ಮುಂಬೈ:ಮಹಾರಾಷ್ಟ್ರದ ರಾಜಕೀಯದ ಕುತೂಹಲ ಇನ್ನೂ ತಣ್ಣಗಾಗಿಲ್ಲ. ಯಾವಾಗ ಸರ್ಕಾರ ಪತನವಾಗುವುದೋ, ಯಾವಾಗ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ರಾಜೀನಾಮೆ ಕೊಡುವರೋ ಎಂದು ರೆಬೆಲ್​ ಶಾಸಕರು ಕಾಯುತ್ತಿದ್ದಾರೆ.
ಅದೇ ವೇಳೆ ಕುತೂಹಲದ ಬೆಳವಣಿಗೆಯೊಂದರಲ್ಲಿ ಬುಧವಾರ (ಜೂನ್​ 22) ಮಹಾರಾಷ್ಟ್ರ ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಗುಂಪಿನಿಂದ ಶಾಸಕ ನಿತಿನ್‌ ದೇಶ್‌ಮುಖ್‌ ಹಾಗೂ ಶಾಸಕ ಕೈಲಾಸ್​ ಪಾಟೀಲ್​ ತಪ್ಪಿಸಿಕೊಂಡು ಬಂದಿದ್ದರು. ಸೀದಾ ಉದ್ಧವ್‌ ಠಾಕ್ರೆ ಬಳಿ ಬಂದಿದ್ದ ಇವರು, ತಾವು ಠಾಕ್ರೆ ಪರ ಎಂದು ಹೇಳಿಕೊಂಡಿದ್ದರು.
ಈ ಕುರಿತು ಮಾತನಾಡಿದ್ದ ದೇಶ್​ಮುಖ್​, ನಾನು ಶಿಂಧೆ ಕ್ಯಾಂಪ್‌ನಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನ್ನನ್ನು ಕಿಡ್ನ್ಯಾಪ್‌ ಮಾಡಿಕೊಂಡು ಗುಜರಾತ್‌ನ ಸೂರತ್‌ಗೆ ಕರೆದುಕೊಡು ಹೋಗಿದ್ದರು. ಮಧ್ಯರಾತ್ರಿ ಹೇಗೋ ತಪ್ಪಿಸಿಕೊಂಡು ಬಂದೆ. ನಸುಕಿನ 3 ಗಂಟೆ ವೇಳೆ ರಸ್ತೆ ಬದಿಗೆ ಬಂದು, ವಾಹನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ನೂರಾರು ಪೊಲೀಸರು ಸುತ್ತುವರಿದು ಆಸ್ಪತ್ರೆ ಸೇರಿಸಿದರು. ನನಗೆ ಹೃದಯಾಘಾತ ಆಗಿದೆ ನಾಟಕ ಮಾಡಿ ನನ್ನನ್ನು ಉಪಚರಿಸಿದಂತೆ ನಾಟಕ ಮಾಡಿದರು. ನನಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಅವರು ನನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ತಿಳಿಸಿದ್ದರು.
ಈ ಹೇಳಿಕೆಗೆ ರೆಬೆಲ್​ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್​ ದೇಶ್​ಮುಖ್ ಆರಾಮಾಗಿಯೇ ಇರುವ ಫೋಟೋಗಳು ಬಿಡುಗಡೆಮಾಡಿದ್ದಾರೆ. ದೇಶ್​ಮುಖ್ ವಿಮಾನ ಏರುವ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಫೋಟೋಗಳು ಇವಾಗಿವೆ. ಅದರಲ್ಲಿ ದೇಶ್​ಮುಖ್​ ಅವರು ಸ್ವ ಇಚ್ಛೆಯಿಂದ ಹೋಗುತ್ತಿರುವಂತೆ ಗೋಚರಿಸುತ್ತಿದೆ!
ಈ ಫೋಟೋ ಬಿಡುಗಡೆಯಾಗುತ್ತಲೇ ಮತ್ತೆ ಸ್ಪಷ್ಟನೆ ನೀಡಿರುವ ದೇಶ್​ಮುಖ್​, ನನ್ನನ್ನು ಬಲವಂತವಾಗಿಯೇ ಸೂರತ್​ಗೆ ಕರೆದುಕೊಂಡು ಹೋಗಲಾಗಿತ್ತು. ನಾನು ತಪ್ಪಿಸಿಕೊಂಡು ಓಡಿ ಬರಲು ಯತ್ನಿಸಿದಾಗ ಸೂರತ್​ ಪೊಲೀಸರು ಹಿಡಿದುಕೊಂಡರು. ಇದು ನಿಜ ಎಂದಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಬೆಳವಣಿಗೆ ಎಲ್ಲಿಯವರೆಗೆ ಹೋಗಿ ನಿಲ್ಲುವುದೋ ಕಾದು ನೋಡಬೇಕಿದೆ.
#MaharashtraPoliticalCrisis| After allegations of Shiv Sena MLA Nitin Deshmukh that he was forcibly taken to Surat, rebel leader Eknath Shinde camp releases earlier pictures of Nitin Deshmukh with other rebel MLAspic.twitter.com/VQ6lWuP8cY
— ANI (@ANI)June 23, 2022

ಠಾಕ್ರೆ v/s ಶಿಂಧೆ- ಮತ್ತಷ್ಟು ‘ಮಹಾ’ ಕಗ್ಗಂಟು: ಶಾಸಕರಾಯ್ತು, ಈಗ ಸಂಸದರೂ ಬಂಡಾಯ

‘ಮಹಾ’ ಪತನಕ್ಕೆ ಕ್ಷಣಗಣನೆ? ಶಿಂಧೆ ಬಣದಲ್ಲಿ ಹೆಚ್ಚುತ್ತಿರುವ ಸಂಖ್ಯೆ- ಸೇನೆ ಉರುಳಿಸಲು ಇನ್ನಿಬ್ಬರೇ ಸಾಕು!

ರಾಜೀನಾಮೆ ಕೊಡಲು ಸಿದ್ಧ, ಆದರೆ… ಫೇಸ್​ಬುಕ್​ ಲೈವ್​ನಲ್ಲಿ ಸಿಎಂ ಉದ್ಧವ್​ ಠಾಕ್ರೆ ಹೇಳಿದ್ದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − ten =
Remember me
