ಮುಂಬೈ:ಬಾಲಿವುಡ್‌ ನಟಿ, ಕನ್ನಡತಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್‌ ಕುಂದ್ರಾ ಜೋಡಿ 2019ರ ನವೆಂಬರ್‌ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ರಾಜ್‌ಕುಂದ್ರಾ ಅವರು, ತಮ್ಮ ಮೊದಲ ಪತ್ನಿ ಕವಿತಾರಿಗೆ ವಿಚ್ಛೇದನ ನೀಡಿ ನಂತರ ಶಿಲ್ಪಾ ಅವರನ್ನು ಮದುವೆಯಾಗಿದ್ದಾರೆ.
2006ರಲ್ಲಿ ಕುಂದ್ರಾ ಅವರು ಕವಿತಾರಿಗೆ ವಿಚ್ಛೇದನ ನೀಡಿದ್ದ ಸಂದರ್ಭದಲ್ಲಿ ಈ ಡಿವೋರ್ಸ್‌ಗೆ ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದರು. ಇದು ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಇದೀಗ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಜ್‌, ಇಷ್ಟು ದಿನ ತಾವು ಮುಚ್ಚಿಟ್ಟುಕೊಂಡ ಬಂದಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಅದೇನೆಂದರೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜ್‌ ಕುಂದ್ರಾ, ಮೌನ ಮುರಿದಿದ್ದು, ಕವಿತಾಳ ಜತೆಗಿನ ಸಂಬಂಧ ಮುರಿದುಬೀಳಲು ಶಿಲ್ಪಾ ಕಾರಣವಲ್ಲ, ಬದಲಿಗೆ ಕವಿತಾ ನನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ನಮ್ಮ ತಾಯಿ ಕಣ್ಣಾರೇ ಕಂಡಿದ್ದರು. ಹಾಸಿಗೆಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ನಂತರ ಅವರಿಬ್ಬರ ನಡುವಿನ ಮೊಬೈಲ್‌ ಸಂದೇಶಗಳನ್ನು ನೋಡಿದೆ. ಆಗ ಮೋಸ ಮಾಡುವುದು ತಿಳಿದಿದೆ, ಇದಕ್ಕಾಗಿ ವಿಚ್ಛೇದನ ಕೊಟ್ಟಿದ್ದೇನೆ ಎಂದಿದ್ದಾರೆ.
ಇಷ್ಟು ವರ್ಷ ಯಾರಿಗೂ ಸತ್ಯ ಹೇಳಿರಲಿಲ್ಲ. ಈಗ ಮನಸ್ಸು ನಿರಾಳವಾಗಿದೆ ಎಂದಿದ್ದಾರೆ. ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ವಿಯಾನ್ ಮತ್ತು ಸಮಿಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
VIDEO: ವಿಶ್ವ ದಾಖಲೆ ಸೇರಿತು ಈಕೆಯ ಎಂಟು ಇಂಚು ರೆಪ್ಪೆ- ಹೀಗಾಗಲು ಕಾರಣ ಪರ್ವತದಲ್ಲಿನ ಬುದ್ಧನಂತೆ!

VIDEO: ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ ದಿಢೀರ್‌ ಹೆಚ್ಚಳ: ಪ್ರಧಾನಿ ಇಮ್ರಾನ್‌ಗೆ ಪ್ರತಿಪಕ್ಷಗಳಿಂದ ಭಾರಿ ಮುಜುಗರ

ಶಾಸಕನಿಗೆ ಹಾಕಿದ್ರು ಸೇಬಿನ ಹಾರ: ಕರೊನಾ ಲೆಕ್ಕಿಸದೇ ಹಣ್ಣು ತಿನ್ನಲು ಮುಗಿಬಿದ್ರು ಜನ- ವಿಡಿಯೋ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
