ಮುಂಬೈ:ಡ್ರಗ್ಸ್‌ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಕೊನೆಗೂ ಜಾಮೀನು ಸಿಕ್ಕಿ ನಿನ್ನೆಯಷ್ಟೇ ಜೈಲಿನಿಂದ ಬಿಡುಗಡೆ ಹೊಂದಿದ್ದಾನೆ ಇದರ ಬೆನ್ನಲ್ಲೇ ಆತನ ಜತೆ ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ ಮುನ್ಮುನ್​ ಧಮೇಚಾ ಕೂಡ ಇಂದು ಬಿಡುಗಡೆಯಾಗಿದ್ದಾಳೆ.ಎನ್‌ಸಿಬಿ ತಂಡವು ಅಕ್ಟೋಬರ್ 2ರಂದು ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ದಾಳಿ ಮಾಡಿ, ಶಾರೂಖ್ ಖಾನ್ ಪುತ್ರ ಸೇರಿ ಕೆಲವರನ್ನು ಬಂಧಿಸಿತ್ತು. ಮುನ್ಮುನ್ ಧಮೇಚಾರನ್ನು ಬೈಕುಲ್ಲಾ ಮಹಿಳಾ ಕಾರಾಗೃಹದಲ್ಲಿ ಇರಿಸಿದ್ದು, ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್​ನನ್ನು ಅರ್ಥರ್ ರೋಡ್ ಜೈಲಿನಲ್ಲಿ ಇರಿಸಲಾಗಿತ್ತು. ಇವರಿಬ್ಬರೂ ಕೋರ್ಟ್‌ ಜಾಮೀನು ನೀಡಿತ್ತು.ಮುನ್ಮುನ್​ ಧಮೇಚಾ ದೆಹಲಿಯಲ್ಲಿ ವಾಸವಿದ್ದರೂ ಆಕೆ ಮೂಲತಃ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ತಹಸಿಲ್​ನವಳು. ಆದರೆ ಮುನ್ಮುನ್ ತಂದೆ ಈ ಹಿಂದೆಯೇ ಸಾವಿಗೀಡಾಗಿದ್ದು, ತಾಯಿ ಕಳೆದ ವರ್ಷ ಮೃತಪಟ್ಟಿದ್ದರಿಂದ ಬಳಿಕ ಆ ಮನೆ ಖಾಲಿ ಉಳಿದಿದೆ. ನಂತರ ಮುನ್ಮುನ್​ ತನ್ನ ಸಹೋದರ ದೆಹಲಿಯಲ್ಲಿ ಉದ್ಯೋಗದಲ್ಲಿ ಇದ್ದಿದ್ದರಿಂದ ದೆಹಲಿಗೆ ಬಂದು ಆತನೊಂದಿಗೆ ನೆಲೆಸಿದ್ದಾಳೆ.ಸುಮಾರು 6 ವರ್ಷಗಳಿಂದ ಸಹೋದರ ಪ್ರಿನ್ಸ್ ಜತೆ ದೆಹಲಿಯಲ್ಲಿ ನೆಲೆಸಿರುವ ಮುನ್ಮುನ್​ ಧಮೇಚ ಮಾಡೆಲ್​ ಆಗಿಯೂ ಗುರುತಿಸಿಕೊಂಡಿದ್ದಾಳೆ. ತನ್ನ ಬೆಕ್ಕಿನ ನಡಿಗೆಯ ಹಲವಾರು ವಿಡಿಯೋ ಫೋಟೋಗಳನ್ನು ಅವಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಜತೆಗೆ ಒಂದಷ್ಟು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿರುವ ಮುನ್ಮುನ್​ ಬಾಲಿವುಡ್​ನ ಕೆಲವು ಗಣ್ಯರೊಂದಿಗೆ ಸಂಪರ್ಕವನ್ನೂ ಹೊಂದಿದ್ದಾಳೆ. ಮಾತ್ರವಲ್ಲದೆ ಅವರೊಂದಿಗೆ ಪಾರ್ಟಿಗಳಲ್ಲಿಯೂ ತೊಡಗಿಕೊಳ್ಳುತ್ತಿದ್ದ ಆಕೆ​ ಇದೀಗ ಸಿಕ್ಕಿ ಹಾಕಿಕೊಂಡಿದ್ದಳು.ಇದರ ಬೆನ್ನಲ್ಲೇ ಆರ್ಯನ್‌ ಖಾನ್‌ಗೆ ಮನೆಯಲ್ಲಿ ಹನುಮಾನ್‌ ಚಾಲೀಸಾ ಮೂಲಕ ಅದ್ದೂರಿ ಸ್ವಾಗತ ಸಿಕ್ಕಿದೆ.ಸಾಧುವೊಬ್ಬರು ಶಾರುಖ್‌ ಮನೆಯ ಎದುರು ಹನುಮಾನ್​ ಚಾಲೀಸ್​ ಪಠಿಸುವ ಮೂಲಕ ಮನೆಗೆ ಬರಮಾಡಿಕೊಂಡರು. ಖಾನ್‌ ಕುಟುಂಬಕ್ಕೆ ಹಿಡಿದಿರುವ ಶನಿ ಬಿಟ್ಟು ಹೋಗಲಿ. ಅವರೆಲ್ಲರೂ ಸುಖವಾಗಿ ಬಾಳಲಿ ಎಂದು ಚಾಲೀಸ್‌ ಪಠಿಸಿ ಸಾಧು ಹೇಳಿದ್ದಾರೆ.
ಪುನೀತ್‌ ಸಾವಿನ ನಂತರ ಎಚ್ಚೆತ್ತುಕೊಂಡ ಕೇರಳ ಸರ್ಕಾರ: ಜಿಮ್‌ಗಳಲ್ಲಿ ಹೊಸ ನಿಯಮ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
