ಮುಂಬೈ:ಬ್ಲೂ ಫಿಲ್ಮ್ಂ ಕೇಸ್‌ನಲ್ಲಿ ಸಿಲುಕಿ ಜೈಲುಪಾಲಾಗಿ ಅಂತೂ ಜೈಲಿನಿಂದ ಹೊರಬಂದಿದ್ದಾರೆ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ಕುಂದ್ರಾ. ಇದೇ ವೇಳೆ ಶಿಲ್ಪಾ ಶೆಟ್ಟಿಯವರ ಪ್ರತಿಯೊಂದು ನಡೆಯ ಮೇಲೆ ಕಣ್ಣಿಟ್ಟಿದ್ದ ಅಭಿಮಾನಿಗಳು ಶಿಲ್ಪಾ ಏನೂ ಮಾತನಾಡದಿದ್ದರೂ ಪತಿಗೆ ಅವರು ವಿಚ್ಛೇದನ ಕೊಡುತ್ತಿದ್ದಾರೆ ಎಂದೇ ಸುದ್ದಿ ಮಾಡಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಯಾಗುತ್ತಲೇ ಇತ್ತು.
ರಾಜ್‌ ಕುಂದ್ರಾ ಜೈಲು ಪಾಲಾದ ಮೇಲೆ ಸ್ವಲ್ಪ ವಾರ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದ ಶಿಲ್ಪಾ ಶೆಟ್ಟಿ ಅಭಿಮಾನಿಗಳ ಸಂದೇಹಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟಿದ್ದರು. ಇದೀಗ ಎಲ್ಲರ ಬಾಯಿಯನ್ನು ಶಿಲ್ಪಾ ಶೆಟ್ಟಿ ಮುಚ್ಚಿಸಿದ್ದಾರೆ. ಮೌನವಾಗಿದ್ದುಕೊಂಡೇ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅದ್ಹೇಗೆ ಎಂದರೆ, ಪತಿ ರಾಜ್​ ಕುಂದ್ರಾ ಜತೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದ ದೇವಸ್ಥಾನಕ್ಕೆ ತೆರಳಿರುವ ಅವರು, ಅದರ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ತಾವು ವಿಚ್ಛೇದನ ಕೊಡುತ್ತಿಲ್ಲ, ತಮ್ಮ ದಾಂಪತ್ಯ ಚೆನ್ನಾಗಿಯೇ ಇದೆ, ಹೀಗೆಲ್ಲಾ ಸುದ್ದಿಗಳನ್ನು ಹರಡುವುದನ್ನು ತಡೆಯಿರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಂದಹಾಗೆ ಬ್ಲೂ ಫಿಲ್ಮ್ಂ ಕೇಸ್‌ನಲ್ಲಿ ಸಿಲುಕಿದ್ದ ರಾಜ್‌ ಕುಂದ್ರಾ ಅವರನ್ನು ಕಳೆದ ಜುಲೈ 19ರಂದು ಬಂಧಿಸಲಾಗಿತ್ತು. ಸೆಪ್ಟೆಂಬರ್​ನಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಇದಾದ ಬಳಿಕ ಇದೇ ಮೊದಲ ಬಾರಿಗೆ ದಂಪತಿ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಇಲ್ಲಿವೆ ನೋಡಿ ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂ ಫೋಟೋಗಳು
A post shared by GLAM_UNIVERSE (@vinitasaman123)
VIDEO: ಕ್ಯಾನ್ಸರ್‌ಪೀಡಿತರಿಗಾಗಿ ಎರಡು ವರ್ಷ ಕೂದಲು ಬಿಟ್ಟು ದಾನ ಮಾಡಿದ ಮಾಧುರಿ ಪುತ್ರ: ವಿಡಿಯೋ ಶೇರ್‌ ಮಾಡಿದ ನಟಿ

ಅಡಕೆ ಬೆಳೆಗಾರರಿಗೆ ಶಾಕ್‌ ನೀಡಿದ ಸಂಸದ- ಬ್ಯಾನ್‌ ಮಾಡಿ, ಜನರು ಸೇವಿಸದಂತೆ ನಿಷೇಧಿಸಿ ಎಂದು ಪ್ರಧಾನಿಗೆ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
