ನವದೆಹಲಿ:ನಾನು ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡಿದ್ದೇನೆ. ನನಗೆ ವರ ಕೂಡ ಎರಡೂ ಡೋಸ್‌ ಹಾಕಿಕೊಂಡವ ಬೇಕು ಎಂದು ಯುವತಿಯೊಬ್ಬಳು ಮ್ಯಾಟ್ರಿಮೋನಿ ಕಾಲಮ್‌ನಲ್ಲಿ ಜಾಹೀರಾತು ನೀಡಿದ್ದಾಳೆ.
’ವರ ಬೇಕಾಗಿದ್ದಾನೆ’ ಎಂಬ ಕಾಲಮ್‌ ಅಡಿಯಲ್ಲಿ ತನ್ನ ಬಗ್ಗೆ ಹೇಳಿಕೊಂಡಿರುವ ವಧು, ತನಗೆ ಯಾವ ರೀತಿಯ ವರ ಬೇಕಾಗಿದ್ದಾನೆ ಎಂಬಲ್ಲಿ ಲಸಿಕೆಯ ಬಗ್ಗೆ ವಿವರಿಸಿದ್ದಾಳೆ. ಕಳೆದ ಜೂನ್‌ 4 ರ ಪತ್ರಿಕೆಯೊಂದರಲ್ಲಿ ಈ ಜಾಹೀರಾತು ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ಭಾರಿ ವೈರಲ್‌ ಆಗಿದೆ.
‘ನಾನು ಸ್ವಯಂ ಉದ್ಯೋಗಿ. ರೋಮನ್ ಕ್ಯಾಥೊಲಿಕ್ ಯುವತಿ, ಎಂಎಸ್ಸಿ ಪದವೀಧರೆ ಎಂದು ಬರೆದುಕೊಂಡಿರುವ ಯುವತಿ ಕೋವಿಶೀಲ್ಡ್‌ ಲಸಿಕೆಯ ಎರಡೂ ಡೋಸ್‌ ಹಾಕಿಕೊಂಡಿದ್ದೇನೆ ಎಂದಿದ್ದಾಳೆ. ಅದೇ ರೀತಿ ಇದೇ ಧರ್ಮದ 28-30 ವರ್ಷ ವಯಸ್ಸಿನ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಂಡ ವರ ಬೇಕಾಗಿದ್ದಾನೆ ಎಂದು ಬರೆದಿದ್ದಾಳೆ.
Vaccinated bride seeks vaccinated groom! No doubt the preferred marriage gift will be a booster shot!? Is this going to be our New Normal?pic.twitter.com/AJXFaSAbYs— Shashi Tharoor (@ShashiTharoor)June 8, 2021
Vaccinated bride seeks vaccinated groom! No doubt the preferred marriage gift will be a booster shot!? Is this going to be our New Normal?pic.twitter.com/AJXFaSAbYs
ಇದನ್ನು ನೋಡಿದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ತಬ್ಬಿಬ್ಬಾಗಿದ್ದು, ಹೀಗೂ ಇದೆಯಾ ಎಂದು ಪ್ರಶ್ನಿಸಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಜಾಹೀರಾತನ್ನು ಶೇರ್‌ ಮಾಡಿರುವ ಅವರು, ಲಸಿಕೆ ಹಾಕಿಸಿಕೊಂಡ ವಧು ಲಸಿಕೆ ಹಾಕಿಸಿಕೊಂಡ ವರನನ್ನು ಹುಡುಕುತ್ತಿದ್ದಾಳೆ. ಹೀಗೆ ಲಸಿಕೆಯ ಬೂಸ್ಟರ್ ಡೋಸ್ ಆಗುವುದರಲ್ಲಿ ಸಂಶಯವಿಲ್ಲ. ಇದು ನಮ್ಮ ಹೊಸ ಸುಧಾರಣವಾಗಲಿದೆಯೇ ಎಂದು ಶೀರ್ಷಿಕೆ ನೀಡಿದ್ದಾರೆ ತರೂರ್‌. ಇದಕ್ಕೆ ಹಲವರು ಹಲವು ರೀತಿಯಲ್ಲಿ ಕಮೆಂಟ್‌ ಮಾಡಿದ್ದು, ಕಮೆಂಟಿಗರೊಬ್ಬರು, ನೀವು ಇನ್ನೂ ಮ್ಯಾಟ್ರಿಮೋನಿಯಲ್‌ ಪೇಜ್‌ ನೋಡುತ್ತಿದ್ದೀರಾ? ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು ಅದೇ ಪತ್ರಿಕೆಯ ಇನ್ನೊಂದು ಪುಟದಲ್ಲಿ ತರೂರ್‌ ಅವರ ವಿರುದ್ಧ ಬಂದಿರುವ ಸುದ್ದಿಯೊಂದನ್ನು ಶೇರ್‌ ಮಾಡಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + four =
Remember me
