ಚಂಡೀಗಢ:ಶಿರೋಮಣಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಕಾರಿನ ಗುಂಪೊಂದು ದಾಳಿ ಮಾಡಿರುವ ಘಟನೆ ನಡೆದಿದೆ.
ಪಂಜಾಬ್​ನ ಜಲಾಲಾಬಾದ್​ನಲ್ಲಿ ಈ ಘಟನೆ ಸಂಭವಿಸಿದೆ. ಪಂಜಾಬ್‌ನಲ್ಲಿ ಪುರಸಭೆ ಚುನಾವಣೆ ನಡೆಯುತ್ತಿದ್ದು, ಜಲಾಲಾಬಾದ್‌ನಲ್ಲಿ ಶಿರೋಮಣಿ ಅಕಾಲಿ ದಳ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ಸುಖ್ಬೀರ್ ಸಿಂಗ್ ಬಾದಲ್ ಕೂಡ ಜಬಲ್‌ಪುರ್‌ಗೆ ಆಗಮಿಸಿದ್ದಾರೆ.
ಈ ವೇಳೆ ಗುಂಪೊಂದು ಏಕಾಏಕಿ ಸುಖ್ಬೀರ್ ಸಿಂಗ್ ಬಾದಲ್ ಕಾರಿನ ಮೇಲೆ ದಾಳಿ ಮಾಡಿದೆ. ಈ ವೇಳೆ ಬಾದಲ್ ಅವರನ್ನು ರಕ್ಷಿಸಲು ಮುಂದಾದ ಪಕ್ಷದ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು ನಾಲ್ವರು ಗಾಯಗೊಂಡಿದ್ದಾರೆ. ಇದರ ವಿಡಿಯೋ ಇದೀಗ ವೈರಲ್​ ಆಗಿದೆ. ಬಾದಲ್ ಕಾರು ಸ್ಥಳದಿಂದ ಕದಲದಂತೆ ಎಲ್ಲಾ ದಿಕ್ಕುಗಳಿಂದಲೂ ದಾಳಿ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
#WATCH| Shiromani Akali Dal (SAD) president Sukhbir Singh Badal's vehicle attacked in Jalalabad, Punjab.
(Note: Strong language)pic.twitter.com/kH9HWL9ZPg
— ANI (@ANI)February 2, 2021

ಇನ್ನು ದಾಳಿಯಲ್ಲಿ ಪಕ್ಷದ ಮೂರು ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ಓರ್ವ ಕಾರ್ಯಕರ್ತನಿಗೆ ಗುಂಡು ತಗುಲಿದೆ.ಕಾಂಗ್ರೆಸ್ ಕಾರ್ಯಕರ್ತರೇ ದಾಳಿ ಮಾಡಿದ್ದಾರೆಂದು ಪಕ್ಷ ಗಂಭೀರ ಆರೋಪ ಮಾಡಿದೆ. ದಾಳಿಯ ಹಿಂದೆ ಪೊಲೀಸ್ ಬೆಂಬಲಿತ ಕಾಂಗ್ರೆಸ್ ಗೂಂಡಾಗಳ ಕೈವಾಡವಿದ್ದು ಬಾದಲ್ ಹತ್ಯೆಗೆ ಸಂಚು ಹೂಡಿದ್ದಾರೆ ಪಕ್ಷ ಹೇಳಿದೆ.
ಕಾರಿನತ್ತ ಭಾರೀ ಗಾತ್ರದ ಕಲ್ಲುಗಳನ್ನು ಎಸೆದಿದೆ. ಅಲ್ಲದೇ ಬಾದಲ್ ಕಾರಿನತ್ತ ಗುಂಡುಗಳನ್ನು ಕೂಡ ಹಾರಿಸಲಾಗಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿ ದಳದ ಯುವ ಘಟಕದ ಅಧ್ಯಕ್ಷ ಪರ್ಂಬನ್ಸ್ ಸಿಂಗ್ ರೊಮಾನಾ, ಕಾಂಗ್ರೆಸ್ ಕಾರ್ಯಕರ್ತರು ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಮಾರಣಾಂತಿಕ ದಾಳಿಯ ಯೋಜನೆ ರೂಪಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಸ್ಥಳಕ್ಕೆ ಧಾವಿಸಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಲಾಲಾಬಾದ್ ಎಸ್‌ಎಸ್‌ಪಿ ಹರ್ಜಿತ್ ಸಿಂಗ್, ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
ಮಮ್ಮಿಯ ಬಾಯಲ್ಲಿ ಸಿಕ್ತು ಚಿನ್ನದ ನಾಲಿಗೆ: ಸತ್ತ ಮೇಲೂ ವ್ಯಕ್ತಿ ಮಾತಾಡುತ್ತಾರಂತೆ!

ಮದುವೆಯಾಗಿ ಮೂರು ವರ್ಷಕ್ಕೇ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಂಡಿರುವೆ- ಪರಿಹಾರ ಹೇಳಿ

ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ವೈರಲ್​ ವಿಡಿಯೋ ಇಲ್ಲಿದೆ ನೋಡಿ…

ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

v
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − one =
Remember me
