ಮೀರತ್‌ (ಉತ್ತರ ಪ್ರದೇಶ):ಮದುವೆಯಾದ ಮೊದಲ ರಾತ್ರಿ ಬಹಳ ಕನಸು ಹೊತ್ತು ಪತ್ನಿಯ ಸಮೀಪ ಬಂದ ಪತಿಯೊಬ್ಬನಿಗೆ ಆಕೆ ಮೊದಲೇ ಗರ್ಭಿಣಿ ಎಂದು ತಿಳಿದರೆ ಹೇಗಿರುತ್ತೆ ಪರಿಸ್ಥಿತಿ ಊಹಿಸಿ! ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಇದೀಗ ಈ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ.
ಮೀರತ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ರಾಜುವಿಗೆ ಪಕ್ಕದ ಊರಿನ ಯುವತಿ ರಾಧಾ (ಇಬ್ಬರ ನಿಜವಾದ ಹೆಸರನ್ನು ಪೊಲೀಸರು ಬಹಿರಂಗಪಡಿಸಲಿಲ್ಲ) ಜತೆ ಮದುವೆ ಮಾಡಲಾಗಿತ್ತು. ಆದರೆ ಅದಾಗಲೇ ಯುವತಿಗೆ ಬೇರೊಬ್ಬನ ಜತೆ ಸಂಬಂಧವಿತ್ತು. ಈ ಸಂಬಂಧದ ಬಗ್ಗೆ ಮನೆಯವರಿಗೆ ತಿಳಿದಿರಲಿಲ್ಲ. ಆದ್ದರಿಂದ ಬೇರೊಬ್ಬ ಯುವಕನನ್ನು ಗೊತ್ತುಮಾಡಿ ಪಾಲಕರು ಮದುವೆ ಮಾಡಿದರು. ಅಲ್ಲಿಯವರೆಗೂ ಯುವತಿ ಬಾಯಿ ಬಿಟ್ಟಿರಲಿಲ್ಲ.
ಮದುವೆಯಾದ ಒಂದು ವಾರದ ನಂತರ ಮೊದಲ ರಾತ್ರಿಯ ಸಂಭ್ರಮಕ್ಕೆ ಸಕಲ ಅಲಂಕಾರ ಮಾಡಲಾಗಿತ್ತು. ರಾಜು ಹಲವಾರು ಕನಸನ್ನು ಹೊತ್ತು ರಾಧಾಳ ಬಳಿ ಹೋಗಿದ್ದಾನೆ. ಇನ್ನೇನು ಆತ ಅವಳ ಬಳಿ ಹೋಗುತ್ತಿದ್ದಂತೆಯೇ ರಾಧಾಳಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ರಾಜು ಹಾಗೂ ಆತನ ಕುಟುಂಬದವರು ವೈದ್ಯರ ಬಳಿ ನವವಧುವನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ಮಾಡಿದಾಗ ಅದಾಗಲೇ ಆಕೆ ಐದು ತಿಂಗಳ ಗರ್ಭಿಣಿ ಎಂದು ತಿಳಿದಿದೆ.
ಇದರಿಂದ ರಾಜು ಹಾಗೂ ಆತನ ಪಾಲಕರಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಅಷ್ಟರಲ್ಲಾಗಲೇ ರಾಧಾಳ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಎರಡೂ ಕುಟುಂಬದವರ ನಡುವೆ ಜಗಳವಾಗಿದೆ. ತಮಗೆ ಮೋಸ ಮಾಡಿರುವುದಾಗಿ ರಾಜು ಕುಟುಂಬದವರು ಹೇಳಿದರೆ, ನನ್ನ ಮಗಳಿಗೆ ನೀವೇ ಏನೋ ಮಾಡಿದ್ದೀರಿ, ಅದಕ್ಕಾಗಿಯೇ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ರಾಧಾಳ ಕುಟುಂಬದವರು ಆವಾಜ್‌ ಹಾಕಿದ್ದಾರೆ. ಇದಾಗಲೇ ಮದುವೆಯಾಗಿ ಒಂದು ವಾರವಾಗಿದ್ದು, ನನ್ನ ಮಗಳಿಗೆ ನೀವು ವರದಕ್ಷಿಣೆ ಕಿರುಕುಳ ನೀಡಿದ್ದೀರಿ. ಆಕೆಗೆ ಯಾರ ಜತೆಯೂ ಸಂಬಂಧವಿರಲಿಲ್ಲ. ಇನ್ನು ಗರ್ಭಿಣಿ ಆಗುವುದು ಹೇಗೆ? ನನ್ನ ಮಗಳಿಗೆ ನೀವೇ ಏನೋ ಮಾಡಿದ್ದೀರಿ ಎಂದು ಅವರ ವಿರುದ್ಧವೇ ಕೇಸ್‌ ಹಾಕುವ ತಯಾರಿ ನಡೆಸಿದರು ರಾಧಾ ಪಾಲಕರು. ಇಷ್ಟೆಲ್ಲಾ ಆಗುವ ವೇಳೆ ರಾಧಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆ ಮಾತ್ರ ತಾನು ಗರ್ಭಿಣಿ ಎಂಬ ಬಗ್ಗೆ ಪಾಲಕರಲ್ಲಿ ಬಾಯಿಬಿಟ್ಟಿರಲಿಲ್ಲ!
