಂದಿದರೆ ಅದು ಶಿಕ್ಷಾರ್ಹ ಅಪರಾಧವಲ್ಲ- ಕಾನೂನು ಹೀಗೆ ಹೇಳಿದೆ…

VIDEO: ಮಹಾಮಸ್ತಕಾಭಿಷೇಕದ ವೇಳೆ ಕಣ್ಣುಬಿಟ್ಟ ಅಯ್ಯಪ್ಪ? ಮಣಿಕಂಠನ ವಿಡಿಯೋ ನೋಡಿ ಪುಳಕಗೊಂಡ ಭಕ್ತಾದಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − thirteen =
Remember me
