ಮುಂಬೈ:ಕಳೆದ ಕೆಲ ದಿನಗಳಿಂದ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದ್ದ ಮಹಾರಾಷ್ಟ್ರ ರಾಜಕೀಯದಲ್ಲಿ ಈಗ ಬಹುದೊಡ್ಡ ಜಯ ಸಾಧಿಸಿದ್ದಾರೆ ಅಧಿಕಾರದ ಗದ್ದುಗೆ ಏರಿರುವ ಏಕನಾಥ್‌ ಶಿಂಧೆ. ಇವರು ಸರ್ಕಾರ ರಚನೆಗೆ ನಿರ್ಣಾಯಕವಾಗಿದ್ದ ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅವರ ಅಧಿಕಾರ ಸೇಫ್‌ ಆಗಿದೆ.
ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ನಿನ್ನೆ ಭಾನುವಾರ ಮತ್ತು ಇಂದು ನಡೆದಿದೆ. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ಸ್ಪೀಕರ್​ ಆಗಿ ನೇಮಕಗೊಂಡಿದ್ದರು. 288 ಸದಸ್ಯ ಬಲದ ವಿಧಾನಸಭೆಯಲ್ಲಿ 164 ಮತಗಳಿಂದ ನಾರ್ವೇಕರ್​ ಆಯ್ಕೆಯಾಗಿದ್ದರು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಕಣದಲ್ಲಿದ್ದರು. ಇವರಿಗೆ ನಿನ್ನೆ 106 ಮತಗಳು ಬಂದಿದ್ದವು.
ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಇಂದು ನಡೆದಿದ್ದು, 164 ಮಂದಿಯ ಬಹುಮತವನ್ನು ಶಿಂಧೆ ಸರ್ಕಾರ ಪಡೆದುಕೊಂಡಿದೆ. 99 ಮಂದಿ ಇವರ ವಿರುದ್ಧ ಮತ ಚಲಾಯಿಸಿದ್ದಾರೆ.
ಈ ನಡುವೆಯೇ ಇನ್ನೊಂದು ವಿಷಯ ಏನೆಂದರೆ, 16 ಶಾಸಕರ ಅನರ್ಹತೆಯ ಅರ್ಜಿಗಳು ವಿಚಾರಣೆಗೆ ಬಾಕಿ ಇದ್ದು, ಅವರನ್ನು ಅಮಾನತುಗೊಳಿಸಲು ಶಿವಸೇನಾ ಮುಖ್ಯ ವಿಪ್ ಸುನಿಲ್ ಪ್ರಭು ಮಾಡಿರುವ ಮನವಿಯ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 11ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. ಅದೇ ದಿನ ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಶಿಂಧೆ ಬಣ ಸಲ್ಲಿಸಿರುವ ಅರ್ಜಿಗಳನ್ನು ಕೂಡ ನ್ಯಾಯಾಲಯ ವಿಚಾರಣೆ ನಡೆಸಲಿದೆ.
ನಾಮಪತ್ರ ಸಲ್ಲಿಸುವ ಒಂದು ಗಂಟೆ ಮೊದಲು ಕಾಂಗ್ರೆಸ್​ ತೊರೆದಿದ್ದ ಮಹಾರಾಷ್ಟ್ರದ ನೂತನ ಸ್ಪೀಕರ್​ ನಾರ್ವೇಕರ್​ ಯಾರು?

ಆಟೋಡ್ರೈವರ್​ನಿಂದ ‘ಮಹಾ’ ಸಿಎಂ ಖುರ್ಚಿಯವರೆಗೆ… ಬಾಳಾಸಾಹೇಬರ ಶಿಷ್ಯನ ಕುತೂಹಲದ ಪಯಣವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