ರಾಧಾಳ ಕುಟುಂಬದವರು ಕೇಸ್‌ ಹಾಕಲು ತಯಾರಿ ನಡೆಸುತ್ತಿದ್ದಂತೆಯೇ ಗಾಬರಿಗೊಂಡ ರಾಜು ಕುಟುಂಬಸ್ಥರು ಪೊಲೀಸ್‌ ಠಾಣೆಗೆ ಹೋಗಿ ತಾವೇ ಮೊದಲು ದೂರು ದಾಖಲು ಮಾಡಿದರು. ವಿನಾ ಕಾರಣ ಕುಟುಂಬದ ಜಗಳ ಬೀದಿಗೆ ಬರಬಾರದು ಎಂದು ಸುಮ್ಮನಿದ್ದ ರಾಜು ಕುಟುಂಬದವರಿಗೆ ಈಗ ಬೇರೆ ದಾರಿ ಇರಲಿಲ್ಲ. ರಾಧಾ ಹಾಗೂ ಆಕೆಯ ಪಾಲಕರ ವಿರುದ್ಧ ದೂರು ದಾಖಲು ಮಾಡಿದರು.
ನಂತರ ಪೊಲೀಸರು ರಾಧಾಳ ಬಾಯಿ ಬಿಡಿಸಿದಾಗ ತನಗೆ ಬೇರೊಬ್ಬ ಯುವಕನ ಜತೆ ಸಂಬಂಧ ಇದ್ದು, ತಾನು ಐದು ತಿಂಗಳ ಗರ್ಭಿಣಿ ಎಂದು ಒಪ್ಪಿಕೊಂಡಿದ್ದಾಳೆ. ತನ್ನ ಹೊಟ್ಟೆಯಲ್ಲಿ ಅವಳಿ ಮಕ್ಕಳು ಇರುವ ಬಗ್ಗೆಯೂ ಹೇಳಿದ್ದಾಳೆ. ಈ ಬಗ್ಗೆ ತನ್ನ ಪಾಲಕರಿಗೆ ಹೇಳಿದರೆ ಮಗುವನ್ನು ಎಲ್ಲಿ ತೆಗೆಸಿಬಿಡುತ್ತಾರೋ, ನನ್ನ ಪ್ರಿಯಕರಿಗೆ ಏನಾದರೂ ಹೆಚ್ಚೂ ಕಡಿಮೆ ಮಾಡಿಬಿಡುತ್ತಾರೋ ಎಂದು ಬಾಯಿಬಿಟ್ಟಿರಲಿಲ್ಲ, ಮದುವೆಯಾದ ಮೇಲೆ ಗಂಡನಿಗೆ ಎಲ್ಲಾ ವಿಷಯ ತಿಳಿಸಿ ಪ್ರಿಯಕರನ ಜತೆಗೆ ವಾಪಸ್‌ ಹೋಗೋಣ ಎಂದುಕೊಂಡಿದ್ದೆ. ಆದರೆ ಇಷ್ಟೆಲ್ಲಾ ರಾದ್ಧಾಂತ ಆಗಿಹೋಯಿತು ಎಂದಿದ್ದಾಳೆ!
ಹೆಣ್ಣನ್ನು ಕಂಡ್ರೆ ಆಗದ ಕುಟುಂಬದಲ್ಲಿ ಬೆಳೆದ ನಾನು ಅನ್ಯಧರ್ಮಿಯನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ… ಪ್ಲೀಸ್‌ ದಾರಿ ತೋರಿ ಮೇಡಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 3 =
Remember me
