ಬೆಂಗಳೂರು:ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
ಈ ಮೂಲಕ ಶಶಿಕಲಾ ಬಿಡುಗಡೆ ಎಂದು ಎಂಬ ಬಗ್ಗೆ ಇಲ್ಲಿಯವರೆಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಸದ್ಯ ಬ್ರೇಕ್​ ಬಿದ್ದಿದೆ. ಇವರ ಬಿಡುಗಡೆಯ ಕುರಿತಂತೆ ಬೆಂಗಳೂರು ಮೂಲದ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹಮೂರ್ತಿ ಎನ್ನುವವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಂದ್ರ ಕಾರಾಗೃಹಕ್ಕೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು, ಶಶಿಕಲಾ ನಟರಾಜನ್ ಜನವರಿ 27, 2021 ರಲ್ಲಿ ಬಿಡುಗಡೆಗೊಳ್ಳಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಕ್ಕೆ ಪಾವತಿಸಬೇಕಾಗಿರುವ ದಂಡ ಪಾವತಿಗೆ ವಿಳಂಬ ಮಾಡಿದರೆ ಅವರು ಬಿಡುಗಡೆ ಅವಧಿ ಮುಂದೂಡಲಾಗುತ್ತದೆ. ಒಂದು ವೇಳೆ ಪರೋಲ್ ರಜಾಗಳನ್ನು ಲೆಕ್ಕ ಹಾಕಿದರೆ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ.
ಅಕ್ರಮ ಆಸ್ತಿ ಪ್ರಕರಣದಲ್ಲಿ 2017ರಲ್ಲಿ ಶಶಿಕಲಾ ಅವರಿಗೆ ಜೈಲುಶಿಕ್ಷೆಯಾಗಿತ್ತು. ಒಂದೊಮ್ಮೆ ಆಕೆ ತನ್ನ ಮೇಲೆ ವಿಧಿಸಲಾಗಿರುವ ದಂಡದ ಮೊತ್ತ ಪಾವತಿಸಿದ್ದಾದರೆ 2021 ಜನವರಿ 27ಕ್ಕೆ ಅವರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ,. ದಂಡ ಪಾವತಿಸಲು ವಿಫಲವಾಗಿದ್ದರೆ 2022 ಫೆಬ್ರವರಿ 27 ರವರೆಗೆ ಅಂದರೆ ಇನ್ನೂ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಬೇಕಿದೆ.
ಇದನ್ನೂ ಓದಿ:ಮಾಸ್ಕ್​ ಧರಿಸಲ್ವಾ? ಹಾಗಿದ್ರೆ ಮೃತ ಸೋಂಕಿತರಿಗೆ ಗುಂಡಿ ತೋಡುವುದು ಕಡ್ಡಾಯ…
66.65 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ, ಸುಧಾಕರನ್ ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿಯಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿ ಮಾಡಲಾಗಿದೆ. ಅಲ್ಲದೆ ನ್ಯಾಯಾಲಯ ನಾಲ್ಕು ವರ್ಷದ ಜೈಲುಶಿಕ್ಷೆಯೊಡನೆ 10 ಕೋಟಿ ರೂಪಾಯಿ ದಂಡ ವಿಧಿಸಿದೆ.
ಕೆಲವು ತುರ್ತು ಸಂದರ್ಭಗಳಲ್ಲಿ ಕೈದಿಗಳಿಗೆ ಪರೋಲ್​ ಮೇಲೆ ಬಿಡುಗಡೆ ಮಾಡಲಾಗುತ್ತದೆ. ಅವರು ಈ ಅವಧಿಯಲ್ಲಿ ಎಷ್ಟು ದಿನ ಜೈಲಿನಿಂದ ಹೊರಗೆ ಉಳಿದಿದ್ದಾರೋ, ಶಿಕ್ಷೆ ಮುಗಿದ ದಿನದಿಂದ ಅಷ್ಟೇ ಅವಧಿಯವರೆಗೆ ಅವರು ಜೈಲಿನಲ್ಲಿ ಇರಬೇಕಾಗುತ್ತದೆ. ಆದ್ದರಿಂದ ಒಂದೊಮ್ಮೆ ಶಶಿಕಲಾ ಹಿಂದೇನಾದರೂ ಪರೋಲ್​ ಪಡೆದುಕೊಂಡಿದ್ದರೆ, ಬಿಡುಗಡೆಯ ದಿನಾಂಕ ಆಚೀಚೆಯಾಗುವ ಸಾಧ್ಯತೆ ಇದೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯೂ ಹತ್ತಿರವಾಗುತ್ತಿದ್ದು ಈ ನಿಟ್ಟಿನಲ್ಲಿ ಶಶಿಕಲಾ ನಟರಾಜನ್ ಬಿಡುಗಡೆ ಮಹತ್ವ ಪಡೆದುಕೊಂಡಿದೆ.
ಬಂಧಿತ ಮುಸ್ಲಿಮರ ಬಳಕೆ- ಕಂಪ್ಯೂಟರ್,​ ಹತ್ತಿ, ಕೂದಲಾಯ್ತು ಬ್ಯಾನ್:​ ಚೀನಾಕ್ಕೆ ಶಾಕ್​ ಕೊಟ್ಟ ದೊಡ್ಡಣ್ಣ

ಕರೊನಾ ಲಸಿಕೆ 2024ಕ್ಕಿಂತ ಮುಂಚೆ ಸಂಪೂರ್ಣ ಲಭ್ಯವಾಗುವುದು ಅಸಾಧ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − three =
Remember me
