ಮುಂಬೈ:ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ಕುಂದ್ರಾ ಅವರು ಬಹುವರ್ಷಗಳ ನಂತರ ಗುಟ್ಟೊಂದನ್ನು ಬಿಚ್ಚಿಟ್ಟಿದ್ದು, ತಾವು ಮೊದಲ ಪತ್ನಿಯಿಂದ ಏಕೆ ವಿಚ್ಛೇದನ ಪಡೆದದ್ದು ಎಂಬ ಹೇಳಿಕೆ ನೀಡಿದ್ದರು. ಸಂದರ್ಶನವೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಅವರು ಮೊದಲ ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದರು.
2006ರಲ್ಲಿ ಕುಂದ್ರಾ ಅವರು ಕವಿತಾರಿಗೆ ವಿಚ್ಛೇದನ ನೀಡಿದ್ದ ಸಂದರ್ಭದಲ್ಲಿ ಈ ಡಿವೋರ್ಸ್‌ಗೆ ಶಿಲ್ಪಾ ಶೆಟ್ಟಿಯೇ ಕಾರಣ ಎಂದು ಗಂಭೀರವಾಗಿ ಆರೋಪಿಸಿದ್ದರು. ಆದರೆ ಇದೀಗ ಸತ್ಯ ವಿಷಯ ತಿಳಿಸಿದ್ದ ಅವರು, ಜತೆಗಿನ ಸಂಬಂಧ ಮುರಿದುಬೀಳಲು ಶಿಲ್ಪಾ ಕಾರಣವಲ್ಲ, ಬದಲಿಗೆ ಕವಿತಾ ನನ್ನ ಸಹೋದರಿಯ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದನ್ನು ನಮ್ಮ ತಾಯಿ ಕಣ್ಣಾರೇ ಕಂಡಿದ್ದರು. ಹಾಸಿಗೆಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ನಂತರ ಅವರಿಬ್ಬರ ನಡುವಿನ ಮೊಬೈಲ್‌ ಸಂದೇಶಗಳನ್ನು ನೋಡಿದೆ. ಆಗ ಮೋಸ ಮಾಡುವುದು ತಿಳಿದಿದೆ, ಇದಕ್ಕಾಗಿ ವಿಚ್ಛೇದನ ಕೊಟ್ಟಿದ್ದೇನೆ ಎಂದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು.

ಈ ಹೇಳಿಕೆ ನೀಡಿದ ಒಂದು ಗಂಟೆಯಲ್ಲಿಯೇ ಕುಂದ್ರಾ ಅವರ ಎರಡನೆಯ ಪತ್ನಿ ಶಿಲ್ಪಾ ಶೆಟ್ಟಿ ಇನ್​ಸ್ಟಾಗ್ರಾಂನಲ್ಲಿ ಕೆಲವು ಭಾವನಾತ್ಮಕ ಶೇರ್‌ ಮಾಡಿದ್ದರು. ಪುಸ್ತಕದಲ್ಲಿರುವ ಕೆಲವು ಸಾಲುಗಳನ್ನು ಅವರು ಶೇರ್‌ ಮಾಡಿಕೊಂಡಿದ್ದರು. ಆದರೆ ಅದನ್ನು ಡಿಲೀಟ್‌ ಮಾಡಿದ್ದಾರೆ.
ಆದರೆ ಅದರ ಸ್ಕ್ರೀನ್‌ಷಾಟ್‌ ಹರಿದಾಡುತ್ತಿದೆ. ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಪುಸ್ತಕದ ಸಾಲುಗಳು ಹೀಗೆ ಹೇಳುತ್ತವೆ. ‘ಒಳ್ಳೆಯವರಿಗೆ ಬೇಸರವಾದರೆ, ಅವನ ಜತೆ ಇರುವ ಒಳ್ಳೆಯವರು ಕೂಡ ನೋವುಣ್ಣುತ್ತಾರೆ. ಕೆಲವೊಮ್ಮೆ ಒಳ್ಳೆಯವರಿಗೆ ಕೆಟ್ಟದ್ದಾದರೆ ನಾವು ಅದನ್ನು ನೋಡಿದರೂ ಏನೂ ಮಾಡದ ಸ್ಥಿತಿಯಲ್ಲಿ ಇರುತ್ತೇವೆ. ಏಕೆಂದರೆ ಆ ಘಟನೆಗಳು ನಮ್ಮಕೈಮೀರಿ ಹೋಗಿರುತ್ತವೆ ಅಥವಾ ಅವು ನಮಗೆ ಸಂಬಂಧಿಸಿದ್ದು ಆಗಿರುವುದಿಲ್ಲ’ ಎಂದಿದೆ.
ಪುಸ್ತಕದ ಇನ್ನೊಂದು ಹಾಳೆಯಲ್ಲಿರುವ ಬರಹಗಳು ಹೀಗಿವೆ:‘ಒಂದೊಮ್ಮೆ ಒಳ್ಳೆಯ ವ್ಯಕ್ತಿ ಮೇಲೆ ದಾಳಿ ಆದರೆ, ಗಾಯವಾದರೆ ಅಥವಾ ಅವರನ್ನು ಜೈಲಿಗೆ ಹಾಕಿದರೆ ಅವರಿಗೆ ನಾವು ನೀಡುತ್ತಿರುವ ರಕ್ಷಣೆ ಕಡಿಮೆಯಾಗಿದೆ ಎಂದೇ ಅರ್ಥ’ ಎಂದಿದ್ದಾರೆ.
ಇದರ ಒಳಾರ್ಥವೇನು ಎಂದು ಚರ್ಚೆಯಾಗುತ್ತಿರುವ ನಡುವೆಯೇ ಶಿಲ್ಪಾ ಶೆಟ್ಟಿ ಅದನ್ನು ಡಿಲೀಟ್‌ ಮಾಡಿಬಿಟ್ಟಿದ್ದಾರೆ. ಆದರೂ ಅವರ ಅಭಿಮಾನಿಗಳು ನೂರೊಂದು ರೀತಿಯಲ್ಲಿ ಯೋಚನೆ ಶುರು ಮಾಡಿದ್ದಾರೆ. ಶಿಲ್ಪಾ ಯಾವ ಉದ್ದೇಶಕ್ಕೆ ಈ ಪೋಸ್ಟ್ ಮಾಡಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿಲ್ಲ ಎಂದಿದ್ದಾರೆ.
ಏನಿದು ಘಟನೆ? ಇಲ್ಲಿ ಕ್ಲಿಕ್ಕಿಸಿ:ನೋಡಬಾರದ್ದನ್ನು ಅಮ್ಮ ನೋಡಿದಳು- ಅದಕ್ಕಾಗಿ ವಿಚ್ಛೇದನ ಕೊಟ್ಟೆ: ಬಹು ವರ್ಷಗಳ ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ
ಹುಡುಗಿ ಫಿಕ್ಸ್‌ ಆದ್ರೂ ಮದ್ವೆಯಾಕೆ ಮಾಡ್ತಿಲ್ಲ? ಟವರ್‌ ಏರಿ ಕುಳಿತ ವಿಜಯನಗರದ ಕುವರ!

ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twelve =
Remember me
