ನವದೆಹಲಿ:ವಿವಾದಾತ್ಮಕ ಹೇಳಿಕೆ ಸೇರಿದಂತೆ ಒಂದಿಲ್ಲೊಂದು ವಿಷಯಗಳಿಗೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್‌ ಇದೀಗ ಮಾಡಿದ ಟ್ವೀಟ್‌ ಒಂದು ನೆಟ್ಟಿಗರ ತಲೆಯನ್ನು ಚಿಟ್ಟು ಹಿಡಿಸಿದೆ.
ಇಂಗ್ಲಿಷ್ ಭಾಷೆಯ ಮೇಲೆ ಸಾಕಷ್ಟು ಪಾಂಡಿತ್ಯ ಹೊಂದಿರುವ ಶಶಿ ತರೂರ್‌ ಹೊಸ ಹೊಸ ಶಬ್ದಗಳನ್ನು ಬರೆಯುವ ಮೂಲಕವೂ ಸುದ್ದಿಯಲ್ಲಿ ಇರುತ್ತಾರೆ. ಇವರು ಕೆಲವೊಮ್ಮೆ ಬರೆಯುವ ಶಬ್ದಗಳನ್ನು ಡಿಕ್ಷನರಿ ನೋಡಿಯೇ ತಿಳಿದುಕೊಳ್ಳಬೇಕಾಗುತ್ತದೆ. ಇದೀಗ ತಮ್ಮ ಟ್ವೀಟ್‌ ಒಂದರಲ್ಲಿ 29 ಅಕ್ಷರದ ‘floccinaucinihilipilification’ ಎಂಬ ಶಬ್ದವನ್ನು ಬರೆದಿದ್ದು ಚರ್ಚೆಯಲ್ಲಿದ್ದಾರೆ.
Not guilty! How can you indulge in such floccinaucinihilipilification,@KTRTRS? Left to me I'd happily call them "CoroNil", "CoroZero", & even "GoCoroNaGo!" But these pharmacists are more procrustean….https://t.co/YrIFSoVquo
— Shashi Tharoor (@ShashiTharoor)May 21, 2021

ತೆಲಂಗಾಣ ಪುರಸಭೆ ಆಡಳಿತ ಹಾಗೂ ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮ ರಾವ್‌ ಅವರ ಜತೆಗಿನ ಟ್ವಿಟರ್‌ ಸಂವಾದಲ್ಲಿ ಶಶಿ ತರೂರ್‌ ‘floccinaucinihilipilification’ ಎಂಬ ಶಬ್ದವನ್ನು ಬಳಸಿದ್ದು, ನೆಟ್ಟಿಗರು ಅದರ ಅರ್ಥ ಹುಡುಕುವುದು ದೂರದ ಮಾತು, ಉಚ್ಚಾರಣೆ ಮಾಡಲು ಸಾಧ್ಯವಾಗದೇ ತಲೆ ಚಚ್ಚಿಕೊಳ್ಳುತ್ತಿದ್ದಾರೆ!
ಕರೊನಾಗೆ ಇದಾಗಲೇ ಕಂಡುಹಿಡಿರುವ ಔಷಧಗಳಿಗೂ ಬಹುಶಃ ಶಶಿ ಅವರೇ ಹೆಸರು ಸೂಚಿಸಿರಬೇಕು ಎಂದು ಕೆ.ಟಿ ರಾಮರಾವ್‌ ಹೇಳಿದ್ದಾರೆ. ಇಂಗ್ಲಿಷ್ ಡಿಕ್ಷನರಿಯಲ್ಲಿ ಕಂಡು ಬರುವ ತಾಂತ್ರಿಕೇತರ ಪದಗಳಲ್ಲೇ ಅತ್ಯಂತ ಉದ್ದವಾದ ಪದವಿದು ಎನ್ನಲಾಗಿದ್ದು, ಇದರ ಬಗ್ಗೆ ಸದ್ಯ ಚರ್ಚೆ ಜೋರಾಗಿದೆ.
ಮಗು ಹುಟ್ಟಿದ ಸಂತಸದ ಸುದ್ದಿ ಕೇಳುವ ಮುನ್ನವೇ ಕರೊನಾಕ್ಕೆ ಬಲಿಯಾದ ತಂದೆ: ಕಲಬುರಗಿಯಲ್ಲೊಂದು ದುರಂತ ಘಟನೆ

ನಿಮಗೂ ಮಕ್ಕಳಿದ್ದರೆ ಅವನ ದೇಹ ಬಯಸ್ತಿದ್ರಾ? ತನ್ನ ಹೆಂಡ್ತಿ, ಮಕ್ಕಳನ್ನೇ ಪಾಲಿಸದವ ನಿಮಗೇನು ಮಾಡಿಯಾನು?

ಶಾಕಿಂಗ್‌! ಬ್ಲ್ಯಾಕ್‌ ಫಂಗಸ್‌ಗಿಂತಲೂ ಭೀಕರ ವೈಟ್‌ ಫಂಗಸ್‌ ಪತ್ತೆ- ಬಿಹಾರದ ನಾಲ್ವರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
