ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವ ನಟಿಯರ ಪೈಕಿ ನಟಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು. ಪತಿ ರಾಜ್ ಕುಂದ್ರಾ ಪೋರ್ನ್​ ವಿಡಿಯೋ ಕೇಸ್​ನಲ್ಲಿ ಸಿಲುಕಿದ ಮೇಲೆ ಆ ಕೇಸ್​ನಲ್ಲಿ ಶಿಲ್ಪಾ ಹೆಸರು ಕೂಡ ಥಳಕು ಹಾಕಿಕೊಂಡಿದ್ದು, ಅದರ ವಿಚಾರಣೆ ಇನ್ನೂ ಕೋರ್ಟ್​ನಲ್ಲಿ ಇದೆ. ಆಗ ಸ್ವಲ್ಪ ಕಾಲ ಜಾಲತಾಣದಿಂದ ದೂರವಿದ್ದ ಶಿಲ್ಪಾ ಪುನಃ ಕಾಣಿಸಿಕೊಂಡಿದ್ದರು.
ಆದರೆ ಇದೀಗ ಮತ್ತೆ ಜಾಲತಾಣದಿಂದ ದೂರವಾಗ್ತಿದ್ದಾರಂತೆ ನಟಿ. ಸಾಮಾಜಿಕ ಜಾಲತಾಣದಿಂದ ಹೊರಗುಳಿಯುತ್ತೇನೆ ಅಂತಾ ಪೋಸ್ಟ್ ಮಾಡಿ, ಬ್ರೇಕ್ ತಗೆದುಕೊಂಡಿದ್ದಾರೆ ಇವರು. ಇನ್​ಸ್ಟಾಗ್ರಾಂ ಖಾತೆಯಲ್ಲಿ ಯಾವುದೇ ಫೋಟೋ ಹಾಕಿಕೊಳ್ಳದೇ ಖಾಲಿ ಬಿಟ್ಟಿದ್ದಾರೆ ನಟಿ.
ಈ ಕುರಿತು ಇನ್​ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾರೆ, ನಾನು ಹೊಸ ಅವತಾರವನ್ನು ಕಂಡುಕೊಳ್ಳುವವರೆಗೂ ಸಾಮಾಜಿಕ ಜಾಲತಾಣದಿಂದ ದೂರ ಇರುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ. ಇವೆಲ್ಲಾ ತುಂಬಾ ಬೋರ್​ ಬೋರ್​ ಅನಿಸುತ್ತಿದೆ, ಎಲ್ಲವೂ ಏಕತಾನಗೆ ಎನಿಸುತ್ತಿದೆ. ಆದ್ದರಿಂದ ಜಾಲತಾಣದಿಂದ ದೂರ ಉಳಿಯುತ್ತಿದ್ದೇನೆ. ಹೊಸ ಅವತಾರದಲ್ಲಿ ಬರುತ್ತೇನೆ ಎಂದಿದ್ದಾರೆ. ಅಲ್ಲಿಯವರೆಗೆ ಎಲ್ಲರಿಗೂ ಬೈ ಬೈ ಎಂದಿದ್ದಾರೆ. ಶಿಲ್ಪಾ ಅಭಿಮಾನಿಗಳಿಗೆ ಇದು ನುಂಗಲಾಗದ ತುತ್ತಾಗಿದೆ.


A post shared by Shilpa Shetty Kundra (@theshilpashetty)

ಈ ನಟಿ ಅಟೆನ್ಷನ್​ ಸೀಕರ್​.. ಟವಲ್​ ಹಾಕೋಕೆ ಬಂದಿದ್ದಾರೆ ಅಷ್ಟೇ: ರಮ್ಯಾ ವಿರುದ್ಧ ನಲಪಾಡ್​ ಕಿಡಿ

ರಮ್ಯಾ v/s ಡಿಕೆಶಿ: ಕಾಂಗ್ರೆಸ್​ ಒಳಗೇ ಕೊತಕೊತ- ರೊಚ್ಚಿಗೆದ್ದ ‘ಪದ್ಮಾವತಿ’, ಒಂದೇ ಸಮನೆ ಟ್ವೀಟ್​ ಸಮರ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
