ಭೋಪಾಲ್:ಇನ್ನೇನು ಪ್ರೇಮಿಗಳ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಷ್ಟೋ ಮಂದಿ ತಾವು ಬಯಸಿದ ಹುಡುಗ- ಹುಡುಗಿಯ ಕನಸು ಕಾಣುತ್ತಿದ್ದು, ಪ್ರೇಮಿಗಳ ದಿನಕ್ಕೆ ಪ್ರಪೋಸ್‌ ಮಾಡಲು ಕಾಯುತ್ತಿದ್ದರೆ, ಇನ್ನು ಕೆಲ ಜೋಡಿಗಳು ಇದಾಗಲೇ ತಾವು ಎಲ್ಲಿ ಭೇಟಿಯಾಗಬೇಕು ಎಂಬ ಬಗ್ಗೆ ಯೋಜನೆ ರೂಪಿಸುತ್ತಿವೆ.
ಇದರ ನಡುವೆಯೇ ಪ್ರೇಮಿಗಳಿಗೆ ಶಾಕ್‌ ಆಗುವಂಥ ಹೇಳಿಕೆಯನ್ನು ಶಿವಸೇನೆ ನೀಡಿದೆ. ಪಾಶ್ಚಿಮಾತ್ಯರಿಂದ ಬಂದಿರುವ ಪ್ರೇಮಿಗಳ ದಿನದಂದು ಇಲ್ಲಸಲ್ಲದ ಅಕ್ರಮಗಳು ನಡೆಯುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿರುವ ಶಿವಸೇನೆಯಂತ ಕೆಲ ಸಂಘಟನೆಗಳು ಪ್ರತಿವರ್ಷವೂ ಈ ದಿನಕ್ಕೆ ಅಡ್ಡಿ ಪಡಿಸುತ್ತಲೇ ಬಂದಿವೆ. ಈ ದಿನದ ಹೆಸರಿನಲ್ಲಿ ಪ್ರೀತಿ, ಪ್ರೇಮ ಎಂದು ಎಡವಟ್ಟು ಮಾಡಿಕೊಳ್ಳುತ್ತಿರುವ ಯುವಕ-ಯುವತಿಯರಿಗೆ ಬುದ್ಧಿ ಕಲಿಸುವುದು ತಮ್ಮ ಉದ್ದೇಶ ಎಂದು ಈ ಸಂಘಟನೆಗಳು ಹೇಳುತ್ತಿವೆ.
ಅದೇ ರೀತಿ, ಈ ಬಾರಿ ಶಿವಸೇನೆಯು ಹೇಳಿಕೆಯೊಂದನ್ನು ನೀಡಿದ್ದು, ವ್ಯಾಲೆಂಟೈನ್ಸ್ ಡೇ ಆಚರಿಸಿದರೆ ಮದುವೆ ಮಾಡಿ ಡೊಳ್ಳು ಕುಣಿತದೊಂದಿಗೆ ಮೆರವಣಿಗೆ ಮಾಡುತ್ತೇವೆ ಎಂದಿದ್ದಾರೆ. ಪ್ರೇಮಿಗಳ ದಿನದ ಹೆಸರಿನಲ್ಲಿ ಜೋಡಿ ಜತೆ ಎಲ್ಲಿಯಾದರೂ ಕಾಣಿಸಿಕೊಂಡರೆ ಅವರ ಮದುವೆ ಮಾಡಿಸಿ ಮೆರವಣಿಗೆ ಮಾಡುವುದು ಗ್ಯಾರೆಂಟಿ ಎಂದು ಶಿವಸೇನೆ ಕಾರ್ಯಕರ್ತರು ಹೇಳಿದ್ದಾರೆ.
ಅಂದಹಾಗೆ ಸದ್ಯ ಈ ರೀತಿ ಮಾಡುವುದು ಭೋಪಾಲ್‌ಗೆ ಮಾತ್ರ ಸೀಮಿತವಾಗಿದೆ. ಅಂದರೆ ಪ್ರೇಮಿಗಳ ದಿನದಂದು ಭೋಪಾಲ್‍ನಲ್ಲಿ ಪ್ರೇಮಿಗಳನ್ನು ತಡೆಯಲು ಶಿವಸೇನೆ ಸಿದ್ಧತೆ ನಡೆಸಿದೆ. ಯಾರಾದರೂ ಪ್ರೇಮಿಗಳು ಪಾರ್ಕ್‍ನಲ್ಲಿ ಕಂಡುಬಂದರೆ, ಲಾಠಿಯಿಂದ ಅವರನ್ನು ದಂಡಿಸುತ್ತೇವೆ. ನಂತರ ಮದುವೆ ಮಾಡಿಸಿ ಮೆರವಣಿಗೆ ಮಾಡುತ್ತೇವೆ ಎಂದಿದ್ದಾರೆ ಕಾರ್ಯಕರ್ತರು.
ಅಷ್ಟೇ ಅಲ್ಲದೇ, ಭೋಪಾಲ್‍ನಲ್ಲಿ ಶಿವಸೇನೆಯು ಪ್ರೇಮಿಗಳ ದಿನದಂದು ಯಾವುದೇ ಕಾರ್ಯಕ್ರಮವನ್ನು ಆಯೋಜಿಸದಂತೆ ಪಬ್, ರೆಸ್ಟೋರೆಂಟ್, ಹೋಟೆಲ್‍ಗಳಿಗೆ ಎಚ್ಚರಿಕೆ ನೀಡಿದ್ದಾರೆ.
VIDEO: ‘ಏಯ್‌… ವಿಡಿಯೋ ಮತ್ ಕರ್…’ ತಲೆಗೆ ಕೇಸರಿ ಶಾಲು ಧರಿಸಿದವರಾರು? ಕಿಚ್ಚು ಹೊತ್ತಿಸಿದ ವೈರಲ್‌ ವಿಡಿಯೋ

ಧಗಧಗ ಹೊತ್ತಿ ಉರಿದ ಬಿಗ್‌ಬಾಸ್‌ ಮನೆ! ಸ್ಥಳಕ್ಕೆ ಧಾವಿಸಿದ ನಾಲ್ಕು ಅಗ್ನಿಶಾಮಕ ವಾಹನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
