ಮುಂಬೈ:ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳು ಒಂದೊಂದೇ ಹೊರಕ್ಕೆ ಬರುತ್ತಿವೆ. ಇದೀಗ ಆರ್ಯನ್‌ ಖಾನ್‌ ಡ್ರಗ್ಸ್‌ಗೆ ಸಂಬಂಧಿಸಿದಂತೆ ಇತರರಿಗೆ ಮೊಬೈಲ್‌ನಲ್ಲಿ ಕಳುಹಿಸಿರುವ ಸಂದೇಶಗಳನ್ನು ಅಳಿಸಿಹಾಕಲು ಎಥಿಕಲ್ ಹ್ಯಾಕರ್ ಒಬ್ಬರಿಗೆ ಲಂಚ ನೀಡಿರುವುದಾಗಿ ಆರೋಪ ಕೇಳಿಬಂದಿದೆ.
ಶಾರುಖ್‌ ಖಾನ್‌ ಅವರ ಮ್ಯಾನೇಜರ್‌ ಪೂಜಾ ದದ್ಲಾನಿ ಅವರ ಮೊಬೈಲ್​ ಸಿಡಿಆರ್‌ (ಕಾಲ್‌ ಡಿಟೇಲ್‌ ರಿಕಾರ್ಡ‌) ಅಳಿಸಿ ಹಾಕಲು ತಮಗೆ ಲಂಚ ನೀಡಲು ಆಮಿಷ ಒಡ್ಡಿದ್ದರು ಎಂದು ಎಥಿಕಲ್ ಹ್ಯಾಕರ್ ಮನೀಶ್ ಭಂಗಲೆ ಅವರು ಹೇಳಿಕೆ ನೀಡಿದ್ದಾರೆ. ಈ ಕುರಿತು ಅವರು ಮುಂಬೈ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು, ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ದದ್ಲಾನಿ ಅವರ ಮೊಬೈಲ್‌ ಪರಿಶೀಲಿಸಿದ್ದೆ. ಅದು ಆರ್ಯನ್‌ ಹೆಸರಿನಲ್ಲಿ ಇತ್ತು. ಅಂದರೆ ಆರ್ಯನ್‌ ಖಾನ್‌ ಮಾಡಿರುವ ಮೆಸೇಜ್‌ ಅದಾಗಿತ್ತು. ಅದು ಶಾರುಖ್‌ ಮ್ಯಾನೇಜರ್‌ ಬಳಿ ಇತ್ತು. ಇದನ್ನೆಲ್ಲಾ ಅಳಿಸಿ ಹಾಕಿದರೆ ನಿಮಗೆ ಐದು ಲಕ್ಷ ರೂಪಾಯಿ ಸಿಗುತ್ತದೆ ಎಂದು ಅಕ್ಟೋಬರ್ 6ರಂದು ಜಲಗಾಂವ್‌ನಲ್ಲಿ ಅಲೋಕ್ ಜೈನ್ ಮತ್ತು ಶೈಲೇಶ್ ಚೌಧರಿ ಎನ್ನುವವರು ನನ್ನನ್ನು ಕೇಳಿಕೊಂಡಿದ್ದರು ಎಂದು ಭಂಗಲೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನನಗೆ ಈ ಬಗ್ಗೆ 10 ಸಾವಿರ ರೂಪಾಯಿ ಮುಂಗಡ ಹಣ ನೀಡಲಾಗಿತ್ತು. ಯಾವ ಸಂಖ್ಯೆಯಲ್ಲಿನ ಡಿಟೇಲ್ಸ್‌ ಅಳಿಸಿಹಾಕಬೇಕು ಎಂದು ಒಂದು ಮೊಬೈಲ್‌ ನಂಬರ್‌ ನೀಡಲಾಗಿತ್ತು. ಅದನ್ನು ಟ್ರೂಕಾಲರ್‌ನಲ್ಲಿ ಹಾಕಿ ನೋಡಿದಾಗ ಸ್ಯಾಮ್ ಡಿಸೋಜಾ ಎಂದು ತೋರಿಸುತ್ತಿತ್ತು ಎಂದು ಅವರು ಪತ್ರದಲ್ಲಿ ಹೇಳಿದ್ದು, ತನಿಖೆಗೆ ಆದೇಶಿಸುವಂತೆ ಕೋರಿದ್ದಾರೆ.
ಆರ್ಯನ್‌ ಡ್ರಗ್ಸ್‌ ಕೇಸ್‌ನಲ್ಲಿ ಲಂಚದ ಆರೋಪ: ಮದುವೆ ಫೋಟೋ ಶೇರ್‌ ಮಾಡಿ ಬಾಯಿಮುಚ್ಚಿಸಿದ ವಾಂಖೆಡೆ ಪತ್ನಿ

ಕಳ್ಳತನ ಮಾಡಲು ಬೆತ್ತಲಾಗಿ ಹೋಗ್ತಿದ್ದ, ಹೊರಗೆ ಹೆಂಡ್ತಿ ಕಾಯ್ತಿದ್ಲು! ಬಾಗಲಕೋಟೆ ಖತರ್ನಾಕ್‌ ದಂಪತಿ ಅರೆಸ್ಟ್‌

ಉದ್ಯೋಗ ಪಡೆಯಲು ಲಕ್ಷಲಕ್ಷ ಲಂಚ ಕೊಡ್ತೀರಾ? ನೇಮಕಾತಿ ಪತ್ರ ಹಿಡಿದು ಹೋದವರಿಗೆ ಏನ್‌ ಗತಿಯಾಯ್ತು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 9 =
Remember me
