ಮುಂಬೈ:ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಿಂಗಳುಗಳ ಕಾಲ ಜೈಲಿನಲ್ಲಿ ಬಂಧಿಯಾಗಿದ್ದ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಈಚೆಗೆ ಜಾಮೀನು ದೊರೆತು ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಆರಂಭದಲ್ಲಿ ಶಿಲ್ಪಾ ಶೆಟ್ಟಿ ತುಂಬಾ ದುಃಖದಲ್ಲಿದ್ದರೂ ನಂತರ ಸಹಜ ಜೀವನಕ್ಕೆ ಬಂದಿದ್ದ ಅವರು ಸಾರ್ವಜನಿಕವಾಗಿ ಗುರುತಿಸಿಕೊಳ್ಳಲು ಶುರುಮಾಡಿದ್ದರು. ಇದೇ ಪ್ರಕರಣದಲ್ಲಿ ಶಿಲ್ಪಾ ವಿರುದ್ಧ ಆರೋಪ ಕೇಳಿಬರುತ್ತಿದೆಯಾದರೂ ನಟಿ ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಂತೆ ಸಾರ್ವಜನಿಕವಾಗಿ ತೋರಿಸಿಕೊಳ್ಳುತ್ತಿಲ್ಲ.
ಈಗಾಗಲೇ ಸಾಕಷ್ಟು ಪೋಸ್ಟ್‌ಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಇದೀಗ ಪ್ರೀತಿಯ ಕುರಿತಾಗಿ ನಿಗೂಢ ಸಂದೇಶವೊಂದನ್ನು ಹಂಚಿಕೊಂಡಿದ್ದು, ಇದೇನಿರಬಹುದು ಎಂದು ಅವರ ಅಭಿಮಾನಿಗಳ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಪ್ರೀತಿ ಕುರಿತಾದ ಪುಸ್ತಕ ಪೋಸ್ಟ್​ವೊಂದನ್ನು ಅವರು ಶೇರ್‌ ಮಾಡಿದ್ದು, ಅದರ ಚರ್ಚೆ ಜೋರಾಗಿದೆ. ​​​ಅಮೆರಿಕನ್ ಕವಿಯೊಬ್ಬರ ‘ನಿನ್ನ ಹೃದಯದಲ್ಲಿ ಪ್ರೀತಿ ಇದೆ’ ಪುಸ್ತಕದ ಹಾಳೆಯೊಂದರ ಫೋಟೋ ತೆರೆದು ಅದನ್ನು ಶಿಲ್ಪಾ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪ್ರೀತಿಯ ಬಗ್ಗೆ ಉಲ್ಲೇಖಿಸಿದ್ದಾರೆ.
ಬೇರೊಬ್ಬರನ್ನು ಪ್ರೀತಿಸುವ ಹೃದಯ ನಿಮ್ಮಲ್ಲಿದೆ ಎಂದು ತಿಳಿದಾಗ ನೀವು ಯಶಸ್ವಿಯಾಗುತ್ತೀರಿ. ಪ್ರೀತಿಯಲ್ಲಿ ಬೀಳುವುದು ಸುಲಭ, ಪ್ರೀತಿಸುವುದು ಕಷ್ಟ. ನಾನು ಪ್ರೀತಿಯಲ್ಲಿ ಬಿದ್ದಾಗ, ನಾವು ಪ್ರೀತಿಯನ್ನ ಮರಳಿ ಬಯಸುತ್ತೇವೆ. ಯಾವಾಗ ನಾವು ಮುಕ್ತವಾಗಿ ಪ್ರೀತಿಸುತ್ತೇವೋ, ನಮ್ಮನ್ನೂ ಮುಕ್ತವಾಗಿ ನೀಡುತ್ತೇವೆ. ಈ ರೀತಿ ಪ್ರೀತಿಸಿದಾಗ ಮಾತ್ರ ನಾವು ಅತ್ಯುತ್ತಮ ವ್ಯಕ್ತಿಗಳಾಗುತ್ತೇವೆ’. ಎಂಬ ಸಂದೇಶ ಈ ಪುಸ್ತಕದಲ್ಲಿನ ಸಾರಾಂಶ.
ಆದರೆ ಯಾರಿಗೆ ಈ ಸಂದೇಶ? ಶಿಲ್ಪಾ ಶೆಟ್ಟಿ ಯಾಕೆ ಈ ಮಾತನ್ನು ಹೇಳಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇಗೈದಿದ್ದು, ನಟಿ ಮಾತ್ರ ಮೌನಕ್ಕೆ ಜಾರಿದ್ದಾರೆ.

11 ಸಾವಿರ ಮಂದಿ ಸಾವಿಗೆ ಕಾರಣಳಾಗಿದ್ದ ಹಿಟ್ಲರ್‌ ಕಾರ್ಯದರ್ಶಿ- ವಿಚಾರಣೆ ವೇಳೆ ಎಸ್ಕೇಪ್‌ ಆದ 96ರ ವೃದ್ಧೆ!

ಗಂಡ ಖುಷಿಯಾಗಿದ್ರೆ ಡೌಟ್‌ ಬರತ್ತೆ ಮೇಡಂ… ನನ್ನನ್ನೂ ಸುಮ್‌ಸುಮ್ನೆ ಹೊಗಳ್ತಾ ಇರ್ತಾರೆ… ಏನಾದ್ರೂ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + five =
Remember me
